ETV Bharat / state

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಂಚೆ ಮುದ್ರೆಗಳ ಪ್ರದರ್ಶನ - ಬೆಂಗಳೂರು, ಭಾರತೀಯ ವಿಜ್ಞಾನ ಸಂಸ್ಥೆ, ಅಂಚೆ ಮುದ್ರೆಗಳ ಪ್ರದರ್ಶನ, ಖಗೋಳ ಶಾಸ್ತ್ರದ ಬಗ್ಗೆ ಮಾಹಿತಿ ನೀಡುವ ಪ್ರದರ್ಶನ, ಯಶವಂತಪುರದ ಭಾರತೀಯ ವಿಜ್ಞಾನ ಸಂಸ್ಥೆ, ಈ ಟಿವಿ ಭಾರತ, ಕನ್ನಡ ವಾರ್ತೆ

ಚಂದ್ರಯಾನ ಮತ್ತು ಖಗೋಳ ಶಾಸ್ತ್ರದ ಬಗ್ಗೆ ಮಾಹಿತಿ ನೀಡುವ ಅಂಚೆ ಮುದ್ರೆಗಳ ಪ್ರದರ್ಶನವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ಖಗೋಳ ಶಾಸ್ತ್ರ ಕ್ಷೇತ್ರದ ಸಾಧನೆಗಳ ಬಗ್ಗೆ ಈ ಅಂಚೆ ಮುದ್ರೆಗಳು ಬೆಳಕು ಚೆಲ್ಲಲಿವೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಂಚೆ ಮುದ್ರೆಗಳ ಪ್ರದರ್ಶನ
author img

By

Published : Aug 1, 2019, 5:45 AM IST

ಬೆಂಗಳೂರು: ಚಂದ್ರನ ಮೇಲೆ ಮೊದಲು ಹೆಜ್ಜೆಯಿಟ್ಟ ಮಾನವನ ಸಾಧನೆಯಿಂದ ಹಿಡಿದು ಇಲ್ಲಿಯವರೆಗೆ ವಿವಿಧ ದೇಶಗಳ ಖಗೋಳಶಾಸ್ತ್ರ ಮತ್ತು ಚಂದ್ರಯಾನದ ಸಾಧನೆಗಳನ್ನು ಬಿಂಬಿಸುವ ಅಂಚೆಮುದ್ರೆಗಳ (ಸ್ಟಾಂಪ್ ಗಳ) ಪ್ರದರ್ಶನವನ್ನು ಯಶವಂತಪುರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ನಗರದ ಎಂ.ಇ.ಎಸ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಸಂಗೋರಾಮ್ ಸಂಗ್ರಹಿಸಿರುವ ಸ್ಟಾಂಪ್​ಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಅವರ ಮಗಳು ಕೀರ್ತಿ ಸಂಗ್ರಹಿಸಿರುವ ಸ್ಟಾಂಪ್ ಗಳು ಇಲ್ಲಿವೆ. ಮಗಳು ಸಣ್ಣ ವಯಸ್ಸಲ್ಲೇ ತೀರಿಹೋದ ಬಳಿಕ ತಂದೆ ಸಂಗೋರಾಮ್ ಮಗಳ ಹವ್ಯಾಸವನ್ನು ಮುಂದುವರಿಸಿದ್ದಾರೆ. ವಿಜ್ಞಾನ ಕ್ಷೇತ್ರದ ಸಾಧನೆಯ ಎಲ್ಲಾ ಸ್ಟಾಂಪ್​ಗಳು ಪ್ರದರ್ಶನಕ್ಕಿಡಲಾಗಿದೆ. ಇವು ದೇಶ- ವಿದೇಶಗಳಲ್ಲೂ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಂಚೆಮುದ್ರೆಗಳ ಪ್ರದರ್ಶನ

ಪ್ರೊಫೆಸರ್ ಸಂಗೋರಾಮ್ ವಯಸ್ಸಾಗಿರುವ ಕಾರಣ ತಮ್ಮ ಸಂಗ್ರಹಗಳನ್ನೆಲ್ಲಾ ಐಐಎಸ್ ಸಿ ಗೆ ದಾನ ಮಾಡಲು ಯೋಜಿಸಿದ್ದಾರೆ. ಈಗ ಚಂದ್ರಯಾನ ಹಾಗೂ ಖಗೋಳಶಾಸ್ತ್ರದ ಕುರಿತ ಸ್ಟಾಂಪ್ ಗಳನ್ನು ಮಾತ್ರ ಪ್ರದರ್ಶನಕ್ಕೆ ಇಡಲಾಗಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರದ ಸಾಧನೆಗಳ ಎಲ್ಲಾ ಅಂಚೆ ಮುದ್ರೆಗಳನ್ನು ಪ್ರದರ್ಶನಕ್ಕಿಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭೇಟಿ ನೀಡಿ ಇದರ ಪ್ರಯೋಜನ ಪಡೆಯಬೇಕೆಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂಪರ್ಕ ಅಧಿಕಾರಿ ಕವಿತಾ ಹರೀಶ್ ಕರೆ ನೀಡಿದ್ದಾರೆ.

Intro:ಚಂದ್ರಯಾನ-೨ ರ ಬೆನ್ನಲ್ಲೇ ವಿಜ್ಞಾನ ವಲಯದಲ್ಲಿ ಸಂಚಲನ- ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಂಚೆಮುದ್ರೆಗಳ ಪ್ರದರ್ಶನ

ಬೆಂಗಳೂರು- ಇಸ್ರೋ ಸಂಸ್ಥೆ ಮಹತ್ತರವಾದ ಚಂದ್ರಯಾನ-೨ ಅನ್ನು ನಭಕ್ಕೆ ಯಶಸ್ವಿಯಾಗಿ ಉಡಾವಣೆಗೊಳಿಸಿದ ಬೆನ್ನಲ್ಲೇ ವಿಜ್ಞಾನ ವಲಯದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಇದರ ಸ್ಪೂರ್ತಿಯಿಂದ ಯಶವಂತಪುರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಚಂದ್ರನ ಮೇಲೆ ಮೊದಲ ಹೆಜ್ಜೆಯಿಟ್ಟ ಮಾನವನ ಸಾಧನೆಯಿಂದ ಇಲ್ಲಿಯವರೆಗೆ ವಿವಿಧ ದೇಶಗಳ ಖಗೋಳಶಾಸ್ತ್ರದ ಸಾಧನೆ, ಚಂದ್ರಯಾನದ ಸಾಧನೆಗಳನ್ನು ಬಿಂಬಿಸುವ ಅಂಚೆಮುದ್ರೆಗಳ (ಸ್ಟಾಂಪ್ ಗಳ) ಪ್ರದರ್ಶನ ಇಂದಿನಿಂದ ಆರಂಭಗೊಂಡಿದೆ.
ವಿಜ್ಞಾನ ವಲಯದ ಸಾಧನೆ ಸಾರುವ ಅಂಚೆಮುದ್ರೆಗಳ ಸಂಗ್ರಹ ಹಾಗೂ ಪ್ರದರ್ಶನದಿಂದಾಗಿ ವಿದ್ಯಾರ್ಥಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಹಕಾರಿಯಾಗಲಿದೆ.
ಎಮ್ ಇಎಸ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಸಂಗೋರಾಮ್ ಅವರು ಸಂಗ್ರಹಿಸಿರುವ ಸ್ಟಾಂಪ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ವಿಜ್ಞಾನದ ಎಲ್ಲಾ ಸಾಧನೆಗಳ ಸ್ಟಾಂಪ್ ಗಳಿವೆ.. ವಿದೇಶಗಳಲ್ಲೂ ಪ್ರದರ್ಶನ ಕಂಡೂ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದು ಅವರ ಮಗಳು ಕೀರ್ತಿಯವರು ಸಂಗ್ರಹಿಸಿರುವ ಸ್ಟಾಂಪ್ ಗಳಾಗಿದ್ದು, ಮಗಳು ಸಣ್ಣ ವಯಸ್ಸಲ್ಲೇ ತೀರಿಹೋದ ಬಳಿಕ ತಂದೆಯವರು ಮುಂದುವರಿಸಿದ್ದಾರೆ. ವಯಸ್ಸಾಗಿರುವ ಕಾರಣ ಈ ಸಂಗ್ರಹಗಳನ್ನೆಲ್ಲಾ ಐಐಎಸ್ ಸಿ ಗೆ ದಾನ ಮಾಡಲು ಯೋಜಿಸಿದ್ದಾರೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂಪರ್ಕ ಕಚೇರಿಯ ಕವಿತಾ ಹರೀಶ್ ತಿಳಿಸಿದರು‌.
ಈಗ ಸಧ್ಯಕ್ಕೆ ಚಂದ್ರಯಾನ ಹಾಗೂ ಖಗೋಳಶಾಸ್ತ್ರದ ಕುರಿತ ಸ್ಟಾಂಪ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮುಂದಿನ ದಿನಗಳಲ್ಲಿ ವಿಜ್ಞಾನವಲಯದ ಸಾಧನೆಗಳ ಎಲ್ಲಾ ಅಂಚೆ ಮುದ್ರೆಗಳನ್ನು ಪ್ರದರ್ಶನಕ್ಕಿಡಲಾಗುವುದು. ಹೆಚ್ಚೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಭೇಟಿ ನೀಡಿ ಇದರ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದರು.

ಸೌಮ್ಯಶ್ರೀ
Kn_Bng_05_moon_stamps_exhibition_7202707

Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.