ಬೆಂಗಳೂರು: ಲಾಕ್ಡೌನ್ ಉಲ್ಲಂಘಿಸಿ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ ಸಂಬಂಧಿಸಿದಂತೆ ಸದ್ಯ ಹೈಗೌಂಡ್ಸ್ ಸಂಚಾರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
KA51 MJ 2481 ಜಾಗ್ವಾರ್ ಕಾರಿನ ಸಂಖ್ಯೆ ಹಾಕಿ ಎಫ್ ಐಆರ್ ದಾಖಲಿಸಲಾಗಿದೆ.
ನಟಿ ಶರ್ಮಿಳಾ ಮಾಂಡ್ರೆ ಮತ್ತು ಲೋಕೇಶ್ ಇಬ್ಬರನ್ನೂ ಗಾಯಾಳು ಎಂದು ನಮೂದು ಮಾಡಿ ಸೆಕ್ಷನ್ 279 ಅತಿವೇಗ , ಅಜಾಗರುಕತೆ, 134(b) ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಮುಚ್ಚಿಟ್ಟಿರುವುದು, ಅಪಘಾತದಲ್ಲಿ ಗಾಯಾವಾಗುವುದನ್ನ ಮುಚ್ಚಿಡಲು ಪ್ರಯತ್ನ, ಜಾಲಿರೈಡ್ ಶಂಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮತ್ತೊಂದೆಡೆ ಘಟನೆ ನಡೆದ ನಂತರ ನಟಿ ಖಾಸಗಿ ಆಸ್ಪತ್ರೆಗೆ ತೆರಳಿ, ಅಪಘಾತವಾದ ನಿಜವಾದ ಸ್ಥಳದ ಬಗ್ಗೆ ಹೇಳದೇ, ಜಯನಗರದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಅವಘಡ ಸಂಭವಿಸಿದ್ದಾಗಿ ತಿಳಿಸಿದ್ದರು. ಇದರಿಂದ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ ಗಾಯಾಳುವನ್ನು ಚಿಕಿತ್ಸೆಗೊಳಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಸದ್ಯ ಶರ್ಮಿಳಾ ಮಾಂಡ್ರೆ ನಡೆ ಬಹಳಷ್ಟು ಅನುಮಾನ ಇದ್ದು ಪೊಲಿಸರು ತನಿಖೆ ಮುಂದುವರೆಸಿದ್ದಾರೆ.
ಏನಿದು ಘಟನೆ?
ಶನಿವಾರ ನಸುಕಿನ ಜಾವ ಸುಮಾರು ಮೂರುಗಂಟೆಗೆ ನಿಷೇಧಾಜ್ಞೆ ಉಲ್ಲಂಘನೆ ಮಾಡಿ ಕಾರಿನಲ್ಲಿ ನಟಿ ಹಾಗೂ ಇತರೆ ಸ್ನೇಹಿತರು ಪಾರ್ಟಿ ಮಾಡಿ ಹೈಗ್ರೌಂಡ್ ಸಂಚಾರ ಠಾಣಾ ವ್ಯಾಪ್ತಿಯ ವಸಂತನಗರದ ಕೆಳ ಸೇತುವೆ ಬಳಿ ಅಪಘಾತ ಮಾಡಿಕೊಂಡಿದ್ದರು.