ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘಿಸಿ, ಹೆಲ್ಮೆಟ್ ಧರಿಸದೇ ಬೈಕಿನಲ್ಲಿ ಸಂಚರಿಸುತ್ತಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರಿಗೆ ದಂಡ ವಿಧಿಸಲಾಗಿದೆ. ಇತ್ತೀಚಿಗೆ ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯ ಎಂ.ಜಿ ರಸ್ತೆಯಲ್ಲಿ ಸಹೋದ್ಯೋಗಿಯೊಂದಿಗೆ ಬೈಕಿನಲ್ಲಿ ಹಿಂಬದಿ ಕುಳಿತ ಸಬ್ ಇನ್ಸ್‌ಪೆಕ್ಟರ್ ಹೆಲ್ಮೆಟ್ ಧರಿಸದೇ ಸಂಚರಿಸುತ್ತಿದ್ದರು.
-
ಸ್ವಿಗ್ಗಿ, ಜೊಮಾಟೋ, ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರ ಸಂಚಾರ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ?@DgpKarnataka @blrcitytraffic @cparktrafficps pic.twitter.com/Bl3h7thOrk
— KGM Gowda (@KGManjegowda) May 16, 2023 " class="align-text-top noRightClick twitterSection" data="
">ಸ್ವಿಗ್ಗಿ, ಜೊಮಾಟೋ, ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರ ಸಂಚಾರ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ?@DgpKarnataka @blrcitytraffic @cparktrafficps pic.twitter.com/Bl3h7thOrk
— KGM Gowda (@KGManjegowda) May 16, 2023ಸ್ವಿಗ್ಗಿ, ಜೊಮಾಟೋ, ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರ ಸಂಚಾರ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ?@DgpKarnataka @blrcitytraffic @cparktrafficps pic.twitter.com/Bl3h7thOrk
— KGM Gowda (@KGManjegowda) May 16, 2023
ಸಂಚಾರ ಉಲ್ಲಂಘನೆಯನ್ನು ವಿಡಿಯೋ ಮಾಡಿದ್ದ ಟ್ವಿಟ್ಟರ್ ಬಳಕೆದಾರರೊಬ್ಬರು, 'ಸ್ವಿಗ್ಗಿ, ಜೊಮ್ಯಾಟೊ ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರದ ಸಂಚಾರಿ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ' ಎಂದು ಟ್ವೀಟ್ ಮಾಡುವ ಮೂಲಕ ಖಾರವಾಗಿ ಪ್ರಶ್ನಿಸಿದ್ದರು. ಟ್ವಿಟರ್ ನಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ದಂಡ ವಿಧಿಸಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ರಜೆ ಅರ್ಜಿ ಸಲ್ಲಿಸಿ ಶಾಲೆಯಿಂದ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹರಿದ ಟಿಪ್ಪರ್.. ಬಾಲಕ ಸ್ಥಳದಲ್ಲೇ ಸಾವು