ETV Bharat / state

ರಕ್ತ ಕೊಟ್ಟೇವು 6ನೇ ವೇತನ ಬಿಡೆವು: ಪ್ರತಿಭಟನಾನಿರತ ಕಿಮ್ಸ್ ಸಿಬ್ಬಂದಿ ಎಚ್ಚರಿಕೆ - ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಕಛೇರಿಯ ಮುಂದೆ

6ನೇ ವೇತನಕ್ಕಾಗಿ ಆಗ್ರಹಿಸಿ ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಕಚೇರಿಯ ಮುಂದೆ ಸಾವಿರಾರು ನೌಕರರು ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಿಗಳಾಗಿ ರಕ್ತದಾನ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಎಂಪ್ಲಾಯಿಸ್ ಅಸೋಷಿಯೇಷನ್ ನಿಂದ ಕಳೆದ‌ ಮೇ‌ 9 ರಿಂದ ಈ ಮುಷ್ಕರ ಕೈಗೊಂಡಿದ್ದಾರೆ.

ಕಿಮ್ಸ್ ಸಿಬ್ಬಂದಿ ಮುಷ್ಕರ
author img

By

Published : May 21, 2019, 11:45 PM IST

ಬೆಂಗಳೂರು: ಒಕ್ಕಲಿಗರ ಸಂಘದ ಸಾವಿರಾರು ನೌಕರರು ಇಂದು ರಕ್ತದಾನ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಮುಷ್ಕರ ನಡೆಸಿದರು.

ಕಿಮ್ಸ್ ನೌಕರರ ಮುಷ್ಕರ ಇಂದಿಗೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಿಗೆ ರಕ್ತದಾನ ಮಾಡುವ ಮೂಲಕ, “ರಕ್ತ ಕೊಟ್ಟೇವು 6ನೇ ವೇತನ ಬಿಡೆವು” ಎಂಬ ಘೋಷಣೆಯೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು.‌

ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಕಚೇರಿಯ ಮುಂದೆ ಒಕ್ಕಲಿಗ ಸಂಘದ ಸಾವಿರಾರು ನೌಕರರು ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಿಗೆ ರಕ್ತದಾನ ಮಾಡಿದರು. ರಾಜ್ಯ ಒಕ್ಕಲಿಗರ ಸಂಘದ ಎಂಪ್ಲಾಯಿಸ್ ಅಸೋಷಿಯೇಷನ್ ನಿಂದ ಮೇ‌ 9 ರಿಂದಲೇ ಈ ಮುಷ್ಕರ ಆರಂಭವಾಗಿದೆ.

ನೌಕರರಿಗೆ 6ನೇ ವೇತನವನ್ನು ನೀಡಬೇಕೆಂಬ ಬೇಡಿಕೆಯ ಪತ್ರವನ್ನು ಕಳೆದ 6 ತಿಂಗಳ ಹಿಂದೆ ನೀಡಿದ್ದರೂ ಇದುವರೆಗೂ ಜಾರಿ ಮಾಡಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ವೇಳೆ ಮಾತಾನಾಡಿದ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ರಂಗರಾಜು, ಕಳೆದ ವರ್ಷ ಮೇ- ಜೂನ್ ತಿಂಗಳಿನಲ್ಲೂ ಪ್ರತಿಭಟನೆ ನಡೆಸಲಾಗಿತ್ತು. ಆಗ ಎಲ್ಲ ವೈದ್ಯರಿದ್ದರು, ನಂತರ ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳು ದೊರೆತಿವೆ. ಹಾಗಾಗಿ ಅವರೀಗ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ. ಈ ಮುಷ್ಕರದಿಂದ ಯಾವ ರೋಗಿಗಳಿಗೂ ತೊಂದರೆ ಉಂಟಾಗಿಲ್ಲ ಎಂದು ತಿಳಿಸಿದರು.

ಪ್ರತಿಭಟನಾನಿರತ ಕಿಮ್ಸ್ ಸಿಬ್ಬಂದಿಯಿಂದ ಎಚ್ಚರಿಕೆ

ವಿಭಿನ್ನವಾಗಿ ಪ್ರತಿಭಟನೆ ಮಾಡುವ ನಿಟ್ಟಿನಲ್ಲಿ ಈಗಾಗಲೇ 60 ಯುನಿಟ್ ನಷ್ಟು ರಕ್ತ ಸಂಗ್ರಹಿಸಲಾಗಿದೆ. ನೌಕರರಿಗೆ ನೀಡಬೇಕಾದ ಸವಲತ್ತುಗಳನ್ನು ಪೂರೈಸುವವರೆಗೂ ನಮ್ಮ ಈ ಮುಷ್ಕರ ನಿಲ್ಲುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಈ ವಿಷಯದ ಕುರಿತು ಮಾತುಕತೆ ನಡೆಸಲಾಗುವುದು ಅಂತ ತಿಳಿಸಿದರು.

Intro:ರಕ್ತ ಕೊಟ್ಟೇವು 6ನೇ ವೇತನ ಬಿಡವು; 13ನೇ ದಿನಕ್ಕೆ‌ಕಾಲಿಟ್ಟ ಕಿಮ್ಸ್ ಸಿಬ್ಬಂದಿಗಳ ಮುಷ್ಕರ..

ಬೆಂಗಳೂರು: ಒಕ್ಕಲಿಗ ಸಂಘದ ಸಾವಿರಾರು ನೌಕರರು  ಇಂದು ರಕ್ತ ದಾನ ಮಾಡುವ ಮೂಲಕ ವಿನೂತನ ಮುಷ್ಕರ ನಡೆಸಿದರು... ಇನ್ನು ಕಿಮ್ಸ್ ನೌಕರರ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟದೆ‌‌..‌ “ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ರೋಗಿ” ಗಳಾಗಿ ರಕ್ತ ದಾನ ಮಾಡುವ ಮೂಲಕ,
“ರಕ್ತ ಕೊಟ್ಟೇವು 6ನೇ ವೇತನ ಬಿಡವು”  ಎಂಬ ಘೋಷಣೆಯೊಂದಿಗೆ ವಿನೂತನ ಪ್ರತಿಭಟನೆ ನಡೆಸಿದರು.‌

ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಕಛೇರಿಯ ಮುಂದೆ ಒಕ್ಕಲಿಗ ಸಂಘದ ಸಾವಿರಾರು ನೌಕರರು ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಾಗಿ ರಕ್ತ ದಾನ ಮಾಡಿದರು..‌ ರಾಜ್ಯ ಒಕ್ಕಲಿಗರ ಸಂಘದ ಎಂಪ್ಲಾಯಿಸ್ ಅಸೋಷಿಯೇಷನ್ ನಿಂದ ಕಳೆದ‌ ಮೇ‌ 9 ರಿಂದ ಆರಂಭವಾದ ಮುಷ್ಕರ ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದೆ. 

ನೌಕರರಿಗೆ 6ನೇ ವೇತನವನ್ನು ನೀಡಬೇಕೆಂದು ಬೇಡಿಕೆಯ ಪತ್ರವನ್ನು ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಅಧಿಕಾರಿಯಾದ ಹೆಚ್.ಎಸ್. ಅಶೋಕಾನಂದ ಐಎಎಸ್ ಇವರಿಗೆ ಕಳೆದ 6 ತಿಂಗಳಿಂದ ಮನವಿ ಕೊಟ್ಟಿದ್ದು, ಇದುವರೆವಿಗೂ ಜಾರಿ ಮಾಡಲಿಲ್ಲ ಎಂಬ ಆರೋಪ ಪ್ರತಿಭಟನಾಕಾರದ್ದು..‌

ಇದೇ ವೇಳೆ ಮಾತಾನಾಡಿದ, ಪ್ರಧಾನ ಕಾರ್ಯದರ್ಶಿ ಆರ್. ರಂಗರಾಜು, ಕಳೆದ ವರ್ಷ ಮೇ- ಜೂನ್ ತಿಂಗಳಿನಲ್ಲೂ ಪ್ರತಿಭಟನೆ ನಡೆಸಲಾಗಿತ್ತು.. ಆಗ ವೈದ್ಯರು ಎಲ್ಲರೂ ಇದ್ದರು, ಅವರಿಗೆ ಬೇಕಾದ ಎಲ್ಲ ಸೌಲಭ್ಯವೂ ದೊರೆತ್ತಿದೆ.ಈಗ ನಮ್ಮ‌ ಈ ಪ್ರತಿಭಟನೆ ಯಿಂದ ದೂರ ಉಳಿದಿದ್ದಾರೆ..ಈ ಮುಷ್ಕರದಿಂದ ಯಾವ ರೋಗಿಗಳಿಗೂ ತೊಂದರೆ ಉಂಟಾಗಿಲ್ಲ ಅಂತ ತಿಳಿಸಿದರು..

ವಿಭಿನ್ನವಾಗಿ ಪ್ರತಿಭಟನೆ ಮಾಡುವ ನಿಟ್ಟಿನಲ್ಲಿ ಈಗಾಗಲೇ 60 ಯುನಿಟ್ ನಷ್ಟು ರಕ್ತ ಸಂಗ್ರಹವಾಗಿದೆ.. ನೌಕರರಿಗೆ ನೀಡಬೇಕಾದ ಸವಲತ್ತುಗಳನ್ನು ಪೂರೈಸುವ ವರೆಗೂ ನಮ್ಮ ಈ ಮುಷ್ಕರ ನಿಲ್ಲುವುದಿಲ್ಲ..‌ ಸರ್ಕಾರ ಮಟ್ಟದಲ್ಲಿ ಈ ವಿಷಯದ ಕುರಿತು ಮಾತುಕತೆ ನಡೆಸಲಾಗುವುದು ಅಂತ ತಿಳಿಸಿದರು..

KN_BNG_01_21_KIMS_PROTEST_SCRIPT_DEEPA_7201801
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.