ETV Bharat / state

ಲಾಕ್​ಡೌನ್ ಅಂತೆ ಲಾಕ್​ಡೌನ್.. ಬದನೆಕಾಯಿ: ಖಂಡ್ರೆ ಟ್ವೀಟ್ - ಲಾಕ್​ಡೌನ್

ಸರ್ಕಾರ ಕಾಟಾಚಾರಕ್ಕೆ ಲಾಕ್​ಡೌನ್ ಮಾಡ್ತಾ ಇದೆ. ಲಾಕ್​ಡೌನ್ ವಿಚಾರದಲ್ಲಿ ಗಂಭೀರತೆ ಕಾಣಿಸ್ತಾ ಇಲ್ಲ. ಲಾಕ್​ಡೌನ್ ಕಟ್ಟು ನಿಟ್ಟಾಗಿ ಜಾರಿ ಮಾಡಲು ಸರ್ಕಾರ ವಿಫಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.

eeshwar khandre
eeshwar khandre
author img

By

Published : Jul 16, 2020, 4:39 PM IST

ಬೆಂಗಳೂರು: ರಾಜ್ಯ ಸರ್ಕಾರ ವಿಧಿಸಿರುವ ಲಾಕ್​ಡೌನನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಲೇವಡಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, "ಲಾಕ್​ಡೌನ್ ಅಂತೆ ಲಾಕ್​ಡೌನ್. ಬದನೆಕಾಯಿ. ಸರ್ಕಾರ ಕಾಟಾಚಾರಕ್ಕೆ ಲಾಕ್​ಡೌನ್ ಮಾಡ್ತಾ ಇದೆ. ಲಾಕ್​ಡೌನ್ ವಿಚಾರದಲ್ಲಿ ಗಂಭೀರತೆ ಕಾಣಿಸ್ತಾ ಇಲ್ಲ. ಲಾಕ್​ಡೌನ್ ಕಟ್ಟು ನಿಟ್ಟಾಗಿ ಜಾರಿ ಮಾಡಲು ಸರ್ಕಾರ ವಿಫಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ." ಎಂದು ಆರೋಪಿಸಿದ್ದಾರೆ.

eeshwar khandre tweet
ಈಶ್ವರ್ ಖಂಡ್ರೆ ಟ್ವೀಟ್

ಸರ್ಕಾರ ಕೊರೊನಾ ಸೋಂಕು ತಡೆಯಲು ಲಾಕ್​ಡೌನ್ ವಿಧಿಸಿದೆಯೋ ಅಥವಾ ಸೋಂಕು ಹರಡಲು ವಿಧಿಸಿದೆಯೋ? ತನ್ನ ಜವಾಬ್ದಾರಿಯಿಂದ ನುಣಚಿಕೊಂಡು, ಜನರನ್ನು ಕೋವಿಡ್ ದವಡೆಗೆ ತಳ್ಳಿ, ಈಗ ಭಗವಂತನೇ ಕಾಪಾಡಬೇಕು ಅನ್ನೋ ಸರ್ಕಾರ ಅಧಿಕಾರದಲ್ಲಿರಲು ಲಾಯಕ್ ಇಲ್ಲ. ಸುಮ್ಮನೆ ರಾಜೀನಾಮೆ‌ ಕೊಟ್ಟು ಮನೆಗೆ ತೆರಳಿ ಎಂದು ಆಗ್ರಹಿಸಿದ್ದಾರೆ.

eeshwar khandre tweet
ಈಶ್ವರ್ ಖಂಡ್ರೆ ಟ್ವೀಟ್

ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ತಮ್ಮ ನಿವಾಸದ ಮುಂದೆ ಸುದ್ದಿಗಾರರ ಜೊತೆ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದ್ದು, ಉಸ್ತುವಾರಿ ಸಚಿವರು ಮಾತ್ರವಲ್ಲ ಇಡೀ ಸರ್ಕಾರವೇ ರಾಜೀನಾಮೆ ಕೊಟ್ಟು ತೆರಳಬೇಕು ಎಂದು ಆಗ್ರಹಿಸಿದ್ದರು.

ಇದೀಗ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಇದೇ ನಿಟ್ಟಿನಲ್ಲಿ ಮಾತನಾಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.