ETV Bharat / state

ವಿಚಾರಣೆಯಿಂದ ವಿನಾಯಿತಿ ಕೇಳಿದ್ರೂ ಅನುಮತಿ ನೀಡದ ಇಡಿ ಅಧಿಕಾರಿಗಳು.. ಡಿಕೆಶಿಗಿಲ್ಲ ಗಣೇಶ ಹಬ್ಬ.. - MP D K Suresh

ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಇಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್‌ ನಾಳೆಯೂ ಹಬ್ಬ ಮಾಡುವಂತಿಲ್ಲ. ಗಣೇಶ ಹಬ್ಬದ ಪ್ರಯುಕ್ತ ವಿಚಾರಣೆಯಿಂದ ವಿನಾಯಿತಿ ಕೋರಿದರೂ ಇಡಿ ಮಾತ್ರ ಒಪ್ಪಿಗೆ ನೀಡಿಲ್ಲ, ನಾಳೆಯೂ ಡಿಕೆಶಿ ವಿಚಾರಣೆ ಮುಂದುವರೆಸಿದೆ.

ಡಿಕೆಶಿಗಿಲ್ಲ ಗಣೇಶ ಹಬ್ಬ
author img

By

Published : Sep 1, 2019, 9:51 PM IST

ಬೆಂಗಳೂರು : ಕಾಂಗ್ರೆಸ್‍ ಟ್ರಬಲ್‍ ಶೂಟರ್‍ ಎಂದೇ ಜನಪ್ರಿಯರಾಗಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ ಪಾಲಿಗೆ ಈ ಸಾರಿಯ ಗಣೇಶನ ಹಬ್ಬ ಸಂಭ್ರಮ ತಂದಿಲ್ಲ.

ಅಕ್ರಮ ಆಸ್ತಿಗಳಿಕೆ ಸಂಬಂಧ ಇಡಿ ಅಧಿಕಾರಿಗಳ ವಿಚಾರಣೆ ಹಿನ್ನೆಲೆ ದಿಲ್ಲಿಗೆ ತೆರಳಿರುವ ಡಿಕೆಶಿ ಅಲ್ಲೇ ಇದ್ದು, ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆದುಕೊಂಡಿದ್ದಾರೆ. ಇಡಿ ಅಧಿಕಾರಿಗಳು ನಾಳೆ ಬೆಳಗ್ಗೆ ಕೂಡ ವಿಚಾರಣೆ ನಡೆಸಲಿರುವ ಕಾರಣ ಗಣೇಶ ಹಬ್ಬದ ಸಂಭ್ರಮವೂ ಅವರ ಪಾಲಿಗೆ ಇಲ್ಲದಂತಾಗಿದೆ.

ಮಾಜಿ ಸಚಿವ ಡಿಕೆಶಿಗಿಲ್ಲ ಗಣೇಶ ಹಬ್ಬ..

ಎರಡು ದಿನದ ಹಿಂದೆಯೇ ದಿಲ್ಲಿಗೆ ತೆರಳಿರುವ ಡಿಕೆಶಿ ಇಡಿ ಅಧಿಕಾರಿಗಳ ನಿರಂತರ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ನಿನ್ನೆ ರಾತ್ರಿಯವರೆಗೂ ವಿಚಾರಣೆ ನಡೆಸಿದ್ದಾರೆ. ಹಬ್ಬದ ಪ್ರಯುಕ್ತ ವಿಚಾರಣೆಯಿಂದ ವಿನಾಯಿತಿ ಕೋರಿದರೂ ಇಡಿ ಮಾತ್ರ ಒಪ್ಪಿಗೆ ಕೊಟ್ಟಿಲ್ಲ. ಹಾಗಾಗಿ ಇಡಿ ನಾಳೆ ವಿಚಾರಣೆ ಮುಂದುವರೆಸಲಿದೆ. ಇದರಿಂದ ಡಿಕೆಶಿ ನಿವಾಸ ಬಿಕೋ ಎನ್ನುತ್ತಿದೆ. ಅಭಿಮಾನಿಗಳು ನಿವಾಸದ ಬಳಿ ಬಂದು ವಾಪಾಸ್ಸಾಗುತ್ತಿದ್ದಾರೆ. ಕನಕಪುರ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ್ದರು.

ಸದ್ಯ ಸಂಸದ ಡಿ ಕೆ ಸುರೇಶ್‍ ಅವರ ಅಪಾರ್ಟ್‍ಮೆಂಟ್‌ನಲ್ಲಿ ಡಿಕೆಶಿ ವಾಸವಾಗಿದ್ದಾರೆ. ಅವರ ಕುಟುಂಬ ಸದಸ್ಯರು ಕೂಡ ಜತೆಯಲ್ಲೇ ಇದ್ದಾರೆ. ನಾಳೆ ಬೆಳಗ್ಗೆ ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕಿದ್ದು, ಇಂದು ಕೆಲ ಬೆಂಬಲಿಗರು ಅವರನ್ನು ದಿಲ್ಲಿಯಲ್ಲಿಯೇ ಭೇಟಿಯಾಗಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

Intro:newsBody:ದಿಲ್ಲಿಯಲ್ಲಿ ಇಡಿ ವಿಚಾರಣೆ; ಡಿಕೆಶಿಗಿಲ್ಲ ಗೌರಿ-ಗಣೇಶ ಸಂಭ್ರಮ

ಬೆಂಗಳೂರು: ಕಾಂಗ್ರೆಸ್‍ನ ಟ್ರಬಲ್‍ ಶೂಟರ್‍ ಎಂದೇ ಜನಪ್ರಿಯರಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‍ ಪಾಲಿಗೆ ಈ ಸಾರಿಯ ಗಣೇಶನ ಹಬ್ಬ ಸಂಭ್ರಮ ತಂದಿಲ್ಲ.

ಅಕ್ರಮ ಆಸ್ತಿ ಗಳಿಕೆ ಸಂಬಂಧ ಇಡಿ ಅಧಿಕಾರಿಗಳ ವಿಚಾರಣೆ ಹಿನ್ನೆಲೆ ದಿಲ್ಲಿಗೆ ತೆರಳಿರುವ ಅವರು ಇಂದು ಅಲ್ಲೇ ಇದ್ದು, ಗೌರಿ ಹಬ್ಬದ ಸಂಭ್ರಮ ಕಳೆದುಕೊಂಡಿದ್ದಾರೆ. ನಾಳೆ ಕೂಡ ಬೆಳಗ್ಗೆಯೇ ಅವರ ವಿಚಾರಣೆ ಇಡಿ ಅಧಿಕಾರಿಗಳು ನಡೆಸಲಿರುವ ಕಾರಣ ಗಣೇಶ ಹಬ್ಬದ ಸಂಭ್ರಮವೂ ಅವರ ಪಾಲಿಗೆ ಇಲ್ಲವಾಗಲಿದೆ.

ಎರಡು ದಿನದ ಹಿಂದೆಯೇ ದಿಲ್ಲಿಗೆ ತೆರಳಿರುವ ಡಿಕೆಶಿ ಇಡಿ ಅಧಿಕಾರಿಗಳ ನಿರಂತರ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ನಿನ್ನೆ ರಾತ್ರಿಯವರೆಗೂ ಇಡಿ ಅಧಿಕಾರಿಗಳು ಇವರ ವಿಚಾರಣೆ ನಡೆಸಿದ್ದರು. ಇಂದು ಗೌರಿ ಹಾಗೂ ನಾಳೆ ಗಣೇಶನ ಹಬ್ಬದ ಪ್ರಯುಕ್ತ ವಿಚಾರಣೆಯಿಂದ ಎರಡು ದಿನ ವಿನಾಯಿತಿ ನೀಡುವಂತೆ ಡಿಕೆಶಿ ಮನವಿ ಮಾಡಿಕೊಂಡಿದ್ದರೂ, ಅದಕ್ಕೆ ಅವಕಾಶ ಸಿಕ್ಕಿಲ್ಲ. ಇಂದು ಭಾನುವಾರವಾದ ಹಿನ್ನೆಲೆ ವಿಚಾರಣೆ ಇರಲಿಲ್ಲ. ಆದರೆ ನಾಳೆ ಬೆಳಗ್ಗೆಯೇ ಇಡಿ ವಿಚಾರಣೆ ಆರಂಭವಾಗುವ ಹಿನ್ನೆಲೆ ಅವರು ಬೆಂಗಳೂರಿಗೆ ವಾಪಾಸಾಗಿಲ್ಲ. ದಿಲ್ಲಿಯಲ್ಲಿಯೇ ತಂಗಿದ್ದಾರೆ.

ಇದರಿಂದ ಸದಾಶಿವನಗರದ ಇವರ ನಿವಾಸ ಬಿಕೋ ಎನ್ನುತ್ತಿತ್ತು. ಸಾಕಷ್ಟು ಅಭಿಮಾನಿಗಳು ಇವರ ನಿವಾಸ ಬಳಿ ಬಂದು ವಾಪಾಸಾಗಿದ್ದಾರೆ. ಇವರ ಕ್ಷೇತ್ರ ಕನಕಪುರ ಸೇರಿದಂತೆ ಹಲವೆಡೆ ಅಭಿಮಾನಿಗಳು ಇಂದು ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ್ದರು. ಒಟ್ಟಾರೆ ಇವರ ಪರ ಪ್ರತಿಭಟನೆಗಳು, ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ಇಡಿ ಇವರಿಗೆ ಹಬ್ಬದ ಸಂಭ್ರಮವನ್ನೂ ಅನುಭವಿಸಲಾಗದಂತೆ ಮಾಡಿರುವುದು ವಿಪರ್ಯಾಸ.

ಸದ್ಯ ಸಂಸದ ಡಿ.ಕೆ. ಸುರೇಶ್‍ ಅವರ ಅಪಾರ್ಟ್‍ಮೆಂಟ್‍ ನಲ್ಲಿ ವಾಸವಾಗಿದ್ದಾರೆ. ಅವರ ಕುಟುಂಬ ಸದಸ್ಯರು ಕೂಡ ಜತೆಯಲ್ಲೇ ಇದ್ದಾರೆ. ನಾಳೆ ಬೆಳಗ್ಗೆ ಇಡಿ ಅಧಿಕಾರಿಗಳ ವಿಚಾರಣೆಗೆ ಅವರು ಹಾಜರಾಗಬೇಕಿದ್ದು, ಇಂದು ಕೆಲ ಬೆಂಬಲಿಗರು ಅವರನ್ನು ದಿಲ್ಲಿಯಲ್ಲಿಯೇ ಭೇಟಿಯಾಗಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.