ETV Bharat / state

ಚುನಾವಣಾ ಆಯೋಗದಿಂದ ಕಾಂಗ್ರೆಸ್ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಷೋಕಾಸ್ ನೋಟಿಸ್ - BJP State President Nalin Kumar Kateel

ಡಿ.ಕೆ ಶಿವಕುಮಾರ್​ ಮತ್ತು ನಳೀನ್​ ಕುಮಾರ್​ ಕಟೀಲ್​ ಅವರಿಗೆ ಚುನಾವಣೆ ಆಯೋಗ ಷೋಕಾಸ್ ನೋಟಿಸ್ ಜಾರಿಗೊಳಿಸಿದೆ.​

ಶೋಕಾಸ್ ನೋಟೀಸ್
ಶೋಕಾಸ್ ನೋಟೀಸ್
author img

By

Published : May 8, 2023, 10:53 PM IST

ಬೆಂಗಳೂರು : ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಬಿಜೆಪಿ ಹಾಗೂ ಕಾಂಗ್ರೆಸ್ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಪರಸ್ಪರ ದೂರು ನೀಡಿದ್ದು, ಚುನಾವಣಾ ಆಯೋಗ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಕಾರಣ ಕೇಳಿ ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ಚುನಾವಣಾ ಆಯೋಗ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪದ ಜಾಹೀರಾತು ವಿರುದ್ಧ ಕಾಂಗ್ರೆಸ್ ನಿಯೋಗ ನೀಡಿದ ಹಿನ್ನೆಲೆ ಚುನಾವಣಾ ಆಯೋಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ನೋಟಿಸ್ ನೀಡಿದ್ದಾರೆ. ಇತ್ತ ಬಿಜೆಪಿ ನಿಯೋಗ ಸೋನಿಯಾ ಗಾಂಧಿ ಪ್ರಚಾರದ ವೇಳೆ ಕರ್ನಾಟಕದ ಪ್ರತ್ಯೇಕತೆ ಬೆಂಬಲಿಸಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನ ಮೇರೆಗೆ ಚುನಾವಣಾ ಆಯೋಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ : ವಿಧಾನಸಭಾ ಚುನಾವಣೆಗೆ ಬೆಂಗಳೂರು ಪೊಲೀಸರ ಸಕಲ ಸಿದ್ಧತೆ: ನಿರ್ಭೀತ ಮತದಾನಕ್ಕೆ ವೇದಿಕೆ ಸಿದ್ಧ

ಕಾಂಗ್ರೆಸ್ ಪಕ್ಷ ರಾಜ್ಯ ಬಿಜೆಪಿ ವಿರುದ್ಧ ಲಂಚದ ದರಪಟ್ಟಿ ಆರೋಪಿಸಿ ಜಾಹೀರಾತು ನೀಡಿತ್ತು. ಇದರ ವಿರುದ್ಧ ರಾಜ್ಯ ಬಿಜೆಪಿ ನಿಯೋಗ ಪುರಾವೆ ಇಲ್ಲದೆ ಸುಳ್ಳು ಆರೋಪದ ಲಂಚದ ದರಪಟ್ಟಿಯ ಜಾಹೀರಾತು ನೀಡಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಸಂಬಂಧ ಚುನಾವಣಾ ಆಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರಿಗೆ ನೋಟಿಸ್ ನೀಡಿತ್ತು.

ಇತ್ತ ಬಿಜೆಪಿ ಕೂಡ ಕಾಂಗ್ರೆಸ್ ಅಧಿಕಾರವಧಿಯ ಭ್ರಷ್ಟಾಚಾರಗಳ ಪಟ್ಟಿ ಬಗ್ಗೆ ಜಾಹೀರಾತು ನೀಡಿತ್ತು. ಇದರ ವಿರುದ್ಧ ಕಾಂಗ್ರೆಸ್ ನಿಯೋಗ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ದೂರು ನೀಡಿತ್ತು. ಈ ಸಂಬಂಧ ಇದೀಗ ಚುನಾವಣಾ ಆಯೋಗ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ನೋಟೀಸ್ ನೀಡಿದೆ. ಮಂಗಳವಾರ ರಾತ್ರಿ 8 ಗಂಟೆಯೊಳಗೆ ಕಾರಣ ನೀಡುವಂತೆ ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ : 28 ಕ್ಷೇತ್ರಗಳ 92 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬಾಕಿ: ಅಫಿಡವಿಟ್​ ಮಾಹಿತಿ

ಇನ್ನು ಸೋನಿಯಾ ಗಾಂಧಿ ಪ್ರಚಾರ ವೇಳೆ ಕಾಂಗ್ರೆಸ್ ಕರ್ನಾಟಕದ ಏಕತೆ, ಪ್ರತಿಷ್ಠೆ ಹಾಗೂ ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡಲು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಕನ್ನಡಿಗರಿಗೆ ಸಂದೇಶ ನೀಡಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಸಂಬಂಧ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಕರ್ನಾಟಕದ ಪ್ರತ್ಯೇಕತೆಗೆ ಇಂಬು ನೀಡುವ ಹೇಳಿಕೆ ನೀಡಿರುವುದರ ವಿರುದ್ಧ ದೂರು ನೀಡಿದೆ. ಈ ಸಂಬಂಧ ಚುನಾವಣಾ ಆಯೋಗ ಕಾಂಗ್ರೆಸ್ ಅಧ್ಯಕ್ಷರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ : ಹೈ ವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ತೆರೆ: 48 ತಾಸು ಶೂನ್ಯ ವೇಳೆ, ಇನ್ನೇನಿದ್ದರು ಮನೆ ಮನೆ ಪ್ರಚಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.