ಬೆಂಗಳೂರು: ಕಾಳಸಂತೆಯಲ್ಲಿ ಕೊರೊನಾ ಔಷಧಿ ಮಾರಾಟ ತಪ್ಪಿಸಲು ಕರ್ನಾಟಕ ಡ್ರಗ್ ಕಂಟ್ರೋಲ್ ಹೊಸ ಐಡಿಯಾ ಮಾಡಿದೆ.
ಕೋವಿಡ್ ಸೋಂಕು ಹರಡಿದ್ದೇ ತಡ ಕಾಳಸಂತೆಯಲ್ಲಿ ಸದ್ದಿಲ್ಲದೇ ಔಷಧಿಗಳ ಮಾರಾಟ ಜೋರಾಗಿತ್ತು. ಪರಿಣಾಮ ಔಷಧಿ ಕೊರತೆ ಉಂಟಾಗಿ, ಜನರು ಪರದಾಟ ಅನುಭವಿಸುತ್ತಿದ್ದರು. ಇದನ್ನ ತಪ್ಪಿಸಲು ಕರ್ನಾಟಕ ಡ್ರಗ್ ಕಂಟ್ರೋಲ್ ಸೋಂಕಿತರಿಗೆ ನೀಡುವ ರೆಮ್ಡಿಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಿದೆ. ಸೋಂಕಿತ ವ್ಯಕ್ತಿಯ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗಿದೆ ಎಂದು ಎಸ್ಎಂಎಸ್ ಕಳುಹಿಸಲಾಗುತ್ತದೆ.
ಸಾರ್ವಜನಿಕರು,
https://www.covidwar.karnataka.gov.in/service1
https://www.covidwar.karnataka.gov.in/service2
ಈ ಲಿಂಕ್ ಮೂಲಕ ತಮಗೆ ಹಂಚಿಕೆಯಾಗಿರುವ ಔಷಧದ ಬಗ್ಗೆ ಮಾಹಿತಿ ಪಡೆಯಬಹುದು.
ಒಂದು ವೇಳೆ ಸೋಂಕಿತ ವ್ಯಕ್ತಿಯ SRF IDಗೆ ರೆಮ್ಡಿಸಿವಿರ್ ಔಷಧ ಹಂಚಿಕೆಯಾಗಿ ಆಸ್ಪತ್ರೆ ಅದನ್ನು ಆ ವ್ಯಕ್ತಿಯ ಚಿಕಿತ್ಸೆಗೆ ಒದಗಿಸದಿದ್ದಲ್ಲಿ ಇದೇ ಲಿಂಕ್ ಮೂಲಕ ಸರ್ಕಾರಕ್ಕೆ ವರದಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪಾರದರ್ಶಕ ವ್ಯವಸ್ಥೆಯಿಂದ ಕಾಳಸಂತೆ ಮಾರಾಟಕ್ಕೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಈ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಕೂಡ ಟ್ವೀಟ್ ಮಾಡಿದ್ದಾರೆ.