ETV Bharat / state

ಮಹಾತೀರ್ಪಿಗೆ ಕರುನಾಡು ಸಜ್ಜು: ಕಮಲ ಅರಳುತ್ತಾ, 'ಕೈ' ಕಮಾಲ್ ಮಾಡುತ್ತಾ?.. ಜೆಡಿಎಸ್​​ ಆಗಲಿದೆಯಾ ಕಿಂಗ್ ಮೇಕರ್? - ಚುನಾವಣಾ ಆಯೋಗ

ವಿಧಾನಸಭಾ ಚುನಾವಣೆಯ ಮತ ಎಣಿಕೆಗಾಗಿ ರಾಜ್ಯಾದ್ಯಂತ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.

election-commission-preparations-for-statewide-vote-counting
ನಾಳೆ ವಿಧಾನಸಭಾ ಚುನಾವಣೆಯ ಮಹಾತೀರ್ಪಿಗೆ ಸಜ್ಜಾದ ಕರುನಾಡ
author img

By

Published : May 12, 2023, 8:26 PM IST

Updated : May 13, 2023, 6:43 AM IST

ಬೆಂಗಳೂರು: ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಮಹಾತೀರ್ಪು ಹೊರಬೀಳಲಿದೆ. ಮತಯಂತ್ರಗಳಲ್ಲಿ ಭದ್ರವಾಗಿರುವ ರಾಜಕೀಯ ಪಕ್ಷಗಳ, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇತ್ತ ರಾಜ್ಯ, ರಾಷ್ಟ್ರದ ಗಮನ ಸಳೆದಿರುವ ಮತ ಎಣಿಕೆಗಾಗಿ ರಾಜ್ಯಾದ್ಯಂತ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.‌ ಬೆಳಗ್ಗೆ 8 ಗಂಟೆಯಿಂದ ರಾಜ್ಯಾದ್ಯಂತ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

ರಾಜಕೀಯ ಪಕ್ಷಗಳ ಹೃದಯ ಬಡಿತ ಹೆಚ್ಚಾಗಿದೆ. ಶನಿವಾರವು ಹೈ ವೋಲ್ಟೇಜ್ ಸಮರ ಕಣದ ನಿರ್ಣಾಯಕ ದಿನ. ಮತಪ್ರಭುಗಳು ಯಾರ ಹಣೆಬರಹ ಹೇಗೆ ಬರದಿದ್ದಾರೆ ಎಂಬ ಮಹಾ ತೀರ್ಪು ಹೊರಬೀಳಲಿದೆ. ಕರುನಾಡ ಕುರು ಕ್ಷೇತ್ರದಲ್ಲಿ ಮತಪ್ರಭುಗಳ ಅಂತಿಮ ತೀರ್ಪಿಗೆ ಎಲ್ಲರೂ ಕಾತರದಿಂದ ಎದುರು ನೋಡುತ್ತಿದ್ದಾರೆ. ಇತ್ತ ರಣಕಣದಲ್ಲಿನ ಕದನ ಕಲಿಗಳ ಭವಿಷ್ಯ ನಿರ್ಧಾರವಾಗಲಿದೆ.

ರಣರೋಚಕ ಕುತೂಹಲಗಳಿಗೆ ಫಲಿತಾಂಶ ಸಾಕ್ಷಿಯಾಗಲಿದೆ. ಹೈ ವೋಲ್ಟೇಜ್ ಕ್ಷೇತ್ರಗಳ ಕದನ ಕುತೂಹಲ, ಘಟಾನುಘಟಿ ಹುರಿಯಾಳುಗಳ ಭವಿಷ್ಯ, ಯಾರಿಗೆ ವಿಜಯದ ಹಾರ, ಯಾರಿಗೆ ಸೋಲಿನ ಭಾರ ಸೇರಿದಂತೆ ಸಮರಕಣದ ಹಲವು ಅಚ್ಚರಿಗಳಿಗೆ ನಾಳಿನ ಮಹಾ ತೀರ್ಪು ಉತ್ತರ ನೀಡಲಿದೆ. ಆ ಮೂಲಕ ರಾಜ್ಯದ ಗದ್ದುಗೆ ಹಿಡಿಯುವವರು ಯಾರು ಎಂಬುದು ಸ್ಪಷ್ಟವಾಗಲಿದೆ. ಕಮಲ ಅರಳುತ್ತಾ? ಅಥವಾ ಕೈ ಕಮಾಲ್ ಮಾಡುತ್ತಾ ಅಥವಾ ಮತ್ತೆ ಜೆಡಿಎಸ್ ಕಿಂಗ್ ಮೇಕರದ ಆಗುತ್ತಾ ಎಂಬ ಕುತೂಹಲಕ್ಕೆ ಉತ್ತರ ಸಿಗಲಿದೆ.

ರಣಕಣದಲ್ಲಿ ಒಟ್ಟು 2,615 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. ಈ ಪೈಕಿ 2,430 ಪುರುಷ ಅಭ್ಯರ್ಥಿಗಳಾಗಿದ್ದರೆ, 184 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಒಬ್ಬರು ಇತರೆ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಪಕ್ಷ 224 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ. ಕಾಂಗ್ರೆಸ್ 223 ಹುರಿಯಾಳುಗಳನ್ನು ಕಣಕ್ಕಿಳಿಸಿದೆ. ಇನ್ನು ಜೆಡಿಎಸ್ ಪಕ್ಷದಿಂದ ಒಟ್ಟು 209 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. ಆಮ್ ಆದ್ಮಿ ಪಾರ್ಟಿಯಿಂದ 209 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಬಿಎಸ್​ಪಿಯಿಂದ 133 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯಿಂದ 195 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 254 ಇತರೆ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿದ್ದರೆ, 918 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದು, ಅವರೆಲ್ಲರ ಹಣೆಬರಹ ನಾಳೆ ನಿರ್ಧಾರವಾಗಲಿದೆ. ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಫಲಿತಾಂಶ ಏನೆಂಬ ಬಗ್ಗೆ ಚಿತ್ರಣ ಸಿಗಲಿದೆ.

ಮತ ಎಣಿಕೆಗೆ ಸಕಲ ಸಿದ್ಧತೆ: ರಾಜ್ಯಾದ್ಯಂತ 34 ಕಡೆಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.‌ ಈ ಸಂಬಂಧ ಸಕಲ ಸಿದ್ಧತೆಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ. ಬೆಂಗಳೂರಿನಲ್ಲಿ ನಾಲ್ಕು ಕಡೆ ಸೇರಿ ರಾಜ್ಯದಲ್ಲಿ ಒಟ್ಟು 34 ಕಡೆ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಯ ಸಿಬ್ಬಂದಿ 3 ವಿಧದಲ್ಲಿ ಇರಲಿದ್ದು, ಪ್ರತಿ ಟೇಬಲ್​ಗೆ ಮೈಕ್ರೋ ಅಬ್ಸರ್ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ.

ಬೆಳಗ್ಗೆ 7.30ಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮತಯಂತ್ರಗಳು ಇರುವ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ. ಬಳಿಕ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಸಲಾಗುತ್ತದೆ. ಬಳಿಕ EVMಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ಮಾಡಲಾಗುವುದು. ಪ್ರತಿ ಎಣಿಕಾ ಕೊಠಡಿಗೆ ಸಾಮಾನ್ಯವಾಗಿ 10 ರಿಂದ 18 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ.

ಕ್ಷೇತ್ರಕ್ಕನುಗುಣವಾಗಿ ಮತ ಎಣಿಕಾ ಟೇಬಲ್​ಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 2-3 ಟೇಬಲ್ ಗಳನ್ನು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲಿಡಲಾಗಿರುತ್ತದೆ. ಪ್ರತಿ ಟೇಬಲ್ ಗಳಿಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆಯಿರುತ್ತದೆ. ಎಣಿಕಾ ಮೇಲ್ವಿಚಾರಕರು ಹಾಗೂ ಎಣಿಕಾ ಸಹಾಯಕರಿಗೆ ತರಬೇತಿಯನ್ನು ನೀಡಲಾಗಿದೆ. ಎಣಿಕಾ ಕೇಂದ್ರಗಳಲ್ಲಿ ಎಲ್ಲಾ ಕಡೆ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಿದ್ದು, ಮೂರು ಹಂತದಗಳಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಈ ಬಾರಿ ಒಟ್ಟು 16 ಕ್ಷೇತ್ರಗಳಲ್ಲಿ 16ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ 16 ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗಿದೆ. ಒಂದು ಇವಿಎಂನಲ್ಲಿ ಗರಿಷ್ಠ 16 ಅಭ್ಯರ್ಥಿಗಳನ್ನು ಹೆಸರು ಹಾಗೂ ಚಿಹ್ನೆಗೆ ವ್ಯವಸ್ಥೆ ಇರುತ್ತದೆ. ಅದಕ್ಕಿಂತ ಹೆಚ್ಚುತ್ತಾ ಹೋದಂತೆ ಪ್ರತಿ 16 ಅಭ್ಯರ್ಥಿಗಳಿಗೆ ಒಂದರಂತೆ ಹೆಚ್ಚುವರಿ ಮತಯಂತ್ರಗಳ ಸಂಪರ್ಕ ಕಲ್ಪಿಸಲಾಗುತ್ತದೆ. ಅದರಂತೆ ಈ ಬಾರಿ ಒಟ್ಟು 16 ಕ್ಷೇತ್ರಗಳಲ್ಲಿ ಎರಡು ಮತಯಂತ್ರಗಳನ್ನು ಬಳಸಲಾಗಿದೆ.

ಮತ ಎಣಿಕೆ ಸಿಬ್ಬಂದಿ ಎಷ್ಟು?: 224 ಕ್ಷೇತ್ರಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ರಾಜ್ಯದ 34 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗಾಗಿ 317 ಎಆರ್​ಓಗಳನ್ನು ನಿಯೋಜಿಸಲಾಗಿದೆ. 4,256 ಕೌಂಟಿಂಗ್ ಉಸ್ತುವಾರಿಗಳು, 4,256 ಎಣಿಕೆ ಸಹಾಯಕರು ಹಾಗೂ 4,256 ಮೈಕ್ರೋ ಅಬ್ಸರ್ವರ್ ಗಳನ್ನು ನಿಯೋಜಿಸಲಾಗಿದೆ. ರಾಜ್ಯಾದ್ಯಂತ ಒಟ್ಟು ಮತ ಎಣಿಕೆಗಾಗಿ 306 ಹಾಲ್ ಗಳ ವ್ಯವಸ್ಥೆ ಮಾಡಲಾಗಿದ್ದರೆ, ಒಟ್ಟು 4,256 ಮತ ಎಣಿಕಾ ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಎಣಿಕಾ ಕೊಠಡಿಗೆ 10 ರಿಂದ 18 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕನುಗುಣವಾಗಿ ಮತ ಎಣಿಕಾ ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತ ಎಣಿಕೆ ಕೇಂದ್ರಗಳಲ್ಲಿ ಹೈ ಸೆಕ್ಯೂರಿಟಿ: ರಾಜ್ಯದ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಇರಿಸಲಾಗಿರುವ ಎಲ್ಲಾ ಸ್ಟ್ರಾಂಗ್ ರೂಮ್‌ಗಳಲ್ಲಿ ಪೊಲೀಸರೊಂದಿಗೆ ಅರೆಸೇನಾ ಪಡೆಗಳು ಕಾವಲು ಕಾಯುತ್ತಿವೆ. ಎಲ್ಲ ಕೇಂದ್ರಗಳಿಗೂ ಮೂರು ಹಂತದ ಭದ್ರತೆ ಒದಗಿಸಲಾಗಿದೆ. ಪ್ರತಿ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಅಧಿಕೃತ ಪಾಸ್‌ಗಳನ್ನು ಹೊಂದಿರುವ ಅಭ್ಯರ್ಥಿಗಳು ಮತ್ತು ಪಕ್ಷದ ಏಜೆಂಟ್‌ಗಳನ್ನು ಹೊರತುಪಡಿಸಿ, ಮತ ಎಣಿಕೆ ಕೇಂದ್ರದೊಳಗೆ ಇತರರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ. ಮತ ಎಣಿಕೆ ಕೇಂದ್ರದ 200 ಮೀಟರ್ ಪ್ರದೇಶದಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ. ಹಾಗಾಗಿ ಮತ ಎಣಿಕೆ ಕೇಂದ್ರಗಳ ಬಳಿ 5ಕ್ಕಿಂತಲೂ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಮೆರವಣಿಗೆ, ಸಮಾರಂಭ, ವಿಜಯೋತ್ಸವ, ಸಮಾವೇಶ ನಡೆಸುವಂತಿಲ್ಲ. ಘೋಷಣೆ ಕೂಗುವುದು, ವಾದ್ಯ ಬಾರಿಸುವುದನ್ನು ನಿಷೇಧಿಸಲಾಗಿದ್ದು, ಶುಕ್ರವಾರ ರಾತ್ರಿ 10ರಿಂದ ಶನಿವಾರ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ:ವಿಧಾನಸಭಾ ಚುನಾವಣಾ ಫಲಿತಾಂಶ: ಮತ ಎಣಿಕಾ ಕೇಂದ್ರಗಳ ಸುತ್ತ ವಾಹನ ಸಂಚಾರ, ನಿಲುಗಡೆಗೆ ನಿರ್ಬಂಧ

Last Updated : May 13, 2023, 6:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.