ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಉಚಿತ ಮೆಡಿಸಿನ್ ಡೆಲಿವರಿ ಸೇವೆ ಆರಂಭಿಸುತ್ತಿದ್ದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಚಾಲನೆ ನೀಡಿದ್ದಾರೆ.
ಈ ಉಚಿತ ಸೇವೆ ಕೂಲಿ ಕಾರ್ಮಿಕರಿಗೆ, ಆಟೋ, ಕ್ಯಾಬ್ ಚಾಲಕರಿಗೆ ಹಾಗೂ ಬಡವರಿಗೆ ಸೀಮಿತವಾಗಿದೆ. ವಾಟ್ಸ್ ಆ್ಯಪ್ನಲ್ಲಿ ಒಂದು ಮೆಸೇಜ್ ಮಾಡಿದರೆ ಸಾಕು, ಗಂಟೆಯೊಳಗೆ ಔಷಧಿ ಮನೆ ಸೇರಲಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಮೆಡಿಸಿನ್ ಕೊಳ್ಳಲು ಸಾಕಷ್ಟು ಸಮಸ್ಯೆಯಾಗ್ತಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಅಸೋಸಿಯೇಷನ್ ಬಡವರಿಗಾಗಿ ಉಚಿತ ಮೆಡಿಸಿನ್ ನೀಡಲು ಮುಂದಾಗಿದ್ದಾರೆ.
ಈ ಸೇವೆ ಆರಂಭವಾಗಲಿದ್ದು, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ನಲ್ಲಿರುವ ಸಾರ್ವಜನಿಕರಿಗೆ ಮಾತ್ರ ಈ ಸೇವೆ ಸಿಗಲಿದೆ. ವೈದ್ಯರು ನೀಡಿರುವ ಔಷಧಿ ಚೀಟಿಯನ್ನು ಫೋಟೋ ತೆಗೆದು 9980138530 ಈ ನಂಬರ್ಗೆ ಕಳುಹಿಸಿದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಉಚಿತ ಮೆಡಿಸಿನ್ ತಲುಪಿಸಲಿದ್ದಾರೆ.