ಬೆಂಗಳೂರು: ನಗರದ ಬಿನ್ನಿಮಿಲ್ ಬಳಿಯ ಪೊಲೀಸ್ ಕ್ವಾಟರ್ಸ್ನ ಕಟ್ಟಡದಲ್ಲಿ ಬಿರುಕು ಕಂಡುಬಂದ ಹಿನ್ನೆಲೆ ಸ್ಥಳಕ್ಕೆ ಇಂಜಿನಿಯರ್ಸ್ ತಂಡ ದೌಡಾಯಿಸಿದೆ. ಕಟ್ಟಡದ ಬಿ ಬ್ಲಾಕ್ನಲ್ಲಿ 1 ಅಡಿಯಷ್ಟು ಬಿರುಕು ಬಿಟ್ಟಿದ್ದು, ಈ ಹಿನ್ನೆಲೆ ಇಂಜಿನಿಯರ್ಸ್ ತಂಡ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿರುಕು ಬಿಟ್ಟ ಜಾಗದಲ್ಲಿ ಹಲಗೆಯಿಂದ ಮುಚ್ಚಲಾಗಿದ್ದು, ಯಾವ ಸಮಯದಲ್ಲಾದರೂ ಕಟ್ಟಡ ಕುಸಿಯುವ ಭೀತಿ ಎದುರಾಗಿದೆ.
32 ಕುಟುಂಬಗಳು ಶಿಫ್ಟ್:
ಜಪಾನ್ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು, ತಜ್ಞರ ವರದಿ ಬಂದ ಬಳಿಕ ಕಟ್ಟಡ ತೆರವಿನ ಬಗ್ಗೆ ನಿರ್ಧಾರ ಕೈಕೊಳ್ಳಲಾತ್ತದೆ. ಒಂದು ಸಮುಚ್ಚಯದಲ್ಲಿ 64 ಮನೆಗಳಿದ್ದು, ಈವರೆಗೆ 32 ಕುಟುಂಬಗಳನ್ನು ಖಾಲಿ ಮಾಡಿಸಲಾಗಿದೆ.
ನಾಗರಬಾವಿ, ಅನ್ನಪೂರ್ಣೇಶ್ವರಿ ನಗರ, ಮೈಸೂರು ರಸ್ತೆಯಲ್ಲಿರುವ ಕ್ವಾಟರ್ಸ್ಗೆ ಅವರನ್ನು ಶಿಫ್ಟ್ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೆಲವರು ಹಬ್ಬವಿದ್ದ ಕಾರಣ ಊರುಗಳಿಗೆ ತೆರಳಿದ್ದು, ಶೀಘ್ರವಾಗಿ ಅವರಿಗೂ ಮನೆ ಖಾಲಿ ಮಾಡುವಂತೆ ಸೂಚಿಸಲಾಗಿದೆ.
ಓದಿ: ನನಗೆ ರಾಜಕಾರಣದ ತರಬೇತಿ ನೀಡಿದ್ದೇ ಪದವಿ ಕಾಲೇಜು: ಆರಗ ಜ್ಞಾನೇಂದ್ರ