ETV Bharat / state

D K Shivakumar: ಅಲೆಮಾರಿ ಜನಾಂಗದ ಸ್ಥಿತಿಗತಿ ಅಧ್ಯಯನಕ್ಕೆ ಆಯೋಗ ರಚನೆ: ಡಿಸಿಎಂ ಡಿಕೆ ಶಿವಕುಮಾರ್ - ನಿಗಮ ಮಂಡಳಿ ರಚನೆ ಕುರಿತು ನಿರ್ಧಾರ

ಆಯೋಗದ ವರದಿ ಬಂದ ಬಳಿಕ ನಿಗಮ ಮಂಡಳಿ ರಚನೆ ಕುರಿತು ನಿರ್ಧಾರ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ತಿಳಿಸಿದ್ದಾರೆ.

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್​
author img

By

Published : Jun 12, 2023, 3:46 PM IST

ಡಿಸಿಎಂ ಡಿ ಕೆ ಶಿವಕುಮಾರ್​

ಬೆಂಗಳೂರು: ಅಲೆಮಾರಿ ಜನಾಂಗದ ಸ್ಥಿತಿಗತಿ ಕುರಿತು ಸಮಗ್ರ ಅಧ್ಯಯನ ನಡೆಸಲು ಆಯೋಗ ರಚಿಸಲಿದ್ದು, ಅಧ್ಯಯನ ವರದಿ ಪಡೆದು ನಂತರ ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚನೆ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದ ಕುಮಾರ್ ಪಾರ್ಕ್​ನಲ್ಲಿರುವ ಕುಮಾರಕೃಪಾ ಅತಿಥಿಗೃಹದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಚಿಂತಕ ಸಿ ಎಸ್ ದ್ವಾರಕನಾಥ್ ನೇತೃತ್ವದಲ್ಲಿ ಅಲೆಮಾರಿ ಸಮುದಾಯಗಳ ಮುಖಂಡರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಅಲೆಮಾರಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ತುಳಿತಕ್ಕೊಳಗಾದ ಸಮುದಾಯಕ್ಕೆ ನೆರವಾಗಬೇಕು ಎನ್ನುವ ಆಯಾಮದಲ್ಲಿ ಹಲವು ಬೇಡಿಕೆಗಳನ್ನು ಒಳಗೊಂಡ ತಮ್ಮ ಅಹವಾಲು ಸಲ್ಲಿಕೆ ಮಾಡಿದರು.

ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 23 ಅಲೆಮಾರಿ ಜನಾಂಗಕ್ಕೆ ಸೇರಿದ ಸಮುದಾಯಗಳ ಸಮಸ್ಯೆ ಬಗ್ಗೆ ಇಂದಿನ ಭೇಟಿ ವೇಳೆ ನಮ್ಮ ಮುಂದಿಟ್ಟಿದ್ದಾರೆ. ಕರಡಿ ಸಾಕುವವರು, ಮಾದಪ್ಪನ ಬೆಟ್ಟದಲ್ಲಿ ಪೂಜೆ ಮಾಡುವವರು, ಜಂಗಮರು, ಪಿಂಗಿ ಸಮುದಾಯ ಸೇರಿ ಅನೇಕ ಸಮುದಾಯದವರು ಪ್ರಮಾಣಪತ್ರ ಇಲ್ಲದವರು, ಗುರುತಿಲ್ಲದವರನ್ನು ಗುರುತಿಸಬೇಕು. ಅದಕ್ಕಾಗಿ ಆಯೋಗ ರಚಿಸಬೇಕು ಎಂದಿದ್ದಾರೆ. ಯಾರಿಗೆ ಸರಿಯಾದ ಗುರುತು ಇಲ್ಲವೋ ಅವರನ್ನು ಗುರುತಿಸಬೇಕು ಎನ್ನುವ ಬೇಡಿಕೆ ಪರಿಗಣಿಸಿ ಈ ಸಂಬಂಧ ಅಗತ್ಯ ಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಸಂಪರ್ಕಿಸುತ್ತೇನೆ. ಯಾರು ತುಳಿತಕ್ಕೆ ಒಳಗಾಗಿದ್ದಾರೋ? ಅತಿ ಕೆಳ ಸಮುದಾಯ ಇದೆಯೋ ಅವರಿಗೆ ಸರಿಯಾದ ಗುರುತು ನೀಡಬೇಕಿದೆ ಇದು ನಮ್ಮ ಪಕ್ಷದ ಸಿದ್ಧಾಂತವೂ ಆಗಿದೆ. ಅವರಿಗೆ ಸರಿಯಾದ ನ್ಯಾಯ ಕೊಡುವ ಕೆಲಸ ಮಾಡಲಿದ್ದೇನೆ ಎಂದರು.

ತಕ್ಷಣವೇ ನಿಗಮ ಮಂಡಳಿ ರಚನೆ ಮಾಡುವ ಚಿಂತನೆ ನಡೆಸಲ್ಲ, ಆಯೋಗವನ್ನು ಮೊದಲು ರಚನೆ ಮಾಡಲಿದ್ದೇವೆ. ಅಲೆಮಾರಿ ಜನಾಂಗದ ಸ್ಥಿತಿಗತಿ ಕುರಿತು ಪರಿಶೀಲನೆ ಮಾಡಿ ಅಧ್ಯಯನ ನಡೆಸುವ ಕೆಲಸ ಮಾಡಲಿದ್ದೇವೆ. ಕೇವಲ ನಿಗಮ ಮಂಡಳಿಯಿಂದ ಸಮಸ್ಯೆ ಪರಿಹಾರ ಆಗಲ್ಲ. ಮೊದಲು ಅವರಿಗೆ ರಕ್ಷಣೆ ಯಾವ ರೀತಿ ಮಾಡಬೇಕು ಎನ್ನುವುದನ್ನು ನೋಡುತ್ತೇವೆ. ನಂತರವೇ ಮುಂದಿನ ನಿರ್ಧಾರಕ್ಕೆ ಬರಲಿದ್ದೇವೆ ಎಂದರು.

ನಿಷ್ಕ್ರಿಯ ನಿಗಮ ಮಂಡಳಿಗಳನ್ನು ಸದ್ಯ ಬಂದ್ ಮಾಡಲ್ಲ. ಈಗಾಗಲೇ ಬಜೆಟ್​ನಲ್ಲಿ ಎಲ್ಲಾ ನಿಗಮ ಮಂಡಳಿಗಳಿಗೂ ಹಣ ಹಂಚಿಕೆ ಆಗಿದೆ. ಮುಂದಿನ ಬಜೆಟ್ ವೇಳೆಗೆ ನಮ್ಮ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಯುಕ್ತ ನಿಗಮ ಮಂಡಳಿಗಳ ಕುರಿತು ನಿರ್ಧಾರ ಮಾಡುತ್ತಾರೆ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್​ಎಸ್​ಎಸ್ ಒಡೆತನದ ಶಿಕ್ಷಣ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿರುವ ಸರ್ಕಾರಿ ಭೂಮಿ ವಾಪಸ್ಸು ಪಡೆಯುವ ವಿಚಾರದ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದ್ದಾರೆ. ನಮ್ಮ ರೆವಿನ್ಯೂ ಮಿನಿಸ್ಟರ್ ಸಮರ್ಥರಿದ್ದಾರೆ. ಅವರೇ ಸೂಕ್ತ ನಿರ್ಧಾರ ಮಾಡುತ್ತಾರೆ ಎಂದು ಆರ್​ಎಸ್​ಎಸ್ ಬಗ್ಗೆ ಮಾತನಾಡಲು ಡಿಸಿಎಂ ಡಿಕೆಶಿ ಹಿಂಜರಿದರು.

ಇದನ್ನೂ ಓದಿ: ವೀಕೆಂಡ್​ ವಿತ್​ ರಮೇಶ್​: ಸಾಧಕರ ಕುರ್ಚಿ ಏರಿದ ಡಿಸಿಎಂ ಡಿಕೆಶಿ: ಸಿಎಂ ಸಿದ್ದರಾಮಯ್ಯ ಹೀಗಂದ್ರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.