ETV Bharat / state

30 ವರ್ಷದ ಸಮಸ್ಯೆಗೆ ಮುಕ್ತಿ...ದೊಡ್ಡಗಟ್ಟಿಗನಬ್ಬಿ ಗ್ರಾಮಕ್ಕೆ ಸಿಕ್ತು ಸ್ವಾತಂತ್ರ್ಯ

author img

By

Published : Nov 6, 2019, 5:13 AM IST

ಕಳೆದ 30 ವರ್ಷಗಳಿಂದ ರಸ್ತೆ ಸೌಲಭ್ಯವಿಲ್ಲದ ಗ್ರಾಮಕ್ಕೆ ಮಾಜಿ ಶಾಸಕ ಎಂಟಿಬಿ ನಾಗರಾಜ್​ ರಸ್ತೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಎಂಟಿಬಿ ನಾಗರಾಜ್

ಹೊಸಕೋಟೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ದೊಡ್ಡಗನಬ್ಬಿ ಗ್ರಾಮದ ರಸ್ತೆಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಚಾಲನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂಟಿಬಿ ನಾಗರಾಜ್

ಹೊಸಕೋಟೆ ವಿಧಾನಸಭಾ ಕ್ಷೇತ್ರದ ದೊಡ್ಡಗಟ್ಟಿಗನಬ್ಬಿ ಗ್ರಾಮ ಪಂಚಾಯಿತಿಯ ದೊಡ್ಡಗನಬ್ಬಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ರಸ್ತೆಯಿಲ್ಲದೆ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ಆಶ್ವಾಸನೆ ನೀಡುವ ರಾಜಕೀಯ ಮುಖಂಡರು ಇಲ್ಲಿನ ಜನರ ಮತ ಪಡೆದು ಮತ್ತೆ ಇತ್ತ ಮುಖ ಮಾಡದೆ ಹೋಗುತ್ತಿದ್ದರು. ಇಂತಹ ಸಮಸ್ಯೆಯನ್ನು ಸ್ಥಳೀಯ ಮುಖಂಡ ಜನಾರ್ದನ್, ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರ ಗಮನಕ್ಕೆ ತಂದು ಸ್ಥಳೀಯರಾದ ರಾಹುಲ್ ಕುಟುಂಬ ಹಾಗೂ ಬಿಲ್ಡರ್ಸ್​ರಲ್ಲಿ ಮನವಿ ಮಾಡಿಕೊಂಡಿದ್ದರು. ಬಳಿಕ ಆ ಜಾಗ ಬಿಡಿಸಿ ದೊಡ್ಡಗಟ್ಟಿನಬ್ಬಿ ಪಂಚಾಯಿತಿ ಪಕ್ಕದಿಂದ ಹಿಂಭಾಗದ ಮೂಲಕ ಗ್ರಾಮಕ್ಕೆ ತಲುಪುವ ರಸ್ತೆ ಮಾಡಿಕೊಟ್ಟಿದ್ದಾರೆ.

ಇದೇ ವೇಳೆ ಮಾಜಿ ಶಾಸಕ ಎಂಟಿಬಿ ನಾಗರಾಜ್ ಮಾತನಾಡಿ, ದೊಡ್ಡಗನಬ್ಬಿ ಗ್ರಾಮದ ಮುಖಂಡರು, 30 ವರ್ಷಗಳಿಂದ ಇಪ್ಪತ್ತು ಕುಟುಂಬಗಳು ರಸ್ತೆ ಇಲ್ಲದೆ ಕಾಲು ದಾರಿಯಲ್ಲಿ ಓಡಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಕೂಡಲೇ ರಸ್ತೆ ಹಾದುಹೋಗುವ ಜಮೀನಿನ ಮಾಲಿಕರನ್ನು ಕರೆದು ಅವರಿಗೆ ಮನವರಿಕೆ ಮಾಡಿ ಸುಮಾರು ಹನ್ನೆರಡು ಲಕ್ಷ ರೂ. ವೆಚ್ಚದಲ್ಲಿ ಒಂದು ರಸ್ತೆಯನ್ನು ಮಾಡಿಕೊಟ್ಟು ಅವರ ಸಮಸ್ಯೆಯನ್ನು ನಿವಾರಿಸಿದ್ದೇನೆ ಎಂದರು. ಮೂವತ್ತು ವರ್ಷಗಳಿಂದ ರಾಜಕೀಯ ಮಾಡಿ ಗ್ರಾಮಸ್ಥರಿಗೆ ತೊಂದರೆ ಆಗಿರುವುದು‌ ತುಂಬಾ ಬೇಸರವಾಗಿದೆ ಎಂದರು.

ಸಮಸ್ಯೆ ಬಗೆಹರಿಸಿದ ಎಂಟಿಬಿ ನಾಗರಾಜ್ ಹಾಗೂ ರಸ್ತೆಗೆ ಜಾಗ ನೀಡಿದ ಕುಟುಂಬದವರನ್ನು ಬೆಳ್ಳಿ ರಥದಲ್ಲಿ ಗ್ರಾಮಸ್ಥರು ಮೆರವಣಿಗೆ ನಡೆಸಿದ್ದಾರೆ. ರಾಜಕೀಯಕ್ಕೆ ತುತ್ತಾಗಿದ್ದ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಮಾಜಿ ಶಾಸಕ ಎಂಟಿಬಿ ನಾಗರಾಜ್ ಜನರ ಮನಸ್ಸು ಗೆದ್ದಿದ್ದಾರೆ.

Intro:ಹೊಸಕೋಟೆ:

30 ವರ್ಷ ಸಮಸ್ಯೆಗೆ ಮುಕ್ತಿ, ದೊಡ್ಡಗಟ್ಟಿಗನಬ್ಬಿ ಗ್ರಾಮಕ್ಕೆ ಸಿಕ್ತು ಸ್ವಾತಂತ್ರ.

ಅದು ಮೂವತ್ತು ವರ್ಷಗಳಿಂದ ರಸ್ತೆ ಸಮಸ್ಯೆ ಎದುರಿಸುತ್ತಿರುವ ಗ್ರಾಮ, ರಾಜಕೀಯದ ದೊಂಬರಾಟಕ್ಕೆ ಸಿಲುಕಿ ಆ ಗ್ರಾಮದಲ್ಲಿ ರಸ್ತೆಯಾಗದೆ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ, ಆ ಗ್ರಾಮದಲ್ಲಿ ಮರಣವೊಂದಿದ ದೇಹವನ್ನು ಹೊತ್ತಯ್ಯಲು ಸಹ ದಾರಿ ಇರಲಿಲ್ಲ ಇಂತಹ ಗ್ರಾಮದ ರಸ್ತೆಗೆ ಇಂದು ಮಾಜಿ ಶಾಸಕ ಎಂಟಿಬಿ ನಾಗರಾಜ್ ಚಾಲನೆ ನೀಡುವ ಮೂಲಕ ಆ ಗ್ರಾಮಕ್ಕೆ ಸ್ವಾತಂತ್ರ ಲಭಿಸಿದಷ್ಟು ಖುಷಿ ತಂದಿದೆ. ಸಮಸ್ಯೆ ಬಗೆಹರಿಸಿದ ಎಂಟಿಬಿ ನಾಗರಾಜ್ ಹಾಗೂ ರಸ್ತೆಗೆ ಜಾಗ ನೀಡಿದ ಕುಟುಂಬದವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ದೊಡ್ಡಗಟ್ಟಿಗನಬ್ಬಿ ಗ್ರಾಮ ಪಂಚಾಯಿತಿಯ ದೊಡ್ಡಗನಬ್ಬಿ ಗ್ರಾಮದಲ್ಲಿ ಕಳೆದ ಮುವತ್ತು ವರ್ಷಗಳಿಂದ ರಸ್ತೆಯಿಲ್ಲದೆ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ಆಶ್ವಾಸನೆ ನೀಡುವ ರಾಜಕೀಯ ಮುಖಂಡರು ಇಲ್ಲಿನ ಮತ ಪಡೆದು ಮತ್ತೆ ಇತ್ತ ಮುಖ ಮಾಡದೆ ಹೋಗುತ್ತಿದ್ದರು. ಇಂತಹ ಸಮಸ್ಯೆಯನ್ನು ಸ್ಥಳೀಯ ಮುಖಂಡ ಜನಾರ್ದನ್ ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರ ಗಮನಕ್ಕೆ ತಂದು ಸ್ಥಳೀಯರಾದ ರಾಹುಲ್ ಕುಟುಂಬ ಹಾಗೂ ಬಿಲ್ಡರ್ರಲ್ಲಿ ಮನವಿ ಮಾಡಿಕೊಂಡು ಜಾಗ ಬಿಡಿಸಿ ದೊಡ್ಡಗಟ್ಟಿನಬ್ಬಿ ಪಂಚಾಯಿತಿ ಪಕ್ಕದಿಂದ ಹಿಂಭಾಗದ ಮೂಲಕ ಗ್ರಾಮಕ್ಕೆ ತಲುಪುವ ರಸ್ತೆ ಮಾಡಿಕೊಟ್ಟಿದ್ದಾರೆ.
ದೊಡ್ಡಗನಬ್ಬಿ ಗ್ರಾಮದಲ್ಲಿ 30 ವರ್ಷದ ಸಮಸ್ಯೆಗಳನ್ನು ಬಗೆಹರಿಸಲು ಜಾಗ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

Body:ಎಂಟಿಬಿ ನಾಗರಾಜ್ ಮಾತನಾಡಿ ದೊಡ್ಡಗನಬ್ಬಿ
ಗ್ರಾಮದ ಮುಖಂಡರು ಮೂವತ್ತು ವರ್ಷಗಳ ಕಾಲದಿಂದ ಇಪ್ಪತ್ತು ಕುಟುಂಬಕ್ಕೆ ರಸ್ತೆ ಇಲ್ಲದೆ ಕಾಲು ದಾರಿಯಲ್ಲಿ ಓಡಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು ಕೂಡಲೇ ರಸ್ತೆ ಹಾದುಹೋಗುವ ಜಮೀನಿನ ಮಾಲಿಕರನ್ನು ಕರೆದು ಅವರಿಗೆ ಮನವರಿಕೆ ಮಾಡಿ ಸೂಮಾರು ಹನ್ನೆರಡು ಲಕ್ಷ ವೆಚ್ಚದಲ್ಲಿ ಒಂದು ರಸ್ತೆಯನ್ನು ಮಾಡಿಕೊಟ್ಟು ಅವರ ಸಮಸ್ಯೆಯನ್ನು ನಿವಾರಿಸಿದ್ದೆನೆ ಎಂದರು.ಮೂವತ್ತು ವರ್ಷಗಳಿಂದ ರಾಜಕೀಯ ಮಾಡಿ ಗ್ರಾಮಸ್ಥರಿಗೆ ತೊಂದರೆ ಆಗಿರುವುದು‌ ತುಂಬಾ ಬೆಸರವಾಗಿದೆ ಎಂದರು.

Conclusion:ರಾಜಕೀಯಕ್ಕೆ ತುತ್ತಾಗಿದ್ದ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಮಾಜಿ ಶಾಸಕ ಎಂಟಿಬಿ ನಾಗರಾಜ್ ಜನರ ಮನಸ್ಸು ಗೆದ್ದಿದ್ದಾರೆ. ಇವರ ಈ ಕಾರ್ಯ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಲಿ

ಬೈಟ್, ಎಂಟಿಬಿ ನಾಗರಾಜ್, ಮಾಜಿ ಶಾಸಕ

ಬೈಟ್, ಜನಾರ್ಧನ್ ಸ್ಥಳೀಯರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.