ETV Bharat / state

ಡ್ರಗ್ಸ್​ ಪೆಡ್ಲರ್​ ವಿರೇನ್ ಖನ್ನಾ ಸಹಚರನ ಬಂಧನ: 16ಕ್ಕೆ ಏರಿದ ಬಂಧಿತರ ಸಂಖ್ಯೆ

author img

By

Published : Sep 11, 2020, 5:54 PM IST

ಡ್ರಗ್ಸ್​​ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೇನ್ ಖನ್ನಾ ಸಹಚರ ಆದಿತ್ಯ ಅಗರವಾಲ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Aditya Agarwal
ಆದಿತ್ಯ ಅಗರವಾಲ್

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ತನಿಖೆ ಚುರುಕಿನಿಂದ ಸಾಗಿದ್ದು, ಇದೀಗ ಡ್ರಗ್ಸ್​ ಪೆಡ್ಲರ್ ವಿರೇನ್ ಖನ್ನಾ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣ ಮೂಲದ ಆದಿತ್ಯ ಅಗರವಾಲ್ ಬಂಧಿತ ಆರೋಪಿ. ಈತ ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದು, ರಾಗಿಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಅಲ್ಲದೇ ವಿರೇನ್ ಖನ್ನಾ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗ್ತಿದೆ.

ದೊಡ್ಡ ಪಾರ್ಟಿಗಳನ್ನು ಆಯೋಜಿಸಿ ಅಲ್ಲಿಗೆ ಬರುವವರನ್ನು ಗುರಿಯಾಗಿಸಿಕೊಂಡು ವಿರೇನ್​ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಇದಕ್ಕೆ‌ ಆದಿತ್ಯ ಸಹಕರಿಸುತ್ತಿದ್ದ. ಅಲ್ಲದೆ ಡ್ರಗ್ ಪೆಡ್ಲರ್ ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಸಿಸಿಬಿ ಪೊಲೀಸರು ಸರ್ಚ್ ವಾರೆಂಟ್ ಪಡೆದು ನಿನ್ನೆ ತಡರಾತ್ರಿ ಆದಿತ್ಯ ಅಗರ್​ವಾಲ್​ ಮನೆ ಪರಿಶೀಲನೆ ಬಳಿಕ ಆತನನ್ನು ಬಂಧಿಸಿದ್ದಾರೆ‌. ಪ್ರಕರಣದಲ್ಲಿ ಒಟ್ಟು ಈವರೆಗೆ ಬಂಧಿತರಾದವರ ಸಂಖ್ಯೆ 16 ಕ್ಕೆ ಏರಿದೆ‌ ಎಂದು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.