ETV Bharat / state

ಸುಳ್ಳು ಕೊರೊನಾ ವರದಿ ಕೊಟ್ರಾ ಮಾಜಿ ಮೇಯರ್ ಸಂಪತ್ ರಾಜ್!?

ಮಾಜಿ ಮೇಯರ್ ಸಂಪತ್ ರಾಜ್​ಗೆ ಕೊರೊನಾ ಇದೆ ಎಂದು ಸುಳ್ಳು ವರದಿ ನೀಡಿರುವುದು ಪ್ರಾಥಮಿಕ ತನಿಖೆ ವೇಳೆ ಸಿಸಿಬಿ ಪೊಲೀಸರಿಗೆ ಗೊತ್ತಾಗಿದೆ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣ ಸಂಭಂದ ಮಾಜಿ‌‌ ಮೇಯರ್ ಸಂಪತ್ ರಾಜ್ ಅವರ ಬೆನ್ನತ್ತಿದ್ದ ಸಿಸಿಬಿ ಪೊಲೀಸರಿಗೆ ಈ ಮಾಹಿತಿ ಲಭ್ಯವಾಗಿದೆ.

sampath raj
sampath raj
author img

By

Published : Oct 30, 2020, 8:52 AM IST

ಬೆಂಗಳೂರು: ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣ ಸಂಭಂದ ಮಾಜಿ‌‌ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬೆನ್ನತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಪತ್ ರಾಜ್ ವೈದ್ಯರ ತಂಡವನ್ನು ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಭೇಟಿಯಾಗಿ ಕೆಲ ಮಾಹಿತಿ ಕಲೆಹಾಕಿದೆ.

ಎರಡು ತಿಂಗಳಿನಿಂದ ಸಂಪತ್ ರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಆಸ್ಪತ್ರೆಯ ವೈದ್ಯರು ಸಂಪತ್​ಗೆ ಹುಷಾರಿಲ್ಲವೆಂಬ ರಿಪೋರ್ಟ್ ನೀಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಮೂರನೇ ಬಾರಿ ಸಂಪತ್​ಗೆ ಕೊರೊನಾ ತಗುಲಿದೆ ಎಂದು ವೈದ್ಯರ ಪತ್ರ ಸಿಸಿಬಿಗೆ ರವಾನೆಯಾಗಿತ್ತು.

ಈ ಕುರಿತು ಅನುಮಾನ ವ್ಯಕ್ತಪಡಿಸಿರುವ ಸಿಸಿಬಿ ಪೊಲೀಸರು, ಸಂಪತ್ ಆರೋಗ್ಯದ ಬಗ್ಗೆ ತಾವೇ ಖುದ್ದು ಮಾಹಿತಿ ಪಡೆಯಲು ನಿರ್ಧರಿಸಿ ಖಾಸಗಿ ಆಸ್ಪತ್ರೆಗೆ ಭೇಟಿ ಕೊಟ್ಟು, ಸಂಪತ್​ಗೆ ಸಾಥ್ ನೀಡುತ್ತಿದ್ದ ಖಾಸಗಿ ಆಸ್ಪತ್ರೆ ವೈದ್ಯರ ವಿಚಾರಣೆ ನಡೆಸಿದ್ದಾರೆ.

ಪರಿಶೀಲನೆ ನಡೆಸಲು ಹೋದಾಗ ಸಂಪತ್ ರಾಜ್​ಗೆ ಕೊರೊನಾ ಇದೆ ಎಂದು ಸುಳ್ಳು ವರದಿ ನೀಡಿರುವುದು ಪ್ರಾಥಮಿಕವಾಗಿ ಗೊತ್ತಾಗಿದೆ ಎನ್ನಲಾಗಿದೆ.

ಹೀಗಾಗಿ ಸಿಕ್ಕಿರುವ ಮಾಹಿತಿಯನ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಅವರಿಗೆ ನೀಡಲು ಮುಂದಾಗಿದ್ದಾರೆ. ಕಮಲ್ ಪಂತ್ ಸೂಚಿಸಿದಂತೆ ಮುಂದಿನ ಕ್ರಮವನ್ನ ಸಿಸಿಬಿ ತೆಗೆದುಕೊಳ್ಳಲಿದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.