ETV Bharat / state

ಆರ್.ಆರ್ ನಗರದಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳ ವೀಕ್ಷಣೆ ಮಾಡುತ್ತಿರುವ ಬಿಎಸ್​ವೈ - ವಿವಿಧ ಕಾಮಗಾರಿಗಳನ್ನು ವೀಕ್ಷಣೆ

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಅರ್ಧಕ್ಕೆ ನಿಂತಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.

former-cm-bs-yadiyurappa-visited-rr-nagar
ಆರ್.ಆರ್ ನಗರದಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳ ವೀಕ್ಷಣೆ ಮಾಡುತ್ತಿರುವ ಬಿಎಸ್ವೈ..!
author img

By ETV Bharat Karnataka Team

Published : Nov 9, 2023, 1:42 PM IST

Updated : Nov 9, 2023, 1:57 PM IST

ಆರ್.ಆರ್ ನಗರದಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳ ವೀಕ್ಷಣೆ ಮಾಡುತ್ತಿರುವ ಬಿಎಸ್​ವೈ

ಬೆಂಗಳೂರು : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ಪಡೆದು ಆರಂಭಿಸಿದ್ದ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ಷೇತ್ರದಲ್ಲಿ ಪ್ರವಾಸ ನಡೆಸಿ ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ ಅವರಿಂದ ಅನುದಾನವನ್ನು ಬೇರೆಡೆ ವರ್ಗಾಯಿಸಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಬಿಎಸ್​ವೈ : ಮೊದಲಿಗೆ ರಿಂಗ್ ರಸ್ತೆಯಲ್ಲಿರುವ ಪಿ.ಇ.ಎಸ್‌ ಕಾಲೇಜು ಹತ್ತಿರ ಕೆರೆಕೋಡಿ ಜಂಕ್ಷನ್‌ನಲ್ಲಿ ಅರ್ಧಕ್ಕೆ ನಿಂತಿರುವ ಗ್ರೇಡ್ - ಸಪರೇಟರ್‌ ನಿರ್ಮಾಣ ಕಾಮಗಾರಿಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವೀಕ್ಷಿಸಿದರು. ಈ ವೇಳೆ ಕಾಮಗಾರಿ ಕುರಿತು ವಿವರಣೆ ನೀಡಿದ ಶಾಸಕ ಮುನಿರತ್ನ, ತಾವು ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದು ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯಡಿ ಕತ್ರಿಗುಪ್ಪೆಯಿಂದ ಬರುವ ರಿಂಗ್ ರಸ್ತೆಯಾಗಿದೆ. ಆದರೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.

ನಂತರ ಹೊಸಕೆರೆಹಳ್ಳಿ ಕೆರೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಯಡಿಯೂರಪ್ಪ ವೀಕ್ಷಣೆ ಮಾಡಿದರು. ಕೆರೆ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿರುವ ಕುರಿತು ವಿವರ ನೀಡಿದ ಶಾಸಕ ಮುನಿರತ್ನ, ಹೊಸಕೆರೆಹಳ್ಳಿ ಕೆರೆ ಅಭಿವೃದ್ಧಿ ಮಾಡುತ್ತಿದ್ದೇವೆ. ರಾಜ ಕಾಲುವೆ ನೀರು ನೇರವಾಗಿ ಕೆರೆಗೆ ಸೇರದಂತೆ ಬೇರೆ ಕಡೆ ಹರಿಸಲು ಕ್ರಮ ವಹಿಸಿದ್ದೇವೆ. ಸಂಸ್ಕರಣೆ ಮಾಡಿದ ನೀರನ್ನು ಮಾತ್ರ ಇಲ್ಲಿನ ಕೆರೆಯಲ್ಲಿ ಸಂಗ್ರಹ ಮಾಡಲಿದ್ದೇವೆ. ಕೆರೆ ವ್ಯಾಪ್ತಿಯಲ್ಲಿ ವಾಕಿಂಗ್ ಪಾತ್ ಮಾಡುತ್ತಿದ್ದೇವೆ. ಅದಕ್ಕಾಗಿ ಕೆರೆಯೊಳಗಿನ ಹೂಳು ಎತ್ತಬೇಕು. ಸರಾಗವಾಗಿ ಹೂಳನ್ನು ಹೊರಭಾಗಕ್ಕೆ ಸಾಗಿಸಲು ತಾತ್ಕಾಲಿಕವಾಗಿ ಒಂದು ಬಂಡ್ ಮಾಡಿಕೊಂಡಿದ್ದೇವೆ. ಆದರೆ ಬಂಡ್ ಮಾಡಿದ್ದಕ್ಕೆ ಕೆರೆ ಒಳಗಡೆ ರಸ್ತೆ ಮಾಡುತ್ತಿದ್ದಾರೆ ಎಂದು ಆರೋಪಿಸಿ 8 ಜನರನ್ನು ಅಮಾನತ್ತು ಮಾಡಿದ್ದಾರೆ ಎಂದರು. ಕೆರೆ ಹೂಳೆತ್ತುವುದನ್ನೇ ರಸ್ತೆ ನಿರ್ಮಾಣ ಎಂದು ಬಿಂಬಿಸಿ ಸಂಪೂರ್ಣ ಕೆರೆ ಅಭಿವೃದ್ಧಿ ಕಾಮಗಾರಿಯನ್ನೇ ನಿಲ್ಲಿಸಿದ್ದಾರೆ. ಹೂಳೆತ್ತುವುದಕ್ಕೆ ಕ್ರಿಯಾ ಯೋಜನೆ ಸಿದ್ಧವಾಗಿದೆ. ಕ್ರಿಯಾಯೋಜನೆ ಸಿದ್ಧವಾಗಿರುವ ಕಾಮಗಾರಿಗಳನ್ನು ಸ್ಥಗಿತ ಮಾಡಿದ್ದಾರೆ. ಕೆರೆ ವ್ಯಾಪ್ತಿಯಲ್ಲಿ ಪಾರ್ಕ್ ಮಾಡುವುದಕ್ಕೆ 42 ಕೋಟಿ ಹಣ ನಮ್ಮ ಸರ್ಕಾರದಲ್ಲಿ ಮಂಜೂರು ಮಾಡಲಾಗಿತ್ತು. ಆದರೆ ಅದನ್ನು ಈಗ ಬೇರೆ ಕಡೆ ಡೈವರ್ಟ್ ಮಾಡಿದ್ದಾರೆ ಎಂದು ಹೇಳಿದರು. ಬಳಿಕ ಜವರೆಗೌಡನದೊಡ್ಡಿ ಮುಖಾಂತರ ರಾಜರಾಜೇಶ್ವರಿನಗರ ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಯಡಿಯೂರಪ್ಪ ಬಳಿ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಇಂದು ಇಡೀ ದಿನ ಆರ್.ಆರ್.ನಗರ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅರ್ಧಕ್ಕೆ ನಿಂತ ಕಾಮಗಾರಿಗಳ ವೀಕ್ಷಣೆ ಮಾಡಲಿದ್ದಾರೆ. ರಾಜರಾಜೇಶ್ವರಿನಗರ ಆರ್ಚ್‌ ಬಳಿ ಸಿಗ್ನಲ್‌ ಫ್ರೀ ಕಾರಿಡಾರ್ ಕಾಮಗಾರಿ, ಯುನಿವರ್ಸಿಟಿ ಮುಖಾಂತರ ಉಲ್ಲಾಳ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್‌ ಕಾಮಗಾರಿ, ಮಲ್ಲತಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ, ಶ್ರೀಗಂಧದಕಾವಲು ಕೆರೆ ಅಭಿವೃದ್ಧಿ ಮತ್ತು ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ, ನಾಗರಭಾವಿ ಬಿ.ಡಿ.ಎ ಕಾಂಪ್ಲೆಕ್ಸ್ ಮುಂಭಾಗ ಅನ್ನಪೂರ್ಣೇಶ್ವರಿನಗರ ಗ್ರೇಡ್-ಸಪರೇಟರ್ ನಿರ್ಮಾಣ ಕಾಮಗಾರಿ, ರಿಂಗ್ ರೋಡ್ ನಿಂದ ಕೃಷ್ಣಭವನ ಹೋಟೆಲ್ ಮುಖಾಂತರ ಲಗ್ಗೆರೆ ರಾಕ್ಷಸಿ ಹಳ್ಳದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನ, ಆಟದ ಮೈದಾನ, ಈಜುಕೊಳ ಮತ್ತು ಸರ್ಕಾರಿ ಶಾಲಾ ಕಟ್ಟಡ ಕಾಮಗಾರಿ,ಲಗ್ಗೆರೆ ರಿಂಗ್ ರಸ್ತೆಯಿಂದ ಗೊರಗುಂಟೆಪಾಳ್ಯ ಹೋಗುವ ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿ,ಗೊರಗುಂಟೆಪಾಳ್ಯ ಮಾಡರ್ನ್ ಫ್ಯಾಕ್ಟರಿ ಮುಖಾಂತರ ಜಾಲಹಳ್ಳಿ ಕ್ರಾಸ್ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ಕಾಮಗಾರಿ, ಬಸವೇಶ್ವರ ಬಸ್‌ ಸ್ಟಾಪ್ ಮುಖಾಂತರ ಪ್ಲಾಟಿನಮ್‌ ಸಿಟಿ ಹತ್ತಿರ ಇರುವ ಹೆಚ್.ಎಮ್.ಟಿ ಗ್ರೇಡ್-ಸಪರೇಟರ್ ನಿರ್ಮಾಣ ಕಾಮಗಾರಿ, ಜಾಲಹಳ್ಳಿ ವಿಲೇಜ್‌ನಲ್ಲಿ ಮಾರ್ಕೆಟ್ ಕಟ್ಟಡ ನಿರ್ಮಾಣವಾಗುತ್ತಿರುವ ಕಾಮಗಾರಿ, ಜೆ.ಪಿ ಪಾರ್ಕ್ ಎಲ್.ಸಿ 4ಎ ಹತ್ತಿರ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್‌ ಕಾಮಗಾರಿ, ಜೆ.ಪಿ ಪಾರ್ಕ್‌ ವಾರ್ಡ್‌ನಲ್ಲಿ ಪಾರ್ಕ್‌, ಆಟದ ಮೈದಾನ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿ, ಜೆ.ಪಿ ಪಾರ್ಕ್‌ ವಾರ್ಡ್‌ನ ಮಿನುಗುತಾರೆ ಕಲ್ಪನ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡ ಮತ್ತು ವೃದ್ಧಾಶ್ರಮ ಕಟ್ಟಡ ಕಾಮಗಾರಿ,ಬಿ.ಕೆ ನಗರದಲ್ಲಿರುವ ಜಿ+3 ಇ.ಡಬ್ಲ್ಯೂಎಸ್ ಮನೆಗಳ ಕಟ್ಟಡ ನಿರ್ಮಾಣ ಕಾಮಗಾರಿ, ಯಶವಂತಪುರ ಕೋವಿಡ್ ಆಸ್ಪತ್ರೆ ಕಟ್ಟಡದ ವೀಕ್ಷಣೆ ಮಾಡಲಿದ್ದಾರೆ.

ಪಟಾಕಿ ಸಿಡಿಸಿ ಸ್ವಾಗತ : ಹೊಸಕೆರೆಹಳ್ಳಿ ಕೆರೆ ವೀಕ್ಷಣೆಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಪಟಾಕಿ ಸಿಡಿಸಿ ಸ್ವಾಗತ ಮಾಡಲಾಯಿತು. ಬರ ಹಾಗು ಅರ್ಧಕ್ಕೆ ನಿಂತ ಕಾಮಗಾರಿ ವೀಕ್ಷಣೆಗೆ ಆಗಮಿಸಿದ ವೇಳೆ ಈ ರೀತಿಯ ಸ್ವಾಗತ ಬೇಡ ಎಂದು ಜಯಘೋಷಕ್ಕೆ ಯಡಿಯೂರಪ್ಪ ಬ್ರೇಕ್ ಹಾಕಿ ಕಾಮಗಾರಿಗಳ ವೀಕ್ಷಣೆ ಮಾಡಿದರು.

ಇದನ್ನೂ ಓದಿ : ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕೀಯದಿಂದ ಸದಾನಂದಗೌಡ ನಿವೃತ್ತಿ: ಬಿ ಎಸ್​ ಯಡಿಯೂರಪ್ಪ

Last Updated : Nov 9, 2023, 1:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.