ETV Bharat / state

'ತಿಂಗಳಿಗೆ ಸರಿಯಾಗಿ ವೇತನ ಪಡೆಯುತ್ತಿದ್ರೂ ಮಕ್ಕಳ ಶಾಲಾ ಫೀಸ್ ಕಟ್ಟದಿರುವುದು ದುರಂತ' - ಪೋಷಕರ ವಿರುದ್ಧ ಅಸಮಾಧಾನ

ತಂದೆ, ತಾಯಿ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದು, ತಿಂಗಳಿಗೆ ಸರಿಯಾಗಿ ವೇತನ ಪಡೆಯುತ್ತಿದ್ದರೂ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಲು ಮರೆತಿರುವುದು ದುರಂತ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಫೇಸ್​ಬುಕ್ ಪೋಸ್ಟ್​ ಮೂಲಕ ಅವರು ಅಸಮಾಧಾನ ಹೊರ ಹಾಕಿದ್ದಾರೆ.

Suresh Kumar FB Post
ಸುರೇಶ್ ಕುಮಾರ್ ಪೋಸ್ಟ್
author img

By

Published : Jun 22, 2021, 11:49 AM IST

ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ಸಂಬಂಧಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪೋಸ್ಟ್ ಒಂದನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಪೋಷಕರು, ಖಾಸಗಿ ಶಾಲೆಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾಡಿರುವ ಈ ಪೋಸ್ಟ್​​ನಲ್ಲಿ, ಪೋಷಕರು ಸರ್ಕಾರಿ ಕೆಲಸದಲ್ಲಿ ಇದ್ದರೂ ಫೀಸ್ ಕಟ್ಟದೆ ಇರೋದು ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲ ಶಾಲೆಗಳ ಸ್ವಯಂ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಪೋಷಕರಿಗೆ ಶೇ. 20 ರಷ್ಟು ರಿಯಾಯಿತಿ ನೀಡಿರುವುದಾಗಿ ಹೇಳಿದ್ದಾರೆ. ಇನ್ನು ಕೆಲ ಶಾಲೆಗಳು ಆಸಕ್ತ ಪೋಷಕರಿಗೆ ಶೇ. 25ರಷ್ಟು ರಿಯಾಯಿತಿ ನೀಡಿದ್ದಾರೆ. ಈ ಎರಡು ನಿರ್ಧಾರಗಳು ಇಂದಿನ ಪರಿಸ್ಥಿತಿಗೆ ಪರಿಹಾರ ಎಂದಿದ್ದಾರೆ.

ಶಾಲಾ ಶುಲ್ಕ ಸಂಬಂಧಿತ ಗೊಂದಲ ನಿವಾರಣೆಗೆ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಸಮಸ್ಯೆಯನ್ನು ಅಧ್ಯಯನ ಮಾಡಿ, ಎಲ್ಲರ ಅಭಿಪ್ರಾಯ, ಸಲಹೆ ಆಲಿಸಿ ಶಿಫಾರಸ್ಸು ನೀಡಲಿದೆ.

ಸಮಿತಿಯ ವರದಿ ಎಲ್ಲರಿಗೂ ಸಮಂಜಸವಾಗಬಹುದೇನೋ ಎನ್ನುವ ಭಾವನೆ ಇದೆ. ನಿನ್ನೆ ಹೈಕೋರ್ಟ್ ಪ್ರತಿ ವಾದಿಗಳಿಗೆ ಒಂದು ವಾರ ಅವಕಾಶ ನೀಡಿದೆ ಎಂಬುವುದು ಸಚಿವ ಸುರೇಶ್ ಕುಮಾರ್ ಅವರ ಫೇಸ್ ಬುಕ್ ಬರಹದ ಸಾರಾಂಶ.

Suresh Kumar FB Post
ಸಚಿವ ಸುರೇಶ್ ಕುಮಾರ್ ಫೇಸ್​ಬುಕ್ ಪೋಸ್ಟ್

ಶಿಕ್ಷಣ ಸಚಿವರ ಫೇಸ್​ಬುಕ್ ಪೋಸ್ಟ್ ಈ ಕೆಳಗಿನಂತಿದೆ..

"ಕಳೆದ ವರ್ಷ ಪ್ರವೇಶಿಸಿದ ಕೋವಿಡ್, ಈ ವರ್ಷವೂ ವಿದ್ಯಾರ್ಥಿಗಳ ಪೋಷಕರ ಮೇಲೆ ತೀವ್ರ ಒತ್ತಡ ಹೇರಿದೆ. ಕಳೆದ ವರ್ಷ ಈ ಮಹಾಮಾರಿಯ ಕಾರಣದಿಂದಾಗಿ ನಮ್ಮ ರಾಜ್ಯದ, ರಾಷ್ಟ್ರದ ಶಾಲೆಗಳಿಗೆ ಮಕ್ಕಳನ್ನು ಕಾಣುವ ಅದೃಷ್ಠ ಇರಲಿಲ್ಲ. ಶಾಲೆಗಳೆಲ್ಲ ಮಕ್ಕಳಿಲ್ಲದೆ ಭಣಗುಡುತ್ತಿದ್ದವು. ಶಾಲೆಗಳಲ್ಲಿ ಗಂಟೆಯ ಶಬ್ದ ಕೇಳಲಿಲ್ಲ. ನಮ್ಮ ಶಿಕ್ಷಕಿಯರಿಗೆ ಮಕ್ಕಳ ಅಕ್ಕರೆಯ ಮಿಸ್ ಎಂಬ ಶಬ್ದ ಕೇಳುವ, ಮಕ್ಕಳನ್ನು ಅಪ್ಪಿಕೊಳ್ಳುವ, ತಲೆ ನೇವರಿಸಿ ಪ್ರೀತಿ ತೋರುವ ಅವಕಾಶವೇ ಇರಲಿಲ್ಲ.

ಇದರ ಜೊತೆಗೆ ಪ್ರಾರಂಭವಾಯಿತು ಶುಲ್ಕದ ವಿವಾದ. ಶಿಕ್ಷಣ ಇಲಾಖೆ ಪ್ರತ್ಯೇಕವಾಗಿ ಪೋಷಕರ ಸಂಘಟನೆ ಸಭೆ ನಡೆಸಿತ್ತು. ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿಗಳ ಜೊತೆ ಕುಳಿತು ಅವರ ಸಮಸ್ಯೆ ಕೂಡ ಕೇಳಲಾಗಿತ್ತು. ಕೊನೆಗೆ ಶುಲ್ಕದಲ್ಲಿ ಶೇ. 30 ರಷ್ಟು ಕಡಿತಗೊಳಿಸಿ, ಶೇ. 70ರಷ್ಟು ಶುಲ್ಕ ಪಡೆಯಬೇಕೆಂದು ನಿರ್ಧಾರ ಪ್ರಕಟಿಸಿತು.

ಈ ನಿರ್ಧಾರಕ್ಕೆ ಪೋಷಕರು ಬಹು ಮಟ್ಟಿಗೆ ಒಪ್ಪಿದ್ದರು. ಖಾಸಗಿ ಶಾಲೆಗಳ ವ್ಯವಸ್ಥಾಪಕ ಮಂಡಳಿ ಅಲ್ಪಮಟ್ಟಿಗೆ ಇದಕ್ಕೆ ಒಪ್ಪಿಗೆ ಸೂಚಿಸಿದವು. ಆದರೆ, ಕೆಲವರು ಹೈಕೋರ್ಟ್‌ಗೆ ಹೋಗಿ ಸರ್ಕಾರದ ಈ ತೀರ್ಮಾನವನ್ನು ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ವಾದ-ಪ್ರತಿವಾದ, ಚರ್ಚೆ ಮುಂದುವರೆದಿದೆ. ಶಾಲೆಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ನಿರ್ದೇಶನವೂ ಸೇರಿದಂತೆ ಇತರ ಕೆಲವು ಅಂಶಗಳ ಮಧ್ಯಂತರ ಆದೇಶವೂ ಬಂದಿದೆ.

ಬೇಸರ ತಂದ ಸಂಗತಿ ಎಂದರೆ ಆರ್ಥಿಕವಾಗಿ ಸಬಲರಾಗಿದ್ದ ಪೋಷಕರು ಸಹ ತಮ್ಮ ಮಕ್ಕಳ ಶುಲ್ಕ ಪಾವತಿ ಮಾಡಲು ಮುಂದಾಗಲಿಲ್ಲ. ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದು ಪ್ರತಿ ತಿಂಗಳು ತಪ್ಪದೇ ಸಂಬಳ ಪಡೆದ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಕರಿಗೆ ವೇತನ ದೊರೆಯಲು ತಾವು ಶುಲ್ಕ ಕಟ್ಟಬೇಕೆಂಬ ಕರ್ತವ್ಯ ನೆನಪಿಗೆ ಬರಲಿಲ್ಲ.

ಇದು ನಿಜಕ್ಕೂ ಒಳ್ಳೆಯ ಸಂಗತಿಯಲ್ಲ ಖಾಸಗಿ ಶಾಲೆಗಳು ತಮ್ಮ ಶಾಲೆಗಳ ನಿರ್ವಹಣೆಗೆ ಪೋಷಕರು ಶುಲ್ಕ ಕಟ್ಟುವುದು ಅಗತ್ಯ. ಕಳೆದ ವರ್ಷ ನಾವು ಶುಲ್ಕ ಏರಿಕೆ ಮಾಡಿಲ್ಲ. ಈ ವರ್ಷವೂ ಮಾಡದಿದ್ದರೆ ನಿರ್ವಹಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ. ಪೂರ್ಣ ಶುಲ್ಕ ಕಟ್ಟದಿದ್ದರೆ ಆನ್ ಲೈನ್ ಶಿಕ್ಷಣ ಲಭ್ಯವಿಲ್ಲ ಅಂತ ಕೆಲವು ಶಾಲೆಗಳ ಘೋಷಣೆ ಪೋಷಕರನ್ನು ಕಂಗಾಲು ಮಾಡಿದೆ.

ಪೋಷಕರು 2ನೇ ಅಲೆಯ ಕಾರಣ ನಮ್ಮ ಆರ್ಥಿಕ ಸ್ಥಿತಿ ಮತ್ತೊಮ್ಮೆ ಜರ್ಜರಿತವಾಗಿದೆ. ಹೀಗಿರುವಾಗ ನಾವು ಪೂರ್ಣ ಶುಲ್ಕ ಕಟ್ಟುವುದು ಹೇಗೆ ಎಂಬ ವಾದ ಮುಂದಿಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಪೋಷಕರು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳೊಂದಿಗೆ ಸಂಪರ್ಕ ಮಾಡಿ ಆ ಹಣಕಾಸು ಸಂಸ್ಥೆಗಳಿಂದ ಪೋಷಕರು ಸಾಲ ಪಡೆದು ಶಾಲಾ ಶುಲ್ಕ ಭರಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.

ಪೋಷಕರ ವಾದದಲ್ಲಿಯೂ ಹುರುಳಿದೆ. ಖಾಸಗಿ ಶಾಲಾ ಶಿಕ್ಷಕರ ಜೀವನ ನಿರ್ವಹಣೆಗೆ ಸಂಬಳ ಕುರಿತು ಯೋಚಿಸಿದಾಗ ಪೋಷಕರು ಸ್ವಲ್ಪವಾದರೂ ಕಟ್ಟುವುದು ಅನಿವಾರ್ಯ ಎಂಬ ಶಾಲೆಗಳ ವಾದದಲ್ಲಿಯೂ ಅರ್ಥವಿದೆ. ಪೋಷಕರು & ಖಾಸಗಿ ಶಿಕ್ಷಕರ ಹಿತವನ್ನು ಕಾಪಾಡುವ ಸೂತ್ರದ ಅಗತ್ಯ ಇಂದು ನಮ್ಮ ಮುಂದಿದೆ. ಈಗ ಆ ಪರಿಹಾರದ ಬಗ್ಗೆ ಸಮಾಜ ಯೋಚಿಸಬೇಕಿದೆ. ಖಾಸಗಿ ಶಾಲಾ ಸ್ಥಾಪಕ ಮಂಡಳಿ, ಪೋಷಕರ ನಡುವಿನ ಸಂಘರ್ಷದಲ್ಲಿ ಮಕ್ಕಳು ಬಡವಾಗಬಾರದು"

ETV Bharat Logo

Copyright © 2025 Ushodaya Enterprises Pvt. Ltd., All Rights Reserved.