ETV Bharat / state

ರಾಜ್ಯ ಬಿಜೆಪಿ ಮೇಲಿನ ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ?: ಕಾಂಗ್ರೆಸ್ ಪ್ರಶ್ನೆಗಳ ಬಾಣ

ರಾಜ್ಯ ಬಿಜೆಪಿ ವಿರುದ್ದ ಕಾಂಗ್ರೆಸ್​ ಸರಣಿ ಟ್ವೀಟ್​ ಮಾಡಿ ಹಲವು ಪಶ್ನೆಗಳನ್ನು ಕೇಳಿದೆ.

Congress
ಕಾಂಗ್ರೆಸ್
author img

By

Published : Mar 16, 2023, 10:53 PM IST

ಬೆಂಗಳೂರು: ಸಿಎಂ ಬಸವರಾಜು ಬೊಮ್ಮಾಯಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂದು ಕೇಂದ್ರ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ನೀಡಿದ ಹೇಳಿಕೆ ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಲೇವಡಿ ಮಾಡಿದೆ. ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಸವರಾಜ್ ಬೊಮ್ಮಾಯಿ ಅವರಿಗೆ ನಾಯಕತ್ವ ಕೊಡುವುದಿರಲಿ, ಟಿಕೆಟ್ ಕೊಡುವುದೇ ಅನುಮಾನವಂತೆ! ಸಂಸದ ಸಿದ್ದೇಶ್ ಹೇಳಿದ್ದಕ್ಕೂ, ಅಮಿತ್ ಶಾ ಸಿಎಂ ಹೆಸರನ್ನೇ ಪ್ರಸ್ತಾಪ ಮಾಡದಿರುವುದಕ್ಕೂ ಸಂಬಂಧವಿದೆಯೇ ರಾಜ್ಯ ಬಿಜೆಪಿ? ಬೊಮ್ಮಾಯಿ ಅವರ ವೈಫಲ್ಯ, ಭ್ರಷ್ಟಾಚಾರವು ಟಿಕೆಟ್ ನಿರಾಕರಿಸುವಷ್ಟು ಅಸಹನೆ ಹುಟ್ಟಿಸಿದೆಯೇ? ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ? ಎಂದು ಕೇಳಿದೆ.

ಮೋದಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಸಿಎಂ ಕ್ಯಾಂಡಿಡೇಟ್ ಎಂದು ಬಿಂಬಿಸಿಕೊಳ್ಳುತ್ತಿರುವ ಸಂತೋಷ್, ಜೋಶಿ ಮುಖ ತೋರಿದರೂ ಮತ ಬರುವುದಿಲ್ಲ. ಬಿಜೆಪಿಯಲ್ಲಿನ ಯಾವ ಮುಖಕ್ಕೂ ಜನರಲ್ಲಿ ಭರವಸೆ ಹುಟ್ಟಿಸುವ ಯೋಗ್ಯತೆ ಇಲ್ಲ ಎಂಬುದು ವಿಜಯೇಂದ್ರರ ಮಾತಿನ ಸಾರಾಂಶ ಅಲ್ಲವೇ ರಾಜ್ಯ ಬಿಜೆಪಿ? ಎಂದು ಪ್ರಶ್ನಸಿದೆ.

ಯಡಿಯೂರಪ್ಪ ಮೂಲೆಗುಂಪು ಮಾಡಲು ಶತಪ್ರಯತ್ನ :ಇನ್ನೂ ಬಸವರಾಜ್ ಬೊಮ್ಮಾಯಿ ಅವರಿಗೆ ಅಧಿಕಾರವಿಲ್ಲ, ಟಿಕೆಟ್ ಕೂಡ ಇಲ್ಲ. ಬಿಎಸ್​ ಯಡಿಯೂರಪ್ಪಗೆ ಟಿಕೆಟ್ ನಿರ್ಧರಿಸುವ ಹಕ್ಕು ಮತ್ತು ಪ್ರಚಾರ ಸಮಿತಿಯ ನೇತೃತ್ವವಿಲ್ಲ. ವೇದಿಕೆಗಳಲ್ಲಿ ಜಾಗವಿಲ್ಲ. ಬಿಎಸ್​ವೈ ಅವರ ರಾಜ್ಯ ಪ್ರವಾಸಕ್ಕೆ ಅವಕಾಶ ಕೊಡಲಿಲ್ಲ. ಬಿಎಸ್​ವೈ ಬಿಜೆಪಿಗೆ ಅನಿವಾರ್ಯವಲ್ಲ. ಈ ಘಟನೆಗಳೇ ಈ ಹೇಳಿಕೆಗೆ ಸ್ಪೂರ್ತಿಯೇ ರಾಜ್ಯ ಬಿಜೆಪಿ? ಎಂದಿದೆ.

  • '@BSBommai ಅವರಿಗೆ ನಾಯಕತ್ವ ಕೊಡುವುದಿರಲಿ, ಟಿಕೆಟ್ ಕೊಡುವುದೇ ಅನುಮಾನವಂತೆ!

    ಸಂಸದ ಸಿದ್ದೇಶ್ ಹೇಳಿದ್ದಕ್ಕೂ ಅಮಿತ್ ಶಾ ಸಿಎಂ ಹೆಸರನ್ನೇ ಪ್ರಸ್ತಾಪ ಮಾಡದಿರುವುದಕ್ಕೂ ಸಂಬಂಧವಿದೆಯೇ @BJP4Karnataka?

    ಬೊಮ್ಮಾಯಿಯವರ ವೈಫಲ್ಯ, ಭ್ರಷ್ಟಾಚಾರವು ಟಿಕೆಟ್ ನಿರಾಕರಿಸುವಷ್ಟು ಅಸಹನೆ ಹುಟ್ಟಿಸಿದೆಯೇ?

    ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ? pic.twitter.com/49LAQhFapZ

    — Karnataka Congress (@INCKarnataka) March 16, 2023 " class="align-text-top noRightClick twitterSection" data=" ">

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯ ನ್ಯೂನ್ಯತೆಗಳು ಒಂದೆರಡಲ್ಲ. ಸಮರ್ಪಕ ಆಂಬ್ಯುಲೆನ್ಸ್‌ಗಳಿಲ್ಲ, ಶೌಚಾಲಯಗಳಿಲ್ಲ. ಸುರಕ್ಷಾ ಕ್ರಮಗಳಿಲ್ಲ, ಸರ್ವಿಸ್ ರಸ್ತೆಗಳಿಲ್ಲ, ಕಳಪೆ ಕಾಮಗಾರಿಗೆ ಮಿತಿ ಇಲ್ಲ, ರಸ್ತೆ ಕಿತ್ತು ಬರುತ್ತಿದೆ, ಸುರಕ್ಷತೆ ಹಾಗೂ ವೈಜ್ಞಾನಿಕ ಮಾನದಂಡಗಳ ಪಾಲನೆಯಾಗಿಲ್ಲ, ಹೀಗಿರುವಾಗ ಯಾವ ಸಂತೋಷಕ್ಕೆ ಟೋಲ್ ಸುಲಿಗೆ ನಡೆಯುತ್ತಿದೆ? ಎಂದು ಕಾಂಗ್ರೆಸ್ ಟ್ವೀಟ್​ ಮಾಡುವ ಮೂಲಕ ರಾಜ್ಯ ಬಿಜೆಪಿಯನ್ನು ಕೇಳಿದೆ.

ಬಿಎಸ್​ವೈ ಟೀಕಿಸಲೆಂದು ಒಂದು ತಂಡವನ್ನೇ "ಸಂತೋಷ ಕೂಟ" ತಯಾರು ಮಾಡಿದೆ. ಆ ತಂಡದ ಪ್ರಮುಖ ವಕ್ತಾರರು ಯತ್ನಾಳ್, ಸಿಟಿ ರವಿ. ಬಿಜೆಪಿಯಲ್ಲಿ ಬಿಎಸ್​ವೈ ನಾಯಕತ್ವವನ್ನು ಪ್ರಶ್ನಿಸುತ್ತಿರುವವರು ಯಾರು? ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ? ಯಡಿಯೂರಪ್ಪ ಮೂಲೆಗುಂಪು ಮಾಡಲು ಶತಪ್ರಯತ್ನ ನಡೆಸುತ್ತಿರುವವರು ಯಾರು ರಾಜ್ಯ ಬಿಜೆಪಿ? ಎಂದು ಸಾಲು ಸಾಲು ಪ್ರಶ್ನೆಗಳ ಸವಾಲನ್ನು ಹಾಕಿದೆ.

ಬಿಜೆಪಿಗೆ ಧರ್ಮ ಮುಖ್ಯವೋ, ಆರಗ ಜ್ಞಾನೇಂದ್ರ ಮುಖ್ಯವೋ? : "ಗುಳಿಗ" ಕರಾವಳಿ ಭಾಗದಲ್ಲಿ ಶೋಷಿತ ಸಮುದಾಯಗಳ ಆರಾಧ್ಯ ದೈವ. ಇಂತಹ ಗುಳಿಗ ದೈವದ ಬಗೆಗಿನ ನಾಟಕ ಪ್ರದರ್ಶನವನ್ನು ಆರಗ ಜ್ಞಾನೇಂದ್ರ ಹೀನಾಯವಾಗಿ ಅವಮಾನಿಸಿದ್ದಾರೆ. ಶೋಷಿತರ ದೈವಗಳೆಂದರೆ ಬಿಜೆಪಿಗೆ ಹಾಸ್ಯದ ವಸ್ತುವೇ? ಧರ್ಮ ದ್ರೋಹಿಗಳು ಬಿಜೆಪಿಗರೇ ಅಲ್ಲವೇ? ಬಿಜೆಪಿಯ ಡೋಂಗಿ ಧರ್ಮ ರಕ್ಷಕರು ಈಗ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ? ಬಿಜೆಪಿಗೆ ಧರ್ಮ ಮುಖ್ಯವೋ, ಆರಗ ಜ್ಞಾನೇಂದ್ರ ಮುಖ್ಯವೋ? ಎಲ್ಲಕ್ಕಿಂತ ಧರ್ಮ, ಸಂಸ್ಕೃತಿಗಳೇ ಮುಖ್ಯ ಎನ್ನುವುದಾದರೆ ಗೃಹಸಚಿವರನ್ನು ಈಗಲೇ ಉಚ್ಚಾಟನೆ ಮಾಡಲಿ. ಇಲ್ಲವೇ ತಮ್ಮದು ಡೋಂಗಿತನ ಎಂಬುದನ್ನು ಒಪ್ಪಿಕೊಳ್ಳಲಿ. ಗುಳಿಗ ದೈವವನ್ನು ಜಪಾಳ ಗುಳಿಗೆ ಎಂದು ಹಿಯಾಳಿಸಿದ ರಾಜ್ಯ ಬಿಜೆಪಿ ತಳಸಮುದಾಯಗಳ ನಂಬಿಕೆಗಳನ್ನು ಅವಮಾನಿಸಿದೆ ಎಂದಿದ್ದಾರೆ.

ಸ್ವತಃ ಬಿಜೆಪಿ ಶಾಸಕರೇ ರಾಜ್ಯ ಸರ್ಕಾರ ನಮಗೆ ಅನುದಾನ ಕೊಡುತ್ತಿಲ್ಲ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎನ್ನುತ್ತಾರೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳ ಜಾರಿಗೆ ಮುಂದಾಗಿದೆ. ಕರ್ನಾಟಕಕ್ಕೆ ಇಂತಹ ಹೀನಾಯ ಸ್ಥಿತಿ ತಂದಿದ್ದೇ ಬಸವರಾಜ್ ಬೊಮ್ಮಾಯಿ ಸಾಧನೆಯೇ? ಬೊಮ್ಮಾಯಿಯವರ ಮೇಲೆ ಬಿಜೆಪಿಗೇ ಭರವಸೆ ಇಲ್ಲದಾಗಿದೆಯೇ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ :ಶಾಂತಿನಗರದಲ್ಲಿ 'ಹ್ಯಾಟ್ರಿಕ್' ಹ್ಯಾರಿಸ್​ಗೆ ಪೈಪೋಟಿ ನೀಡುವುದೇ ಬಿಜೆಪಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.