ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಖದೀಮರನ್ನು ಮಟ್ಟಹಾಕಲು ಇರುವ ಪೊಲೀಸ್ ಶ್ವಾನ ದಳ ಸದ್ಯ ಡ್ರಗ್ಸ್ ಮಾಫಿಯಾದ ಹಿನ್ನೆಲೆಯನ್ನು ಭೇದಿಸಲು ಮುಂದಾಗಿದೆ.
ಹೊರರಾಜ್ಯಗಳಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ ಆಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ. ಪೊಲೀಸರೊಂದಿಗೆ ಶ್ವಾನದಳದಲ್ಲೇ ಅತೀ ಚುರುಕಾಗಿರುವ ನಾರ್ಕೋಟಿಕ್ ಎಕ್ಸ್ಪ್ಪರ್ಟ್ ಶ್ವಾನ ರಾಣಾ ಕೈಜೋಡಿಸಲಿದೆ.
ಪೊಲೀಸರಿಗೆ ಇರುವ ಮಾಹಿತಿ ಮೇರೆಗೆ ಶ್ವಾನಗಳನ್ನು ಗಲ್ಲಿಗಲ್ಲಿಗೆ ಕರೆದೊಯ್ದು ತಪಾಸಣೆ ನಡೆಸಲಿದ್ದಾರೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಾಗಿ ಶ್ವಾನ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ. ಸದ್ಯ ಗೋವಾ ಮತ್ತು ಮುಂಬೈನಿಂದ ಗಾಂಜಾ ರೈಲುಗಳ ಮೂಲಕ ರಾಜ್ಯಕ್ಕೆ ಬರುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.