ETV Bharat / state

3ನೇ ಅಲೆ ತಡೆಯಲು ಡಿಸೆಂಬರ್-ಜನವರಿ ನಿರ್ಣಾಯಕ: ಸರ್ಕಾರಕ್ಕೆ ತಜ್ಞರ ಸಲಹೆ ಏನ್​ ಗೊತ್ತಾ? - ಕರ್ನಾಟಕದಲ್ಲಿ ರೂಪಾಂತರಿ ಕೊರೊನಾ ಪ್ರಕರಣ

Increasing COVID Variant: ದೇಶದಲ್ಲಿ ರೂಪಾಂತರಿ ಕೊರೊನಾ ಪ್ರಕರಣಗಳು ದೃಢವಾಗುತ್ತಿವೆ. ಈ ನಡುವೆ ಇದು ಮೂರನೆ ಅಲೆಗೆ ಕಾರಣವಾಗಲಿದ್ಯಾ ಎಂಬ ಆತಂಕ ಸಹ ಎದುರಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕಠಿಣ ನಿಯಮ ಜಾರಿಮಾಡುವಂತೆ ತಾಂತ್ರಿಕ ಸಲಹಾ ಸಮಿತಿ ಕೆಲ ಸೂಚನೆ ನೀಡಿದೆ.

Expert advice to the government
ಸರ್ಕಾರಕ್ಕೆ ತಜ್ಞರ ಸಲಹೆ
author img

By

Published : Dec 16, 2021, 2:10 PM IST

ಬೆಂಗಳೂರು: ಒಮಿಕ್ರಾನ್ ಸೋಂಕು ಹಲವು ದೇಶಗಳಿಗೆ ಬೆಂಬಿಡದೆ ಕಾಡ್ತಿದೆ. ಭಾರತಕ್ಕೂ ಕಾಲಿಟ್ಟಿರುವ ಒಮಿಕ್ರಾನ್ ಸೋಂಕು 3ನೇ ಅಲೆಗೆ ಕಾರಣವಾಗಬಹುದು ಅಂತ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೂರನೇ ಅಲೆ ತಡೆಯಲು ಡಿಸೆಂಬರ್-ಜನವರಿ ನಿರ್ಣಾಯಕವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಜ್ಞರು ಸಲಹೆ ನೀಡುತ್ತಲೇ ಇದ್ದಾರೆ.‌

ಇಷ್ಟಕ್ಕೂ ಡಿಸೆಂಬರ್-ಜನವರಿಯಲ್ಲೇ ಹೆಚ್ಚು ಆರ್ಥಿಕ ವ್ಯವಹಾರದಿಂದ ಹಿಡಿದು ಹಬ್ಬ-ಹರಿದಿನಗಳು ಶುರುವಾಗಲಿದ್ದು ಜನರ ಚಟುವಟಿಕೆ ಹಾಗೂ ಓಡಾಟಗಳು ಹೆಚ್ಚಾಗಲಿವೆ‌. ಗುಂಪು ಸೇರುವುದು ಹೆಚ್ಚಾದರೆ ಸೋಂಕು ಹರಡುವಿಕೆಗೆ ಇದುವೇ ಕಾರಣವಾಗಲಿದೆ ಅನ್ನೋದು ತಜ್ಞರ ಆತಂಕ, ಹೀಗಾಗಿಯೇ ರಾಜ್ಯದಲ್ಲೂ ಕೋವಿಡ್ ಸಲಹಾ ಸಮಿತಿ ಸದಸ್ಯರು ಸರಣಿ ಸಭೆಗಳ ನಡೆಸುತ್ತಿದ್ದಾರೆ.

ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿ..

ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ನಿನ್ನೆ ನಡೆಸಿದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿ ಶಿಫಾರಸು ನೀಡಿದ್ದಾರೆ. ಪ್ರಮುಖವಾಗಿ ಡಿಸೆಂಬರ್ 22ರಿಂದ ಜನವರಿ 2ರ ವರೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಲು ತಿಳಿಸಿದ್ದಾರೆ. ಹೊಸವರ್ಷ ಆಚರಣೆ ಹಾಗೂ ಕ್ರಿಸ್​ಮಸ್​​ಗೆ ಮಾರ್ಗಸೂಚಿ ಅಗತ್ಯವಿದ್ದು, ಪ್ರಾರ್ಥನಾ ಮಂದಿರಗಳಿಗೂ ಕೋವಿಡ್ ಪಾಲನೆ ಕಡ್ಡಾಯ ಮಾಡಲು ಸೂಚನೆ ನೀಡಲಾಗಿದೆ.

ಇನ್ನು ಹೊಸ ವರ್ಷದಂದು ಒಳಾಂಗಣ ಹಾಗೂ ಹೊರಾಂಗಣ ಆಚರಣೆಗಳಿಗೆ ಅನುಮತಿ ನೀಡಬೇಕಾ? ನೀಡಿದರೂ ಸಹ ಇದಕ್ಕಾಗಿ ಮಾರ್ಗಸೂಚಿ ಜಾರಿ ಮಾಡಿ ಪಾಲನೆ ಆಗುವ ಕೆಲಸ ಆಗಬೇಕು. ದೇವಸ್ಥಾನ, ಚರ್ಚ್, ಮಸೀದಿಗೂ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸಲಹೆ ಬಂದಿದ್ದು, ಹೆಚ್ಚು ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ ಎರಡು ವಾರಗಳ ಮಾರ್ಗಸೂಚಿ ಹೊರಡಿಸಲು ಸಲಹೆ ಬಂದಿದೆ.

ದೇವಸ್ಥಾನಕ್ಕೆ ಆಗಮಿಸುವವರಿಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡಬೇಕು. ಪಬ್ ಕ್ಲಬ್​​ಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ ಕಲ್ಪಿಸುವುದು. ಪಬ್​​ಗೆ ಬರುವ ಗ್ರಾಹಕರು ಕೂಡ ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು.

ಹೊರಾಂಗಣ ಪ್ರದೇಶದಲ್ಲಿ 3.5 ಚದರ ಮೀಟರ್​​ನಲ್ಲಿ 200-300 ಜನರಿಗೆ ಸೀಮಿತಗೊಳಿಸುವುದು. ದೇಗುಲ, ಚರ್ಚ್, ಮಸೀದಿಗಳಲ್ಲಿ ಅಂತರ ಕಾಪಾಡಿಕೊಳ್ಳಲು ಮಾರ್ಷಲ್​​ಗಳ ನಿಯೋಜನೆ ಮಾಡುವಂತೆ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ, ಎರಡು ಡೋಸ್ ಲಸಿಕೆ ಪಡೆದಿರುವ ಕುರಿತು ಪರಿಶೀಲಿಸಲು ತಿಳಿಸಲಾಗಿದೆ.

ಇದನ್ನೂ ಓದಿ: Omicron@77: ಈವರೆಗೆ 77 ದೇಶಗಳಿಗೆ ಹರಡಿದ ಒಮಿಕ್ರಾನ್​: ಭಾರತದಲ್ಲಿ 77 ಕೇಸ್​ಗಳು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.