ETV Bharat / state

ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಲಭ್ಯ: ಸಚಿವ ಎಂ.ಬಿ. ಪಾಟೀಲ್

''ರಾಜ್ಯದ ಬಹುತೇಕ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳು ಉನ್ನತೀಕರಣಗೊಳ್ಳಬೇಕಿದೆ'' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.

Minister M B Patil
ಎಲ್ಲಾ ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಲಭ್ಯ: ಸಚಿವ ಎಂ.ಬಿ. ಪಾಟೀಲ್
author img

By

Published : Jul 14, 2023, 4:38 PM IST

ಬೆಂಗಳೂರು: ''ರಾಜ್ಯದಲ್ಲಿರುವ ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಒಂದು ಅವಧಿಗೆ ಕ್ರಮ ಕೈಗೊಂಡು, ಮುಂದಿನ ಹಂತದ ನಿರ್ವಹಣೆಯನ್ನು ಸ್ಥಳಿಯ ಕೈಗಾರಿಕಾ ಸಂಘಗಳಿಗೆ ಒಪ್ಪಿಸಲು ಕ್ರಮವಹಿಸುವುದು'' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಶಾಸಕ ಧೀರಜ್ ಮುನಿರಾಜು ಪ್ರಶ್ನಿಸಿದರು. ''ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿನ ಕೈಗಾರಿಕಾ ಪ್ರದೇಶವನ್ನು 25 ವರ್ಷದ ಹಿಂದೆ ನಿರ್ಮಿಸಲಾಗಿದೆ. ಪ್ರಸ್ತುತ ದಿನಗಳಿಗೆ ಅಗತ್ಯವಾದ ಮೂಲ ಸೌಭ್ಯಗಳನ್ನು ಉನ್ನತೀಕರಿಸಬೇಕು'' ಎಂದು ಒತ್ತಾಯಿಸಿದರು.

ನಂತರ ಉತ್ತರ ನೀಡಿದ ಸಚಿವ ಎಂ.ಬಿ. ಪಾಟೀಲ್, ''ರಾಜ್ಯದ ಬಹುತೇಕ ಕೈಗಾರಿಕಾ ಪ್ರದೇಶಗಳ ಮೂಲ ಸೌಲಭ್ಯಗಳು ಉನ್ನತೀಕರಣಗೊಳ್ಳಬೇಕಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಒಂದು ಅವಧಿಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಪುನರಾಭಿವೃದ್ಧಿಯ ಬಳಿಕ ಸದರಿ ಕೈಗಾರಿಕಾ ಪ್ರದೇಶಗಳ ನಿರ್ವಹಣೆಯನ್ನು ಸ್ಥಳೀಯ ಕೈಗಾರಿಕಾ ಸಂಘಗಳಿಗೆ ವಹಿಸಲಾಗುವುದು. ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲದಲ್ಲಿ ಶೇ.70ರಷ್ಟನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಬಳಕೆ ಮಾಡಿ, ಬಾಕಿ ಉಳಿದ ಶೇ.30ರಷ್ಟನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.

''ಆಪಲ್ ಫೋನ್ ತಯಾರಿಸುವ ಫಾಕ್ಸೋನ್ ಸಂಸ್ಥೆ ದೊಡ್ಡ ಬಳ್ಳಾಪುರದಲ್ಲಿ 300 ಎಕರೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದೆ ಬಂದಿದೆ. ಒಂದು ಬಿಲಿಯನ್ ಡಾಲರ್ ಸುಮಾರು 8 ಸಾವಿರ ಕೋಟಿ ರೂಪಾಯಿ ಹೂಡಿಕೆಯ ಈ ಘಟಕದಿಂದ ಮೊದಲ ಹಂತದಲ್ಲಿ 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. ಸಂಸ್ಥೆಗೆ ಭೂಮಿ ಮಂಜೂರಿಗೆ ಕೆಲ ಸಮಸ್ಯೆಗಳಿದ್ದವು, ತಾವೇ ಖುದ್ದಾಗಿ ನಾಲ್ಕು ಬಾರಿ ಸಭೆ ನಡೆಸಿ ಬಗೆ ಹರಿಸಿದ್ದೇನೆ. ಸಂಸ್ಥೆಯನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ'' ಎಂದು ತಿಳಿಸಿದರು.

ಮರಳು ಗಣಿಗಾರಿಕೆ ಸಮಸ್ಯೆ ಕುರಿತು ಸಭೆ: ಮರಳುಗಣಿಗಾರಿಕೆಯ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಶಾಸಕರ ಜೊತೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಆರು ನದಿಗಳಿವೆ. ಮರಳಿನ ಅಕ್ರಮ ಗಣಿಕಾರಿಗೆ ನಡೆಯುತ್ತಿದೆ. ಅದನ್ನು ನಿಲ್ಲಿಸಲು ಕಠಿಣ ಕ್ರಮ ಕೈಗೊಂಡಾಗ 45 ಸಾವಿರ ರೂ. ಇದ್ದ ಮರಳಿನ ಬೆಲೆ ಒಂದು ಲಕ್ಷ ರೂಪಾಯಿ ದಾಟಿದೆ. ಮನೆ ಕಟ್ಟಲು, ಸರ್ಕಾರಿ ಕಾಮಗಾರಿ ಕೈಗೊಳ್ಳಲು ತೊಂದರೆಯಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯದಿದ್ದರೆ ಬೇಕಾಬಿಟ್ಟಿ ಮರಳು ತೆಗೆಯುತ್ತಾರೆ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪರವಾಗಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಶಾಸಕರ ಅಭಿಪ್ರಾಯವನ್ನು ಅನುಮೋದಿಸಿದರು. ಮರಳು ಗಣಿಗಾರಿಕೆಯ ಸಮಸ್ಯೆ 20 ವರ್ಷದಿಂದ ಬಾಕಿ ಉಳಿದಿದೆ. ನಾನು ಕಂಡಂತೆ ಐದು ಸರ್ಕಾರಗಳು ಬದಲಾಗಿವೆ. ಸಮಸ್ಯೆ ಬಗೆ ಹರಿದಿಲ್ಲ. ಅದಕ್ಕಾಗಿ ನಮ್ಮ ಸರ್ಕಾರ ಭಿನ್ನವಾಗಿ ಆಲೋಚನೆ ನಡೆಸಿದೆ. ಈ ಅಧಿವೇಶನ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಶಾಸಕರ ಸಭೆ ಕರೆದು ಸಮಸ್ಯೆಯನ್ನು ಯಾವ ರೀತಿ ಬಗೆ ಹರಿಸಬೇಕು ಎಂದು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

ಆಲೆಮನೆ ಅಭಿವೃದ್ಧಿ: ದೇಶಿಯ ಬೆಲ್ಲ ಉತ್ಪಾದನೆಯ ಆಲೆಮನೆಗಳ ಅಭಿವೃದ್ಧಿಗೆ ಆತ್ಮನಿರ್ಭರ ಭಾರತದ ಅಡಿ ಅಗತ್ಯ ನೆರವು ನೀಡುವ ಜೊತೆಗೆ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ನಿರಪೇಕ್ಷಣ ಪತ್ರ ಕೊಡಿಸಲು ಸರಳ ಮಾರ್ಗ ಅನುಸರಿಸುವ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಪ್ರಶ್ನೋತ್ತರ ವೇಳೆ ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಪ್ರಶ್ನೆಗೆ ಉತ್ತರಿಸಿದರು.

ಇದಕ್ಕೂ ಮುನ್ನ ಶಾಸಕ ರವಿಕುಮಾರ್ ಪ್ರಶ್ನೆೇ ಕೇಳಿ, ಮಂಡ್ಯ ಜಿಲ್ಲೆಯಲ್ಲಿ 614 ಆಲೆಮನೆಗಳಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಆದರೆ 1,050ಕ್ಕೂ ಹೆಚ್ಚು ಆಲೆ ಮನೆಗಳು ಅಸ್ತಿತ್ವದಲ್ಲಿವೆ. ಬಹುತೇಕ ಊರಿನ ಮಧ್ಯದಲ್ಲಿ ಅವು ಕೆಲಸ ನಿರ್ವಹಿಸುತ್ತವೆ. ಜಿಲ್ಲೆಯಲ್ಲಿರುವ ಮೂರು ಸಕ್ಕರೆ ಕಾರ್ಖನೆಗಳು 33 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿವೆ. ಬಾಕಿ ಉಳಿದ ಕಬ್ಬನ್ನು ಬೆಲ್ಲವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಆದರೆ, ದೇಶಿವಾದ ಆಲೆ ಮನೆಗಳಿಗೆ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಪರವಾನಗಿ ಪಡೆಯುವಂತೆ ಕಿರುಕುಳ ನೀಡುತ್ತಿದೆ. ಊರಿನಿಂದ ಹೊರಗೆ ಆಲೆಮನೆ ನಡೆಸಲು ಒತ್ತಡ ಹಾಕುತ್ತಿದೆ ಎಂದು ಆಕ್ಷೇಪಿಸಿದರು.

ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಬಿ ಖಾತ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ: ಸಚಿವ ಭೈರತಿ ಸುರೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.