ETV Bharat / state

ಮುಗಿಯದ ದಾಖಲಾತಿ ಪ್ರಕ್ರಿಯೆ.. ಪ್ರಥಮ ಪಿಯು ಕಿರು ಪರೀಕ್ಷೆ ಕ್ಯಾನ್ಸಲ್​ - ಪ್ರಥಮ ಪಿಯುಗೆ ಕಿರು ಪರೀಕ್ಷೆ ಕ್ಯಾನ್ಸಲ್​

ದಾಖಲಾತಿ ಪೂರ್ಣಗೊಳ್ಳದ ಹಿನ್ನೆಲೆ ಪ್ರಥಮ ಪಿಯುಸಿ ತರಗತಿಗಳಿಗೆ ಮಾತ್ರ ಅರ್ಧ ವಾರ್ಷಿಕ ವೇಳಾಪಟ್ಟಿಯಲ್ಲಿ ಮರು ಹೊಂದಾಣಿಕೆ ಮಾಡಿ ಪ್ರಥಮ ಕಿರುಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

ಪ್ರಥಮ ಪಿಯುಗೆ ಕಿರು ಪರೀಕ್ಷೆ ಕ್ಯಾನ್ಸಲ್​
ಪ್ರಥಮ ಪಿಯುಗೆ ಕಿರು ಪರೀಕ್ಷೆ ಕ್ಯಾನ್ಸಲ್​
author img

By

Published : Sep 3, 2021, 12:57 PM IST

ಬೆಂಗಳೂರು: 2021-2022 ನೇ ಶೈಕ್ಷಣಿಕ ಸಾಲಿನ ಪ್ರಥಮ ಹಾಗೂ ದ್ವಿತೀಯ ಶೈಕ್ಷಣಿಕ ಚಟುವಟಿಕೆ ಆರಂಭಿಸುವ ಕುರಿತು ಪದವಿ ಪೂರ್ವ ಇಲಾಖೆ ಸುತ್ತೋಲೆ ಹೊರಡಿಸಿದೆ‌.

ಆಗಸ್ಟ್​​ 23 ರಿಂದ ಭೌತಿಕ ತರಗತಿ ಆರಂಭವಾಗಿದ್ದರೂ, ಇನ್ನು ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಎಸ್ಎಸ್ಎಲ್​ಸಿ ಫಲಿತಾಂಶ ಹೆಚ್ಚಳದಿಂದ ದಾಖಲಾತಿ ಸಮಯ ವಿಸ್ತರಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರಥಮ ಪಿಯುಸಿ ತರಗತಿಗಳಿಗೆ ಮಾತ್ರ ಅರ್ಧ ವಾರ್ಷಿಕ ವೇಳಾಪಟ್ಟಿಯಲ್ಲಿ ಮರು ಹೊಂದಾಣಿಕೆ ಮಾಡಿ ಪ್ರಥಮ ಕಿರುಪರೀಕ್ಷೆ ರದ್ದುಗೊಳಿಸಲಾಗಿದೆ.

ಆದರೆ, ಮೊದಲ ಎರಡು ಅವಧಿಗಳಿಗೆ ನಿರ್ದಿಷ್ಟ ಪಡಿಸಿರುವ ಪಠ್ಯಕ್ರಮಗಳ ಪೂರ್ಣ ಪಾಠಗಳನ್ನು ಬೋಧನೆ ಮಾಡಬೇಕು. ಈಗಾಗಲೇ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಗೊಳಿಸಿರುವ ಮಾರ್ಗಸೂಚಿಯಂತೆ ಅರ್ಧವಾರ್ಷಿಕ ಪರೀಕ್ಷೆ ನಡೆಸಲು ಈ ಮೂಲಕ ಸೂಚಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ / ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಿಸಲ್ಪಡುತ್ತಿರುವ ಪ್ರಥಮ ಪಿಯುಸಿ ಭೌತಿಕ ತರಗತಿಗಳನ್ನು ಸೆಪ್ಟೆಂಬರ್ 6 ರಿಂದ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶಿಸಿದೆ.‌

ಸೆಪ್ಟೆಂಬರ್ 6 ರಿಂದ ರಾಜ್ಯಾದ್ಯಂತ ಆರಂಭವಾಗುವ ಭೌತಿಕ ತರಗತಿಗಳ ಸಂಬಂಧ ನಿತ್ಯ ವಿದ್ಯಾರ್ಥಿಗಳ ಹಾಜರಾತಿಯನ್ನು SATS ನಲ್ಲಿ ಮಧ್ಯಾಹ್ನ 12.30 ರೊಳಗೆ ದಾಖಲಿಸುವಂತೆ ಆಯಾ ಜಿಲ್ಲಾ ಉಪನಿರ್ದೇಶಕರವರು ನಿಗಾವಹಿಸಲು ಸೂಚಿಸಿದೆ. ತರಗತಿಗಳನ್ನು ನಡೆಸದಿರುವುದು ಕಂಡು ಬಂದರೆ, ಆಯಾ ಜಿಲ್ಲಾ ಉಪನಿರ್ದೆಶಕರು ಕೂಡಲೇ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ ತರಗತಿಗಳು ನಡೆಯುವಂತೆ ಕ್ರಮವಹಿಸಿಸುವಂತೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.