ETV Bharat / state

ಬೆಂಗಳೂರು ಲಾಕ್‌ಡೌನ್ ವೇಳೆ ಯಾವೆಲ್ಲಾ ವಲಯಗಳಿಗೆ ವಿನಾಯಿತಿ‌..? - bangalore news

ಬಿಬಿಎಂಪಿ ಆಯುಕ್ತರು, ಬೆಂಗಳೂರು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಧಿಕಾರಿಗಳು ಸನ್ನಿವೇಶಕ್ಕನುಗುಣವಾಗಿ ವಿವಿಧ ವಲಯಗಳಲ್ಲಿ ಕೆಲ ಕಾರ್ಯ ಚಟುವಟಿಕೆಗಳನ್ನು ನಿಷೇಧಿಸಬಹುದು ಅಥವಾ ಅಗತ್ಯವೆನಿಸಿದರೆ ನಿರ್ಬಂಧಗಳನ್ನು ಹೇರಬಹುದು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

Exception zones  from Bangalore lockdown
ಬೆಂಗಳೂರು ಲಾಕ್‌ಡೌನ್ ವೇಳೆ ಯಾವೆಲ್ಲಾ ವಲಯಗಳಿಗೆ ವಿನಾಯಿತಿ‌..?
author img

By

Published : Jul 13, 2020, 11:11 PM IST

ಬೆಂಗಳೂರು: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರದ ಲಾಕ್‌ಡೌನ್ ಸಂಬಂಧ ವಿಸ್ತೃತ ಮಾರ್ಗಸೂಚಿಯನ್ನು ಹೊರಡಿಸಿರುವ ಸರ್ಕಾರ ಕೆಲ ವಲಯಗಳಿಗೆ ವಿನಾಯಿತಿಗಳನ್ನು ನೀಡಿದೆ.

ಬಿಬಿಎಂಪಿ ಆಯುಕ್ತರು, ಬೆಂಗಳೂರು ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಧಿಕಾರಿಗಳು ಸನ್ನಿವೇಶಕ್ಕನುಗುಣವಾಗಿ ವಿವಿಧ ವಲಯಗಳಲ್ಲಿ ಕೆಲ ಕಾರ್ಯ ಚಟುವಟಿಕೆಗಳನ್ನು ನಿಷೇಧಿಸಬಹುದು ಅಥವಾ ಅಗತ್ಯವೆನಿಸಿದರೆ ನಿರ್ಬಂಧಗಳನ್ನು ಹೇರಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಲಾಕ್ ಡೌನ್ ವೇಳೆ ಯಾವುದಕ್ಕೆ ವಿನಾಯಿತಿ:

  • ಈಗಾಗಲೇ ವೇಳಾಪಟ್ಟಿ ನಿಗದಿಯಾಗಿರುವ ವಿಮಾನ ಹಾಗೂ ರೈಲುಗಳು, ಲಾಕ್‌ಡೌನ್ ಅವಧಿಯಲ್ಲಿನ ಸಂಚಾರವನ್ನು ಮುಂದುವರೆಸಿದ ವಿಮಾನ ಮತ್ತು ರೈಲು ಟಿಕೆಟ್‌ಗಳನ್ನು ಪ್ರಯಾಣಿಕರ ಪಾಸುಗಳು ಎಂದು ಪರಿಗಣಿಸಲಾಗುವುದು. ಅಲ್ಲದೇ, ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿಸಿದೆ. ಆದರೆ, ಯಾವುದೇ ಹೊಸ ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶವಿರುವುದಿಲ್ಲ.
  • ಈಗಾಗಲೇ ನಿಗದಿಯಾದ ಪರೀಕ್ಷೆಗಳು ಕೋವಿಡ್-19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಅವಕಾಶ.
  • ತುರ್ತುಸೇವೆಗಳಿಗೆ ಮಾತ್ರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌ಗಳು ಮತ್ತು ಖಾಸಗಿ ವಾಹನಗಳ ಮೂಲಕ ವ್ಯಕ್ತಿಗಳ ಚಲನೆಗೆ ಮಾರ್ಗಸೂಚಿಯನ್ವಯ ಅನುಮತಿ.
    ತುರ್ತು ಸಂದರ್ಭಗಳಲ್ಲಿ ಅಥವಾ ಈ ಮಾರ್ಗಸೂಚಿಗಳಲ್ಲಿ ಅನುಮತಿಸಿದ ಸಂದರ್ಭಗಳಲ್ಲಿ ಮಾತ್ರ ರಾಜ್ಯದಲ್ಲಿ ಮತ್ತು ರಾಜ್ಯದ ಹೊರಗೆ ಪ್ರಯಾಣಿಕ ವಾಹನಗಳು ಚಲಿಸಲು ಅನುಮತಿ. ಈ ಚಲನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಹ ಪರವಾನಗಿ ಪಡೆದಿರಬೇಕು.
  • ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಬಿಬಿಎಂಪಿ ಹಾಗೂ ಕಾರಾಗೃಹಗಳಿಗೆ ಕಾರ್ಯನಿರ್ವಹಿಸಲು ಅನುಮತಿ.
  • ವಿದ್ಯುತ್, ನೀರು, ನೈರ್ಮಲ್ಯ ಇತ್ಯಾದಿ ಅಗತ್ಯ ಸೇವೆಗಳನ್ನು ನಿರ್ವಹಿಸುವ ಎಲ್ಲಾ ಕಚೇರಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ.
  • ಬಿಬಿಎಂಪಿ ಹಾಗೂ ಅಧೀನ ಕಚೇರಿಗಳು, ಬೆಂಗಳೂರು ನಗರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗಳು ಹಾಗೂ ಅಧೀನ ಕಚೇರಿಗಳು, ಬೆಂಗಳೂರು ಗ್ರಾಮಾಂತರ ಸರ್ಕಾರಿ ಕಚೇರಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ.
  • ಕೊವಿಡ್-19ಗೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಲು ಅನುಮತಿ.
  • ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೋವಿಡ್-19ಗೆ ಸಂಬಂಧಿಸಿದ ಕಾರ್ಯಗಳಿಗೆ ನಿಯೋಜಿಸಿದ ಸರ್ಕಾರೇತರ ಸಂಸ್ಥೆಗಳ ಕಚೇರಿಗಳು ಹಾಗೂ ಸ್ವಯಂ ಸೇವಕರಿಗೆ ಅನುಮತಿ.
  • ಕೇಂದ್ರ ಸರ್ಕಾರದ ಕಚೇರಿಗಳು, ಅದರ ಸ್ವಾಯತ್ತ / ಅಧೀನ ಕಚೇರಿಗಳು ಮುಚ್ಚಿರತಕ್ಕದ್ದು.
  • ರಕ್ಷಣೆ, ರಕ್ಷಣಾ ಪಿ.ಎಸ್.ಯುಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಹಾಗೂ ಅಗತ್ಯ ಸೇವೆಗಳನ್ನು ನಿರ್ವಹಿಸುವಂತಹ ಕಚೇರಿಗಳಿಗೆ ಅನುಮತಿ.
  • ಮಾರ್ಗಸೂಚಿಗಳಲ್ಲಿ ಅನುಮತಿಸಿದ ಕಾರ್ಯ ಚಟುವಟಿಕೆಗಳಿಗೆ ಅವರು ಕಚೇರಿ, ಸಂಸ್ಥೆಯಿಂದ ನೀಡಿದ ಅರ್ಹ ಗುರುತಿನ ಚೀಟಿಯೊಂದಿಗೆ ಸಿಬ್ಬಂದಿಯ ಪ್ರಯಾಣ.
  • ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಪ್ರಯಾಣ ಪರವಾನಗಿಯಾಗಿ ಬಳಸಿಕೊಳ್ಳಬಹುದು ಮತ್ತು ಅವರಿಗೆ ಲಭ್ಯವಿರುವ ಟ್ಯಾಕ್ಸಿ/ಆಟೋ ರಿಕ್ಷಾ ಒಳಗೊಂಡಂತೆ ಸಾರಿಗೆ ವಿಧಾನವನ್ನು ಬಳಸಿಕೊಳ್ಳಬಹುದು.
  • ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಡಿತರ ಅಂಗಡಿಗಳು (ಪಿ.ಡಿ.ಎಸ್), ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣುಗಳು ಹಾಗೂ ತರಕಾರಿ, ಹೈನು ಮತ್ತು ಕ್ಷೀರ ಕೇಂದ್ರಗಳು, ಮಾಂಸ ಮತ್ತು ಮೀನು, ಪ್ರಾಣಿಯ ಆಹಾರ ಅಂಗಡಿಗಳಿಗೆ ಅವಕಾಶ.
  • ಸ್ಥಳೀಯ ಮಳಿಗೆಗಳು, ಬೃಹತ್ ಇಟ್ಟಿಗೆ ಮತ್ತು ಗಾರೆ ಅಂಗಡಿಗಳು ಅಥವಾ ಇ-ಕಾಮರ್ಸ್ ಕಂಪನಿಗಳ ಮುಖಾಂತರ, ಅತ್ಯವಶ್ಯಕ ವಸ್ತುಗಳ ಉತ್ಪಾದನೆ, ಸಗಟು ಅಥವಾ ಚಿಲ್ಲರೆ ಮಾರಾಟ ಯಾವುದೇ ಆಗಿರಲಿ ಆ ವಸ್ತುಗಳ ಪೂರೈಕೆ ಸರಣಿಯ ಎಲ್ಲಾ ಸೌಲಭ್ಯಗಳನ್ನು ಕೋವಿಡ್-19 ನಿರ್ವಹಣೆಗೆ ಇರುವ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವುದಕ್ಕೊಳಪಟ್ಟು ಸರಬರಾಜು ಮಾಡಲು ಅವಕಾಶ.
  • ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು, ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎ.ಟಿ.ಎಂ ತೆರೆಯಲು ಅವಕಾಶ.
  • ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಅವಕಾಶ.
  • ದೂರಸಂಪರ್ಕ, ಅಂತರ್ಜಾಲ ಸೇವೆಗಳು, ಪ್ರಸರಣ ಮತ್ತು ಕೇಬಲ್ ಸೇವೆಗಳು, ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು ಹಾಗೂ ಅತ್ಯವಶ್ಯಕ ಸೇವೆ ಇರಲಿದೆ.
  • ಇ-ಕಾಮರ್ಸ್ ಮುಖಾಂತರ ಆಹಾರ, ಔಷಧಿಗಳು, ಔಷಧಿ ವಸ್ತುಗಳು, ವೈದ್ಯಕೀಯ ಸಲಕರಣೆಗಳು, ಅಗತ್ಯ ವಸ್ತುಗಳ ಸರಬರಾಜು.

    ಕೈಗಾರಿಕೆಗಳಿಗೆ ನಿರ್ಬಂಧಿತ ಅವಕಾಶ:
  • ನಿರಂತರ ಕಾರ್ಯಪ್ರಕ್ರಿಯೆ ಮತ್ತು ಅದರ ಪೂರೈಕೆಗೆ ಅಗತ್ಯವಿರುವ ಉತ್ಪಾದನಾ ಘಟಕಗಳಿಗೆ ಅವಕಾಶ.
  • ಆಹಾರ ಸಂಸ್ಕರಣಾ ಕೈಗಾರಿಕೆಗಳು, ಔಷಧಿಗಳು, ಔಷಧಿ ವಸ್ತುಗಳು, ವೈದ್ಯಕೀಯ, ವೈದ್ಯಕೀಯ ಉಪಕರಣಗಳು, ಅವುಗಳ ಕಚ್ಚಾ ಹಾಗೂ ಅವಶ್ಯಕ ಪದಾರ್ಥಗಳನ್ನು ಒಳಗೊಂಡಂತೆ ಅತ್ಯವಶ್ಯಕ ವಸ್ತುಗಳ ಉತ್ಪಾದನೆಗೆ ಅವಕಾಶ.
  • ಪ್ಯಾಕಿಂಗ್ ಸಾಮಗ್ರಿಗಳ ಉತ್ಪಾದನೆಗೆ ಅವಕಾಶ.
  • ಕೋವಿಡ್-19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ವಿಶೇಷ ಆರ್ಥಿಕ ವಲಯಗಳು (SEZ) ಮತ್ತು ರಫ್ತು ಆಧಾರಿತ ಘಟಕಗಳು (EOU) ಕೈಗಾರಿಕಾ ಟೌನ್‌ ಶಿಪ್​ಗಳಲ್ಲಿ ನಿಯಂತ್ರಣಾವಕಾಶ ಹೊಂದಿರುವ ಉತ್ಪಾದನಾ ಮತ್ತು ಇತರ ಔದ್ಯಮಿಕ ಸಂಸ್ಥೆಗಳಿಗೆ ವಿನಾಯಿತಿ.

    ನಿರ್ಮಾಣ ಕಾಮಗಾರಿಗೆ ಅವಕಾಶ: ಕೋವಿಡ್-19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳ ಪಾಲನೆಗೆ ಒಳಪಟ್ಟು ಕಂಟೇನ್ಮೆಂಟ್ ವಲಯದ ಹೊರಗೆ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ ಹೊರಗಿನಿಂದ ಕಾರ್ಮಿಕರನ್ನು ಕರೆತರದೆ, ಸ್ಥಳೀಯವಾಗಿ ಇರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಯೋಜನೆಗಳ ಕಾಮಗಾರಿ ಮುಂದುವರಿಸಬಹುದು.

    ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ನಿಗಾ: ಕಂಟೇನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಕಾರ್ಯಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು. ವೈದ್ಯಕೀಯ ತುರ್ತು ಸೇವೆಗಳ ಮತ್ತು ಅತ್ಯಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯ ಹೊರತು ಈ ವಲಯಗಳಲ್ಲಿ ಮತ್ತು ವಲಯಗಳ ಹೊರಗೆ ವ್ಯಕ್ತಿಗಳ ಚಲನೆಗೆ ಕಟ್ಟುನಿಟ್ಟಿನ ಪರಿಧಿಯನ್ನು ನಿಗದಿಪಡಿಸಬೇಕು ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.