ETV Bharat / state

ಆ್ಯಪ್‌ ಮೂಲಕ ಡ್ರಗ್ ಡೀಲಿಂಗ್; ಬೆಂಗಳೂರಿನಲ್ಲಿ ನಾಲ್ವರ ಬಂಧನ - ಈಟಿವಿ ಭಾರತ ಕನ್ನಡ

ಆ್ಯಪ್​ ಮುಖಾಂತರ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತರಿಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

drug-dealing-using-mobile-app-in-bangalore
ಡ್ರಗ್ ಡೀಲಿಂಗ್​ಗೂ ಬಂತು ಮೊಬೈಲ್ ಆ್ಯಪ್
author img

By

Published : Oct 23, 2022, 8:31 AM IST

ಬೆಂಗಳೂರು: ಡ್ರಗ್ ಪೆಡ್ಲರ್ಸ್ ಮೇಲೆ ನಗರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ದಂಧೆಕೋರರು ಪೊಲೀಸರ ಕಣ್ತಪ್ಪಿಸಲು ಡ್ರಗ್ ಡೀಲಿಂಗ್ ಆ್ಯಪ್ ಮೊರೆ ಹೋಗಿದ್ದಾರೆ. ಆ್ಯಪ್​ ಮೂಲಕ ವ್ಯವಹರಿಸುತ್ತಿದ್ದ ಪೆಡ್ಲರ್ಸ್​ಗಳ ಪೈಕಿ ಸಿಸಿಬಿ ಪೊಲೀಸರು ನಾಲ್ವರನ್ನು ಸೆರೆ ಹಿಡಿದಿದ್ದಾರೆ. 4.5 ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳ ಜಪ್ತಿ ಮಾಡಲಾಗಿದೆ.

drug-dealing-using-mobile-app-in-bangalore
ಬಂಧಿತ ಆರೋಪಿಗಳು ಎಡದಿಂದ ರೋಹನ್, ಜಿತಿನ್, ಯಶ್ವಂತ್ ಮತ್ತು ಶಲ್ಬಿನ್

ಜಿತಿನ್, ರೋಹನ್, ಯಶ್ವಂತ್, ಶಲ್ಬಿನ್ ಬಂಧಿತರು. ವಿಕರ್ ಮೀ ಆ್ಯಪ್ ಮೂಲಕ‌ ಕೇರಳ ಮೂಲದ ಪೆಡ್ಲರ್​ಗಳಿಂದ ಡ್ರಗ್ಸ್‌ ಪಡೆದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಮೈಕೋ‌ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾದಕ ದ್ರವ್ಯ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 30 ಕೋಟಿ ಬೆಲೆ ಬಾಳುವ ಡ್ರಗ್ಸ್ ವಶ.. ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.