ETV Bharat / state

ಪತ್ನಿ ಮೇಲಿನ ಕೋಪಕ್ಕೆ ಪುಟ್ಟ ಕಂದನಿಗೆ ಮದ್ಯಪಾನ ಮಾಡಿಸಿದ ನಟೋರಿಯಸ್​ ರೌಡಿ ಶೀಟರ್​..! - ಬೆಂಗಳೂರು ಮಗುವಿಗೆ ಎಣ್ಣೆ ಕುಡಿಸಿದ ತಂದೆ

ಬೆಂಗಳೂರು ರೌಡಿ ಶೀಟರ್​ ಒಬ್ಬ ತನ್ನ ಮಗುವಿಗೆ ಕಂಠ ಪೂರ್ತಿ ಕುಡಿಸಿ ವಿಕೃತಿ ಮೆರೆದಿದ್ದಾನೆ. ಪತ್ನಿ ಮೇಲಿನ ಕೋಪಕ್ಕೆ ಮನೆಗೆ ನುಗ್ಗಿ ಜಗತ್ತಿನ ಅರಿವೇ ಇಲ್ಲದ ಮಗುವಿಗೆ ಕುಡಿಸಿ ಕ್ರೌರ್ಯ ಮೆರೆದಿದ್ದಾನೆ.

father-harassment-to-his-child
ಪತ್ನಿ ಮೇಲಿನ ಕೋಪಕ್ಕೆ ಪುಟ್ಟ ಕಂದನಿಗೆ ಮಧ್ಯಪಾನ ಮಾಡಿಸಿದ ನಟೋರಿಯಸ್​ ರೌಡಿ ಶೀಟರ್​..!
author img

By

Published : Feb 4, 2020, 8:50 AM IST

Updated : Feb 4, 2020, 11:33 AM IST

ಬೆಂಗಳೂರು : ದರೋಡೆ, ಸುಲಿಗೆ, ಕೊಲೆ ಯತ್ನಗಳನ್ನು ಮಾಡಿ‌ ಬದುಕುತ್ತಿರುವ ರೌಡಿಶೀಟರ್​ ಒಬ್ಬ ತನ್ನ ಮಗುವಿಗೆ ಮದ್ಯಪಾನ ಮಾಡಿಸುತ್ತಿರುವ ಎಕ್ಸ್​​​​ಕ್ಲೂಸಿವ್​ ವಿಡಿಯೋ ಒಂದು ಈ ಟಿವಿ ಭಾರತ​ಕ್ಕೆ ಲಭ್ಯವಾಗಿದೆ.

ರೌಡಿ ಅನ್ನೋ ಅರಿವಿಲ್ಲದೆಯೇ ಪ್ರೀತಿಯ ಬಲೆಗೆ ಬಿದ್ದು ಮಾಗಡಿ ರಸ್ತೆಯ ರೌಡಿಶೀಟರ್ ಕುಮಾರೇಶ್ ಜೊತೆ ಯುವತಿ ಮದುವೆಯಾಗಿದ್ದಳು. ಮದುವೆ ಬಳಿಕ ಆರು ತಿಂಗಳಿಗೆ ತನ್ನ ಗಂಡ ರೌಡಿಶೀಟರ್ ಎಂದು ತಿಳಿದು ಮನೆ ಬಿಟ್ಟು ಹೋಗಿದ್ದಳು.

ಪತ್ನಿ ಮೇಲಿನ ಕೋಪಕ್ಕೆ ಪುಟ್ಟ ಕಂದನಿಗೆ ಮದ್ಯಪಾನ ಮಾಡಿಸಿದ ನಟೋರಿಯಸ್​ ರೌಡಿ ಶೀಟರ್​..!

ಮದುವೆ ಬಳಿಕ ಆಕೆ ಗಂಡು ಮಗುವಿಗೂ ಜನ್ಮ ನೀಡಿದ್ದಳು. ತಾಯಿ‌ ಮನೆಯಲ್ಲಿ ನೆಮ್ಮದಿಯಿಂದ ಇರುವಾಗ ಎಂಟ್ರಿ ಕೊಟ್ಟ ಈ ಕಿರಾತಕ ಪತ್ನಿ ಮೇಲಿನ ಕೋಪಕ್ಕೆ ಮನೆಗೆ ನುಗ್ಗಿ ಜಗತ್ತಿನ ಅರಿವೇ ಇಲ್ಲದ ಮಗುವಿಗೆ ಕಂಠ ಪೂರ್ತಿ ಕುಡಿಸಿ ಕ್ರೌರ್ಯ ಮೆರೆದಿದ್ದಾನೆ.

ಪುಟ್ಟ ಕಂದನಿಗೆ ಪಾಪಿ ತಂದೆ ಕಲಿಸಿದ ಪಾಠವೇನು ಗೊತ್ತಾ?: ಮಗುವನ್ನು ಕದ್ದುಕೊಂಡು ಬಂದ ಆಸಾಮಿ ‌ಹೆಂಡತಿ ಮೇಲಿನ ಸೇಡಿಗೆ ಮಗುವಿಗೆ ಮದ್ಯಪಾನ ಮಾಡಿಸಿ ತನ್ನ ಸಂಬಂಧಿ ಬಳಿ ವಿಡಿಯೋ ಮಾಡಿಸಿ ತಾಯಿಗೆ ಕಳಿಸಿ ವಿಕೃತಿ ಮೆರೆದಿದ್ದಾನೆ.‌ ಗಂಡನ ವಿಕೃತಿ ನೋಡಿದ ಮಹಿಳೆ ವನಿತಾ ಸಹಾಯವಾಣಿ‌ ಹಾಗೂ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದು ಪೊಲೀಸರ ಸಹಾಯದಿಂದ ಮಗು ರಕ್ಷಣೆ ಮಾಡಿದ್ದಾರೆ.

ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದು, ಮಗುವನ್ನು ರಕ್ಷಣೆ ಮಾಡಿ ತಾಯಿ ಮಡಿಲು ಸೇರಿಸಲಾಗಿದೆ. ಈ ಸಂಬಂಧ ಮಕ್ಕಳ ಸಹಾಯವಾಣಿಯವರು ತನಿಖೆ ಮುಂದುವರೆಸಿದ್ದು, ಪಾಪಿ ತಂದೆಗಾಗಿ ಬಲೆ ಬೀಸಿದ್ದಾರೆ.

Last Updated : Feb 4, 2020, 11:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.