ETV Bharat / state

ಹುಟ್ಟುಹಬ್ಬ ಆಚರಣೆ ವೇಳೆ ಪೇದೆಗೆ ಹಲ್ಲೆ.. ದರ್ಶನ್‌ ಅಭಿಮಾನಿಗಳ ವಿರುದ್ಧ ಎಫ್​ಐಆರ್.. - ದರ್ಶನ್‌ ಅಭಿಮಾನಿಗಳ ವಿರುದ್ಧ ಎಫ್​ಐಆರ್

ಮತ್ತೊಂದೆಡೆ ಭದ್ರತೆಗೆಂದು ನಿಯೋಜಿಸಿದ್ದ ಜ್ಞಾನಭಾರತಿ ಠಾಣೆಯ ಪೇದೆ ದೇವರಾಜ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ವೇಳೆ ಪೇದೆಯ ಕಣ್ಣು, ತಲೆ, ಹಣೆಗೆ ಗಾಯವಾಗಿತ್ತು. ಹೀಗಾಗಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದರ್ಶನ್‌ ಅಭಿಮಾನಿಗಳ ವಿರುದ್ಧ ಎಫ್​ಐಆರ್, FIR against Darshan Fans in Bangalore
ಹಲ್ಲೆಯಾದ ಪೇದೆ
author img

By

Published : Feb 18, 2020, 12:21 PM IST

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹುಟ್ಟುಹಬ್ಬದ ವೇಳೆ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಅಭಿಮಾನಿಗಳು ಹಲ್ಲೆ ಮಾಡಿದ್ದಾರೆಂದು ಆರ್​ಆರ್‌ನಗರ ಪೊಲೀಸ್ ಠಾಣೆಯಲ್ಲಿ ಪೇದೆ ನೀಡಿರುವ ದೂರಿನನ್ವಯ ಕೆಲ ಅಭಿಮಾನಿಗಳನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ‌ಮುಂದುವರೆಸಿದ್ದಾರೆ.

ಆರ್​ಆರ್‌ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಐಡಿಯಲ್ಸ್ ಹೋಮ್ಸ್ ಬಳಿ ದರ್ಶನ್ ಮನೆ ಇದೆ. ಶನಿವಾರ ರಾತ್ರಿ ಸಾವಿರಾರು ಅಭಿಮಾನಿಗಳು ದರ್ಶನ್ ಜನ್ಮದಿನ ಆಚರಿಸಲು ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳ ಕೂಗಾಟ, ಗದ್ದಲದಿಂದ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆಯುಂಟಾಗಿತ್ತು. ಮತ್ತೊಂದೆಡೆ ಭದ್ರತೆಗೆಂದು ನಿಯೋಜಿಸಿದ್ದ ಜ್ಞಾನಭಾರತಿ ಠಾಣೆಯ ಪೇದೆ ದೇವರಾಜ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ವೇಳೆ ಪೇದೆಯ ಕಣ್ಣು, ತಲೆ, ಹಣೆಗೆ ಗಾಯವಾಗಿತ್ತು. ಹೀಗಾಗಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಪೇದೆ ದೇವರಾಜ್ ಆರ್​ಆರ್‌ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ದರ್ಶನ್ ಅಭಿಮಾನಿಗಳು ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿ‌ ಕೆಲವರನ್ನ ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.