ETV Bharat / state

ಬೆಂಗಳೂರಲ್ಲಿ ಮರ್ಯಾದಾ ಹತ್ಯೆ.. ಪ್ರಿಯಕರನ ಜೊತೆ ಓಡಿ ಹೋಗಿದ್ದ ಪುತ್ರಿಯನ್ನೇ ಕೊಂದ ತಂದೆ - Bengaluru murder case

ಪ್ರಿಯಕರನ ಜೊತೆ ಓಡಿ ಹೋಗಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

father-killed-his-daughter-in-bengaluru
ಬೆಂಗಳೂರಲ್ಲಿ ಮರ್ಯಾದಾ ಹತ್ಯೆ.. ಪ್ರಿಯಕರನ ಜೊತೆ ಓಡಿ ಹೋಗಿದ್ದ ಪುತ್ರಿಯನ್ನೇ ಕೊಂದ ತಂದೆ
author img

By ETV Bharat Karnataka Team

Published : Oct 22, 2023, 10:58 PM IST

ಬೆಂಗಳೂರು: ಪ್ರಿಯಕರನ ಜೊತೆ ಓಡಿ ಹೋಗಿದ್ದ ಪುತ್ರಿಯನ್ನು ತಂದೆಯೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ಮೈಸೂರಿನ ಹೆಚ್.ಡಿ.ಕೋಟೆ ಮೂಲದ ಪಲ್ಲವಿ ಕೊಲೆಯಾದ ಯುವತಿ. ಕೃತ್ಯ ಎಸಗಿದ ಆಕೆಯ ತಂದೆ ಗಣೇಶ್ ಎಂಬಾತನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರದ ಡಾಕ್ಟರ್ಸ್ ಲೇಔಟ್‌ನಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಪ್ರಕರಣದ ವಿವರ: ಹೆಚ್.ಡಿ.ಕೋಟೆಯ ರೈತ ಗಣೇಶ್ ಮತ್ತು ಶಾರದಮ್ಮ ದಂಪತಿಯ ಪುತ್ರಿ ಪಲ್ಲವಿ ಮನೆ ಸಮೀಪದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಕಾಲೇಜಿನ ಯುವಕನೊಬ್ಬ ಪರಿಚಯವಾಗಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಗಣೇಶ್, ಪುತ್ರಿಗೆ ಬುದ್ದಿವಾದ ಹೇಳಿದ್ದ. ಅಲ್ಲದೆ, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸುವ ಹಾಗೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ. ಇದರಿಂದ ಆತಂಕಗೊಂಡ ಪಲ್ಲವಿ, ಇತ್ತೀಚೆಗೆ ಯುವಕನ ಜೊತೆ ಓಡಿ ಹೋಗಿದ್ದಳು.

ಬಳಿಕ ಆಕೆಯನ್ನು ಸಂಬಂಧಿಕರ ಸಹಾಯದಿಂದ ಪತ್ತೆ ಹಚ್ಚಿ ಮನೆಗೆ ಕರೆತಂದು ವ್ಯಾಸಂಗ ಮೊಟಕುಗೊಳಿಸಿದ್ದರು. ಅಲ್ಲದೆ, ಪರಪ್ಪನ ಅಗ್ರಹಾರದ ಡಾಕ್ಟರ್ಸ್ ಕಾಲೋನಿಯಲ್ಲಿ ವಾಸವಾಗಿದ್ದ ತನ್ನ ನಾದಿನಿ ಗೀತಾ ಮನೆಯಲ್ಲಿ ಪುತ್ರಿಯನ್ನು ಇರಿಸಿದ್ದರು. ಆದರೆ, ಮತ್ತೆ ಯುವಕನನ್ನು ಸಂಪರ್ಕಿಸಿದ್ದ ಪಲ್ಲವಿ, ಅ. 14ರಂದು ಚಿಕ್ಕಮನ ಮನೆಯಿಂದ ನಾಪತ್ತೆಯಾಗಿದ್ದಳು. ಈ ವಿಚಾರ ತಿಳಿದ ಗಣೇಶ್ ದಂಪತಿ ಬೆಂಗಳೂರಿಗೆ ಬಂದು ಅ.17ರಂದು ಪರಪ್ಪನ ಅಗ್ರಹಾರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಎರಡೇ ದಿನದಲ್ಲಿ ಪಲ್ಲವಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು.

ಅ.21ರಂದು ಆರೋಪಿ ಗಣೇಶ್, ಪುತ್ರಿ ಪಲ್ಲವಿ ಪ್ರಿಯಕರನ ಜೊತೆ ನಾಪತ್ತೆಯಾಗಿದ್ದರಿಂದ ಊರಿನಲ್ಲಿ ನನ್ನ ಮರ್ಯಾದೆ ಹೋಯಿತು. ತಲೆ ಎತ್ತಿ ಬಾಳಲು ಆಗುತ್ತಿಲ್ಲ. ಮರ್ಯಾದೆಯೂ ಸಿಗುತ್ತಿಲ್ಲ ಎಂದು ಮಗಳೊಂದಿಗೆ ಜಗಳ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ಮಾರಕಾಸ್ತ್ರದಿಂದ ಪುತ್ರಿ ಪಲ್ಲವಿ ಮೇಲೆ ಹಲ್ಲೆ ನಡೆಸಿದ್ದಾನೆ. ಅದನ್ನು ತಡೆಯಲು ಬಂದ ಪತ್ನಿ ಶಾರದಮ್ಮನಿಗೂ ಮಾರಕಾಸ್ತ್ರದಿಂದ ಹೊಡೆದಿದ್ದಾನೆ. ಈ ಮಧ್ಯೆ ನಾದಿನಿ ಗೀತಾ ಪತಿ ಶಾಂತಕುಮಾರ್‌ಗೆ ನನ್ನ ಮಗಳನ್ನು ಸರಿಯಾಗಿ ನೋಡಿಕೊಂಡಿಲ್ಲ. ಆಕೆ ಯುಕನ ಜೊತೆ ಹೋಗಲು ಹೇಗೆ ಬಿಟ್ಟಿರಿ ಎಂದೆಲ್ಲ ಕೂಗಾಡಿ, ಅವರ ಮೇಲೂ ಹಲ್ಲೆ ನಡೆಸಿದ್ದ. ಆದರೆ, ತೀವ್ರ ರಕ್ತಸ್ರಾವವಾಗಿ ಪಲ್ಲವಿ ಚಿಕಿತ್ಸೆ ಫಲಿಸದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾಳೆ. ಆಕೆಯ ತಾಯಿ ಶಾರದಮ್ಮ ಮತ್ತು ಚಿಕ್ಕಪ್ಪ ಶಾಂತಕುಮಾರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಶರಣಾದ ಗಣೇಶ್: ಮತ್ತೊಂದೆಡೆ ಪುತ್ರಿ ಪಲ್ಲವಿ ಮೃತಪಟ್ಟಿದ್ದಾಳೆ ಎಂಬ ವಿಚಾರ ತಿಳಿದ ತಂದೆ ಗಣೇಶ್ ಪರಪ್ಪನ ಅಗ್ರಹಾರ ಠಾಣೆಗೆ ಬಂದು ಶರಣಾಗಿದ್ದಾನೆ. ಇದೀಗ ಆತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪಲ್ಲವಿ ಚಿಕ್ಕಮ್ಮ ಗೀತಾ ಅವರಿಂದ ದೂರು ದಾಖಲಿಸಿಕೊಂಡು, ಗಣೇಶ್ ವಿರುದ್ಧ ಕೊಲೆ, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಪತ್ನಿ ಕೊಲೆಗೈದ ಪತಿ, 10 ತಿಂಗಳ ಮಗು ಅನಾಥ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.