ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಆಕಸ್ಮಿಕ ಅಗ್ನಿ ಅವಘಡಗಳನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಕೊರೊನಾ ನಂತರ ಚೇತರಿಕೆ ಕಾಣುವುದೇ ಕಷ್ಟವಾಗುವ ಸಮಯದಲ್ಲಿ ನೌಕರರ ಸುರಕ್ಷತೆಗೂ ಕೂಡಾ ಸ್ವಲ್ಪಮಟ್ಟಿನ ಗಮನವನ್ನು ಉದ್ಯಮಗಳು ನೀಡಬೇಕಿವೆ. ಸರ್ಕಾರವೂ ಕೂಡಾ ಕೈಗಾರಿಕೆಗಳ ರಕ್ಷಣೆಗೆ ಬೇಕಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ.
ಕೈಗಾರಿಕೆಗಳು ತಮ್ಮಲ್ಲಿನ ನೌಕರರ ಸುಕರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತವೆ. ಪ್ರತಿಯೊಂದು ಹಂತದಲ್ಲೂ ಕೂಡಾ ನೌಕರರ ಸುರಕ್ಷತೆಗೆ ಆದ್ಯತೆ ನೀಡುತ್ತವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರೋ ಕೈಗಾರಿಕೆಗಳಲ್ಲಿ ಆಗಾಗ ಅಗ್ನಿ ಅನಾಹುತಗಳು ಸಂಭವಿಸ್ತಿವೆ. ಮೆಗಾ ಮೆಡಿಕಲ್ ಸ್ಟೋರ್ನಲ್ಲಿ ಸಂಭವಿಸಿದ್ದು ಅತಿ ದೊಡ್ಡ ದುರಂತ.
ನಷ್ಟವಾಗಿದ್ದು 15 ಲಕ್ಷ ರೂಪಾಯಿ. ಅದಲ್ಲದೇ ಏಷ್ಯನ್ ಪೈಂಟ್ಸ್, ಹುಂಡೈ ಫ್ಯಾಕ್ಟರಿ, ಜುಬಿಲಿಯಂಟ್ನಲ್ಲೂ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ದಳಗಳು ಯಶಸ್ವಿಯಾಗಿ ಬೆಂಕಿ ನಂದಿಸಿ, ಅನಾಹುತ ತಡೆದಿವೆ. ಮೈಸೂರಿನಲ್ಲಿ ಇರೋದು ನಾಲ್ಕು ಅಗ್ನಿ ಶಾಮಕ ಠಾಣೆಗಳು. ಲಾಕ್ಡೌನ್ ಜಾರಿಯಾಗಿದ್ರಿಂದ ಈ ಬಾರಿ ಕಡಿಮೆ ಅಗ್ನಿ ಅನಾಹುತ ನಡೆದಿದ್ದು, ಬೇರೆ ವೇಳೆ ಇವುಗಳ ಸಂಖ್ಯೆ ಜಾಸ್ತಿನೇ ಇರುತ್ತಿತ್ತು. ಮೈಸೂರಿನಲ್ಲಿ ಒಟ್ಟು ನಾಲ್ಕು ಅಗ್ನಿಶಾಮಕ ಠಾಣೆಗಳು ಇವೆ. ಸರಸ್ವತಿಪುರಂ, ಬನ್ನಿಮಂಟಪ, ಹೆಬ್ಬಾಳ, ಆರ್.ಬಿ.ಐನಲ್ಲಿ ಅಗ್ನಿಶಾಮಕ ಠಾಣೆಗಳಿದ್ದು, 218 ಬಾರಿ ಫೈಯರ್ ಕಾಲ್ ಆಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ಮಾಹಿತಿ ನೀಡಿದ್ದಾರೆ.
ಮೈಸೂರಿನದ್ದು ಒಂದು ಕತೆಯಾದ್ರೆ ಗಣಿನಾಡು ಬಳ್ಳಾರಿಯದ್ದು ಮತ್ತೊಂದು ಕತೆ. ಇಲ್ಲಿನ ಕೈಗಾರಿಕೆಗಳಲ್ಲಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನೇ ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ದೇಗುವ ರಸ್ತೆಯಲ್ಲಿರೋ ಅಗ್ನಿ ಶಾಮಕ ದಳ ಸುಮಾರು 5 ಕಿಲೋಮೀಟರ್ ದೂರ ಇರೋ ಕೈಗಾರಿಕಾ ಘಟಕಗಳ ಬಳಿ ಹೋಗ್ಬೇಕಾದ್ರೇನೆ ಎಷ್ಟೋ ಅವಘಡಗಳು ಜರುಗಿ ಹೋಗಿರುತ್ತವೆ.
ಇಲ್ಲಿನ ಕಾಟನ್ ಘಟಕಗಳಲ್ಲೇ ಅತಿ ಹೆಚ್ಚು ಅಗ್ನಿ ಅನಾಹುತ ಸಂಭವಿಸುತ್ತವೆ. 2013 ಹಾಗೂ 2014ರಲ್ಲಿ ಎರಡು ಕೋಲ್ಡ್ ಸ್ಟೋರೇಜ್ನಲ್ಲಿ ನಡೆದ ದುರಂತದಿಂದಾಗಿ 30 ಕೋಟಿ ರೂಪಾಯಿ ನಷ್ಟ ಆಗಿದ್ದು ಬಿಟ್ರೆ ಅಷ್ಟು ದೊಡ್ಡ ಅವಘಡ ಸಂಭವಿಸಿಲ್ಲ ಅನ್ನೋದು ಖುಷಿ ವಿಚಾರ ಎಂಬುದು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ತಿಮ್ಮಾರೆಡ್ಡಿ ಹೇಳುವ ಮಾತು.