ಬೆಂಗಳೂರು: ಕಾಂಗ್ರೆಸ್ನಲ್ಲಿ ಪಕ್ಷಕ್ಕೆ ಬದ್ಧರಾಗಿ ಯಾರೂ ಇಲ್ಲ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಗಂಭೀರ ಆರೋಪ ಮಾಡಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಇಲ್ಲದೆ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ನಲ್ಲಿ ಪಕ್ಷಕ್ಕೆ ಬದ್ಧರಾಗಿ ಯಾರೂ ಇಲ್ಲ ಎಂದು ಆರೋಪಿಸಿದ್ದಾರೆ.
2008, 2018ರಲ್ಲಿ ಯಾರು ಯಾರನ್ನ ಕಳಿಸಿದ್ದು ಎಂದು ಎಲ್ಲರಿಗೂ ಗೊತ್ತಿದೆ. ಮೈತ್ರಿ ಸರ್ಕಾರ ಕಾಪಾಡುವುದಾಗಿ ಹೇಳಿ, ಏನು ಮಾಡಿದ್ರು?. ನಿಜಕ್ಕೂ ಸರ್ಕಾರ ಪತನ ಮಾಡಿದವರು ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ. ಇದು ಲೋಕಕ್ಕೆ ಗೊತ್ತಿರುವ ಸತ್ಯ. ತಂತ್ರ, ಕುತಂತ್ರ ಎಲ್ಲಾ ಜನರಿಗೆ ಗೊತ್ತಿದೆ ಎಂದು ಹೇಳಿದರು.
ಅವರಿಬ್ಬರು ಜೊತೆಯಲ್ಲಿದ್ದು ಸರ್ಕಾರ ಬೀಳಿಸಿದರು. ಕುಮಾರಸ್ವಾಮಿಗೆ ಹೇಳಲಾಗ್ತಿಲ್ಲ, ನುಂಗಲಾಗ್ತಿಲ್ಲ. ಮುಕ್ತವಾಗಿ ಹೇಳುವ ಪ್ರಯತ್ನ ಕುಮಾರಸ್ವಾಮಿ ಮಾಡಲಿ. ಮುನಿರತ್ನರನ್ನು ಕಳಿಸಿ ಕೊಟ್ಟವರು ಯಾರು?. ಮುನಿರತ್ನ ಸಹಿತ ಹಲವರು ಈ ಬಗ್ಗೆ ಮಾತನಾಡಲಿದ್ದಾರೆ. ಗುಂಡಿ ತೋಡಿದವರ್ಯಾರು..? ಅವ್ರು ಏನ್ ನಾಟಕ, ಏನ್ ಸಿನಿಮಾ?, ಜೊತೆಯಲ್ಲಿ ಇದ್ದು ಸರ್ಕಾರ ಬೀಳಿಸುವವರಿಗೆ ಏನಂತೀರಿ..?. ಅದಕ್ಕೆ ಡಿಕೆಶಿಯನ್ನ ಮೀರ್ ಸಾಧಿಕ್ ಎಂದು ಹೇಳಿದ್ದೇನೆ ಎಂದರು.
ಡಿಕೆ ಶಿವಕುಮಾರ್ ಪರ ಡಿಕೆ ಸುರೇಶ್ ಏನ್ ವಕ್ತಾರರಾ..?. ಅವರ ಸಂಸ್ಕೃತಿ ಏಕ ವಚನದ ಸಂಸ್ಕೃತಿ. ಜನ ನೋಡ್ತಿರ್ತಾರೆ ಎಂದು ವಾಗ್ದಾಳಿ ನಡೆಸಿದರು.