ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಕೊಲೆ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಸಂತೋಷ್(21) ಕಾಲಿಗೆ ಗುಂಡು ತಗುಲಿದೆ.
![Firing on accused santhosh by bangalore City Police](https://etvbharatimages.akamaized.net/etvbharat/prod-images/10553283_aaaa.jpg)
ರಾಜಗೋಪಾಲನಗರದ ಜಿ.ಕೆ. ಡಬ್ಲ್ಯೂ ಲೇಔಟ್ನಲ್ಲಿ ಫೈರಿಂಗ್ ನಡೆದಿದ್ದು, ಸಂತೋಷ್ ಅದೇ ಬಡಾವಣೆಯ ರೌಡಿಶೀಟರ್ ಆಗಿದ್ದ ಎಂದು ತಿಳಿದು ಬಂದಿದೆ. ಇದೇ ಜ. 9ರಂದು ಶ್ರೀನಿವಾಸ್ ಅಲಿಯಾಸ್ ಕರಿ ಸೀನನ ಕೊಲೆ ನಡೆದಿದ್ದು, ಸಂತೋಷ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಹಾಡಹಹಗಲೇ ರಾಜಗೋಪಾಲನಗರದ ಕಸ್ತೂರಿ ನಗರದಲ್ಲಿ ಆರೋಪಿಗಳು ಹತ್ಯೆಗೈದಿದ್ದರು.
ಈ ಸುದ್ದಿಯನ್ನೂ ಓದಿ: ಟ್ರಕ್ ಮತ್ತು ಪಿಕ್ ಅಪ್ ವಾಹನ ಮುಖಾಮುಖಿ ಡಿಕ್ಕಿ: 6 ಮಂದಿ ದುರ್ಮರಣ
ಕೊಲೆ ಪ್ರಕರಣದ ಆರೋಪಿ ಸಂತೋಷ್ ಬಂಧನಕ್ಕೆ ತೆರಳಿದ್ದ ವೇಳೆ ಫೈರಿಂಗ್ ನಡೆದಿದೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಸಂತೋಷ್ ಕಾಲಿಗೆ ಗುಂಡು ಹಾರಿಸಲಾಗಿದೆ. ಪಿಎಸ್ಐ ಹನುಮಂತ ಹಾದಿಮನಿ ಅವರು ಗುಂಡು ಹಾರಿಸಿದ್ದಾರೆ.