ETV Bharat / state

ರಾಜ್ಯದಲ್ಲಿ ಶಿಕ್ಷಣ ನೀತಿ ನಿರೂಪಣೆಗೆ ಶೈಕ್ಷಣಿಕ ಪರಿಷತ್ ಸ್ಥಾಪನೆ: ಸುರೇಶ್ ಕುಮಾರ್ - ರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ಮುಂಚಿನಿಂದಲೂ ಬೇರೆಲ್ಲಾ ರಾಜ್ಯಗಳಿಗೆ ಮಾದರಿಯಾಗುವ ಉಪಕ್ರಮಗಳನ್ನು ಜಾರಿಯಲ್ಲಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

establishment-of-educational
ಸಚಿವ ಎಸ್. ಸುರೇಶ್ ಕುಮಾರ್
author img

By

Published : Nov 21, 2020, 10:15 PM IST

ಬೆಂಗಳೂರು: ಕರ್ನಾಟಕವು ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಪ್ರಥಮ ರಾಜ್ಯವಾಗಲಿದ್ದು, ಈ ನೀತಿಯ ಭಾಗವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ನೀತಿ ನಿರೂಪಣೆ, ಸಮಾನತೆ, ಸಮನ್ವಯತೆ ಸಾಧನೆಯ ಖಾತರಿಗೆ ರಾಜ್ಯದಲ್ಲಿ ಸ್ವಾಯತ್ತತೆ ಹೊಂದಿದ 'ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು'ನ್ನು ಸ್ಥಾಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಸಚಿವ ಎಸ್.ಸುರೇಶ್ ಕುಮಾರ್

'ಬೆಂಗಳೂರು ತಂತ್ರಜ್ಞಾನ ಮೇಳ-2020'ರಲ್ಲಿ ಮೂರನೇ ದಿನವಾದ ಶನಿವಾರ ಭಾರತದ ಬೃಹತ್ ವರ್ಚುವಲ್ ಟೆಕ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನತೆಗೆ ಆಶ್ವಾಸನೆ ನೀಡಿದಂತೆ ಬೇರೆಲ್ಲಾ ರಾಜ್ಯಗಳಿಗಿಂತ ಮೊದಲು ಈ ನೀತಿಯನ್ನು ಕರ್ನಾಟಕದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ದಾಪುಗಾಲನ್ನಿಟ್ಟಿದ್ದೇವೆ ಎಂದರು.

ಈ ಪ್ರಮುಖ ಶೃಂಗಮೇಳದ ಧ್ಯೇಯವಾಖ್ಯವಾದ 'ನೆಕ್ಸ್ಟ್ ಈಸ್ ನೌ' ಶಿಕ್ಷಣ ಕ್ಷೇತ್ರಕ್ಕೆ, ನಮ್ಮ ದೇಶಕ್ಕೆ, ಪ್ರಮುಖವಾಗಿ ಕರ್ನಾಟಕ ರಾಜ್ಯಕ್ಕೆ ಅತ್ಯಂತ ಗಮನಾರ್ಹವಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತು ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ಇದೇ ಜುಲೈ 29ರಂದು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಮಾನವಾದ ಹಾಗೂ ನ್ಯಾಯಯುತವಾದ ಸಮಾಜವನ್ನು ರೂಪಿಸುವ ಉದಾತ್ತ ಧ್ಯೇಯದೊಂದಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ ಎಂದರು.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ಮಂಚೂಣಿಯಲ್ಲಿದೆ. ಇದು ಶೈಕ್ಷಣಿಕ ಕ್ಷೇತ್ರದಲ್ಲಿ ನಾವು ಬಲಯುತವಾಗಿರುವುದರ ಫಲವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ಮುಂಚಿನಿಂದಲೂ ಬೇರೆಲ್ಲಾ ರಾಜ್ಯಗಳಿಗೆ ಮಾದರಿಯಾಗುವ ಉಪಕ್ರಮಗಳನ್ನು ಜಾರಿಯಲ್ಲಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಅಂತಿಮ ವರದಿಯನ್ನು ರೂಪಿಸುವಲ್ಲಿ ಹಲವಾರು ವ್ಯಕ್ತಿಗಳು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ಸೆಪ್ಟೆಂಬರ್ 1ರಿಂದ 25ರವರೆಗೆ ರಾಜ್ಯದ ಅಸಂಖ್ಯ ಶಿಕ್ಷಕರು, ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳು, ಎಸ್​​ಡಿಎಂಸಿ ಸದಸ್ಯರು, ಖಾಸಗಿ ಶಾಲೆಗಳ ಮುಖ್ಯಸ್ಥರು, ಪೋಷಕರ ಸಂಘಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳನ್ನು ಸಂಪರ್ಕಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವುದರ ಕುರಿತಂತೆ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಈ ವರದಿಯನ್ನು ತಯಾರಿಸಲಾಗಿದೆ. ಹಾಗಾಗಿ ಈ ನೀತಿಯನ್ನು ನಾವು ಅಳವಡಿಸಿಕೊಳ್ಳಲು ಪೂರಕವಾದ ವಾತಾವರಣ ನಮ್ಮ ರಾಜ್ಯದಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶೈಕ್ಷಣಿಕ ವ್ಯವಸ್ಥೆಗೆ ಒಂದು ಹೊಸ ದಿಸೆಯನ್ನು ಕಲ್ಪಿಸಲಿದ್ದು, ರಾಜ್ಯದಲ್ಲಿ ಈ ವರದಿ ಸಹ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವಾರು ಪ್ರಗತಿಪರವಾದ ಬದಲಾವಣೆಗೆ ನಾಂದಿಯಾಗಲಿದೆ ಎಂದು ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷವಾಗಿ ವರದಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಾದ ತುರ್ತು ಜವಾಬ್ದಾರಿ ನಮ್ಮ ಮುಂದಿದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದೂರದೃಷ್ಟಿ ನಾಯಕತ್ವದಲ್ಲಿ 'ನೆಕ್ಸ್ಟ್ ಇನ್' ಕರ್ನಾಟಕವನ್ನು ಜಾರಿಗೊಳಿಸಲು ಮುಂದಾಗಿದ್ದು, ಸುಧಾರಿತ ಶೈಕ್ಷಣಿಕ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಮುಂದಾಗಿದ್ದೇವೆ ಎಂದರು.

ನೂತನ ಶಿಕ್ಷಣ ನೀತಿಯು ಎಲ್ಲಾ ಬಲಿಷ್ಠ ಅಡಿಪಾಯದ ನೀತಿಯೊಂದಿಗೆ ನಮ್ಮ ಮಕ್ಕಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಸಮರ್ಥ ವೇದಿಕೆಯಾಗಲಿದೆ. ಅದೇ ರೀತಿ ಈ ವರದಿ ಹಾಗೂ ಅದರ ಸದಾಶಯವನ್ನು ಅನುಷ್ಠಾನಗೊಳಿಸುವ ಸಂಬಂಧ ನಾವು ಹೆಚ್ಚು ಸಾರ್ವಜನಿಕ ಚರ್ಚೆಗೆ ಮುಂದಾಗಬೇಕಿದೆ. ವರದಿಯನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳು ಅನುಮೋದಿಸಿದ ನಂತರ ಯಥಾವತ್ತಾಗಿ ಅನುಷ್ಠಾನಗೊಳಿಸಲು ಸರ್ಕಾರವು ಉತ್ಸುಕವಾಗಿದೆ. ಇದರ ಆಧಾರದಲ್ಲಿ ಸಾಂಸ್ಥಿಕವಾದ ಮತ್ತು ಶೈಕ್ಷಣಿಕವಾದ ನಿರ್ಣಯಗಳನ್ನು ಕಾಲಮಿತಿಯಲ್ಲಿ ಅಳವಡಿಸಿಕೊಳ್ಳಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಜಾಗತಿಕ ಅಗತ್ಯಗಳಿಗನುಗುಣವಾಗಿ ಬಾಲ್ಯ ಶಿಕ್ಷಣವನ್ನು ಮಾರ್ಪಾಡುಗೊಳಿಸಲಾಗುವುದು. ಶೈಕ್ಷಣಿಕ ಶಾಸ್ತ್ರದ ಮಟ್ಟಕ್ಕನುಗುಣವಾಗಿ ಭಾರತೀಯ ಜ್ಞಾನವನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳಲಾಗುತ್ತದೆ. ಮಾತೃ ಭಾಷಾ ಶಿಕ್ಷಣಕ್ಕೆ ಆದ್ಯತೆ, ಪರೀಕ್ಷಾ ವ್ಯವಸ್ಥೆಯ ಸುಧಾರಣೆ, ಶಾಲೆಗಳಲ್ಲಿ ವೃತ್ತಿ ಶಿಕ್ಷಣ ಪಠ್ಯಕ್ರಮ, ಶಿಕ್ಷಕರ ತರಬೇತಿ ಸಂವರ್ಧನೆ, ಸೇವಾ ಪೂರ್ವ ಶಿಕ್ಷಣದ ಬಲವರ್ಧನೆ, ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದುಳಿದ ಜಿಲ್ಲೆಗಳ ಶೈಕ್ಷಣಿಕ ಸುಧಾರಣೆಗಾಗಿ ವಿಶೇಷ ಶಿಕ್ಷಣ ವಲಯಗಳ ಸ್ಥಾಪನೆ, ನಮ್ಮ ಮಾನವ ಶಕ್ತಿಯನ್ನು ಪೂರ್ಣ ಬಳಕೆ ಮಾಡಿಕೊಳ್ಳಲು ಶಾಲಾ ಸಂಕೀರ್ಣಗಳ ಸೃಷ್ಟಿ ಸೇರಿದಂತೆ ಶಿಕ್ಷಣ ಇಲಾಖೆಗೆ ನವ ಮನ್ವಂತರವನ್ನು ಕಲ್ಪಿಸುವ ಸಂಕಲ್ಪವನ್ನು ನಮ್ಮ ಸರ್ಕಾರವು ಹೊಂದಿದೆ ಎಂದು ಸಚಿವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.