ETV Bharat / state

ಹಳೆ ನೋಟುಗಳ ಚಲಾವಣೆ ದಂಧೆ: ಪೀಣ್ಯದಲ್ಲಿ ಇಬ್ಬರು ಆರೋಪಿಗಳು ಅರೆಸ್ಟ್‌ - bangalore news

ನಿಷೇಧಿತ ಕರೆನ್ಸಿ ಎಕ್ಸ್ಚೇಂಜ್ ಮಾಡಲು ಪ್ಲಾನ್ ಮಾಡಿದ್ದ‌ಇಬ್ಬರು ಆರೋಪಿಗಳನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಪೀಣ್ಯಾ ಪೊಲೀಸರು
ಆರೋಪಿಗಳನ್ನು ಬಂಧಿಸಿದ ಪೀಣ್ಯಾ ಪೊಲೀಸರು
author img

By

Published : Oct 14, 2020, 5:20 PM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹಳೆ ನೋಟುಗಳ ಚಲಾವಣೆ ದಂಧೆ ಇನ್ನೂ ನಿಂತಿಲ್ಲ. ಸದ್ಯ ಒಂದೊಂದೇ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

ಶಿವಕುಮಾರ್ (44), ವಿಜಯಕುಮಾರ್ (40) ಬಂಧಿತ ಆರೋಪಿಗಳು. ಯೋಗೆಶ್ ನಾಪತ್ತೆಯಾಗಿರುವ ಮತ್ತೊಬ್ಬ ಆರೋಪಿ.

ಜಾಲಹಳ್ಳಿ ಕ್ರಾಸ್ ಬಳಿ ಆಲ್ಟೋ ಕಾರಿನಲ್ಲಿ ಅಮಾನ್ಯಗೊಂಡ 1.88 ಕೋಟಿ ಮೊತ್ತದ ಹಣ ಬದಲಾವಣೆ ಮಾಡಲು ಮುಂದಾಗಿದ್ದರು. ಈ ಮಾಹಿತಿ ತಿಳಿದ ಪೀಣ್ಯ ಪೊಲೀಸ್ ಠಾಣೆ ಪಿಎಸ್​ಐ ರಘುಪ್ರಸಾದ್ ಮತ್ತು ತಂಡ ದಾಳಿ‌ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೆಯೇ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ‌ಮಾಡಿ ತನಿಖೆ ಮುಂದುವರೆಸಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ ಭಾರತದ ಹಳೆ ನೋಟುಗಳನ್ನು ವಿದೇಶಕ್ಕೆ ಸಾಗಿಸಲು ಪ್ರಯತ್ನ ಪಟ್ಟಿರುವ ವಿಚಾರ ಬಯಲಾಗಿದೆ. ವಿದೇಶದಲ್ಲಿ ಭಾರತದ ಕರೆನ್ಸಿ ಚಲಾವಣೆಯ ಜಾಲ ಇರುವುದು ಪತ್ತೆಯಾಗಿದೆ. ಅಷ್ಟು ಮಾತ್ರವಲ್ಲದೇ ಹಳೆ ನೋಟುಗಳನ್ನ ಯಾರಿಂದ ಪಡೆದಿದ್ದರು ಅನ್ನೋದ್ರ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.