ಆನೇಕಲ್: ತಮಿಳುನಾಡಿನ ಹೊಸೂರು ಬಳಿಯ ಗಿರಿಯನಹಳ್ಳಿ-ಆಲಹಳ್ಳಿಯಲ್ಲಿ ಬಳಿ ಆನೆ ದಾಳಿಯಿಂದ ರಾಗಿ ಬೆಳೆ ಸಂಪೂರ್ಣ ನಾಶವಾಗಿದೆ.
ರಾಗಿ ಬೆಳೆಯ ಜೊತೆಗೆ ಬಾಳೆ,ಹೂಕೋಸು ಟೊಮ್ಯಾಟೋ ಬೆಳೆಗಳು ಕೂಡ ನೆಲಕಚ್ಚಿವೆ. ಹೀಗಾಗಿ ಆನೆ ದಾಳಿಯಿಂದ ವರ್ಷಪೂರ್ತಿ ಕಷ್ಟುಪಟ್ಟು ಬೆಳೆ ನಾಶವಾಗರೋದನ್ನ ಕಂಡು ರೈತರು ಕಂಗಾಲಾಗಿದ್ದು,ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು,ಬನ್ನೇರುಘಟ್ಟ ಅರಣ್ಯದ ಸುತ್ತ 130 ಆನೆಗಳಿವೆ. ಅದರಲ್ಲಿ ತಮಿಳುನಾಡು-ಕರ್ನಾಟಕ ಗಡಿ ಅರಣ್ಯದಲ್ಲಿ 30 ಕಾಡಾನೆಗಳು ಅಲೆದಾಡುತ್ತವೆ.