ETV Bharat / state

ಬೆಂಗಳೂರು: ಹಾಡಹಗಲೇ ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ - ಬೆಂಗಳೂರಿನಲ್ಲಿ ವ್ಯಕ್ತಿ ಮೇಲೆ ಹಲ್ಲೆ

ಮಂತ್ರಿಮಾಲ್ ಬಳಿಯ ನಟರಾಜ ಥಿಯೇಟರ್ ಹತ್ತಿರ ವ್ಯಕ್ತಿಯೊಬ್ಬರ ಮೇಲೆ ಮಾಸ್ಕ್​ ಧಾರಿಗಳು ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಹಲ್ಲೆ
ಹಲ್ಲೆ
author img

By

Published : Sep 13, 2022, 2:43 PM IST

Updated : Sep 13, 2022, 4:33 PM IST

ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆ ಹಾಡಹಗಲೇ ವ್ಯಕ್ತಿಯೊಬ್ಬನನ್ನ ಕೊಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಮಂತ್ರಿಮಾಲ್ ಬಳಿಯ ನಟರಾಜ ಥಿಯೇಟರ್ ಹತ್ತಿರ ಮಂಗಳವಾರ ಬೆಳಗ್ಗೆ 8-30ಕ್ಕೆ ಆಟೋದಲ್ಲಿ ಬಂದಿದ್ದ ನಾಲ್ವರು ಮಾಸ್ಕ್ ಧಾರಿಗಳು ದಾಳಿ ಮಾಡಿದ್ದಾರೆ. ಹೋಂಡಾ ಆ್ಯಕ್ಟೀವಾದಲ್ಲಿ ಬರುತ್ತಿದ್ದ ಗಣೇಶ್​​ ಎಂಬುವವರನ್ನು ಅಡ್ಡಗಟ್ಟಿ ಮಚ್ಚು ಲಾಂಗ್​​ನಿಂದ ಹಲ್ಲೆ ನಡೆಸಿದ್ದಾರೆ.

ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ

ನೇರವಾಗಿ ತಲೆಯನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ. ಸತ್ತಿದ್ದಾರೆ ಎಂದು ಭಾವಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ಬಿದ್ದಿದ್ದವನನ್ನ ಕಂಡು ಸ್ಥಳೀಯರು ಪೊಲೀಸರಿಗೆ ಹಾಗೂ ಆ್ಯಂಬುಲೆನ್ಸ್​​​ಗೆ ಕರೆ ಮಾಡಿದ್ದಾರೆ. ನಂತರ ಗಣೇಶನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಸಾರಿ ಕೋವಿಡ್ ಸಂದರ್ಭದಲ್ಲಿ ಕುಟುಂಬದಲ್ಲೇ ಮನಸ್ತಾಪ ಇದ್ದ ಹಿನ್ನೆಲೆ ಜಗಳ ನಡೆದು ಗಣೇಶ್​​ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 2020 ರಲ್ಲಿ ಕಿನೋ ಥಿಯೇಟರ್ ಬಳಿ ಯುವಕನೊಬ್ಬನನ್ನ ಕೊಂದಿರುವ ಆರೋಪ ಇವರ ಮೇಲಿದೆ.

ಇದನ್ನೂ ಓದಿ: ಆಸ್ತಿ ವಿವಾದ ವ್ಯಕ್ತಿ ಮೇಲೆ ಹಲ್ಲೆ.. ಸಹಾಯಕ ತೋಟಾಧಿಕಾರಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಈ ಎರಡು ವಿಚಾರಗಳಿಗಾಗಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಫ್ರೀಡಂ ಪಾರ್ಕ್ ಬಳಿ ಸ್ಕ್ರ್ಯಾಪ್ ಬ್ಯೂಸಿನೆಸ್ ಮಾಡುತ್ತಿದ್ದ ಗಣೇಶ ಈ ಹಿಂದೆ ಗಾಂಧಿನಗರ ಕ್ಷೇತ್ರದಲ್ಲಿ ಯೂತ್ ಕಾಂಗ್ರೆಸ್ ಲೀಡರ್ ಆಗಿದ್ದರು. ಸದ್ಯ ಶೇಷಾದ್ರಿಪುರ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

Last Updated : Sep 13, 2022, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.