ಬೆಂಗಳೂರು : ಕಳೆದ 9 ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.
ಸುಮಾರು 15 ವರ್ಷದ ಗಂಡು ಚಿರತೆ ಇದಾಗಿದ್ದು, ಇದು ಬನ್ನೇರುಘಟ್ಟ ಅಭಯಾರಣ್ಯದಿಂದ ಆಹಾರ ಅರಿಸಿ ಬಂದಿತ್ತು. ಚಿರತೆಯನ್ನು ಕಂಡು ಕಂಗಾಲಾದ ಜನತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದರು.
ಓದಿ: 9 ದಿನ ಬೇಗೂರು-ಹುಳಿಮಾವು ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ
ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿದಿದ್ದು, ಅರಣ್ಯಕ್ಕೆ ವಾಪಸ್ ಬಿಡಲು ತಯಾರಿ ನಡೆಸಿದ್ದಾರೆ.