ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೇಗೆ ಹೆಚ್ಚಾಗುತ್ತಿದೆಯೋ ಹಾಗೇ ಸೋಂಕಿತರು ಮಾನಸಿಕ ಖಿನ್ನತೆಗೂ ಒಳಗಾಗುತ್ತಿದ್ದಾರೆ. ನಾಲ್ಕು ಗೋಡೆ ಮಧ್ಯೆ ಹತ್ತಾರು ದಿನಗಳ ಕಾಲ ಇರುವ ಸೋಂಕಿತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವನ್ನ ಕೊರೊನಾ ವಾರಿಯರ್ಸ್ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಮ್ಯೂಸಿಕ್ ಮತ್ತು ಡ್ಯಾನ್ಸ್ ಖಿನ್ನತೆಯನ್ನ ದೂರು ಮಾಡಲು ಇರುವ ಪ್ರಮುಖ ಅಸ್ತ್ರ. ಹೀಗಾಗಿ ಈ ಅಸ್ತ್ರವನ್ನ ಬಳಸಿಕೊಂಡು ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಸೋಂಕಿತರಿಗೆ ಚಿಕಿತ್ಸೆ ನೀಡುವ ಜೊತೆ ಜೊತೆಗೆ ಅವರಲ್ಲಿ ಮನೆ ಮಾಡಿರುವ ಖಿನ್ನೆತಯನ್ನೂ ದೂರ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಶ್ರೇಯಸ್ ಆಸ್ಪತ್ರೆಯಲ್ಲಿ ಡಾಕ್ಟರ್ಸ್ ಮತ್ತು ನರ್ಸ್ ಗಳು ಪಿಪಿಇ ಕಿಟ್ ಧರಿಸಿ ಡ್ಯಾನ್ಸ್ ಮಾಡುತ್ತಾ ಸೋಂಕಿತರಿಗೆ ಮನರಂಜನೆ ನೀಡುತ್ತಿದ್ದಾರೆ.
ಸೋಂಕಿತರಲ್ಲಿ ಖಿನ್ನತೆ ಹೋಗಲಾಡಿಲು ಈ ಪ್ರಯತ್ನ ಮಾಡಿದ್ದು, ಪ್ರತಿ ನಿತ್ಯ ಕೆಲ ಹೊತ್ತು ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಜೊತೆಗೆ ಸೋಂಕಿತರಲ್ಲಿ ಕೆಲವರು ಹಾಸಿಗೆಯಲ್ಲೇ ನೃತ್ಯ ಮಾಡಿದರೆ, ಇನ್ನೂ ಕೆಲವರು ಬೆಡ್ನಿಂದ ಕೆಳಗಿಳಿದು ಸ್ಟೆಪ್ಸ್ ಹಾಕಿ ಖುಷಿ ಪಡುತ್ತಿದ್ದಾರೆ.
ಇದನ್ನೂ ಓದಿ : ನಾಳೆಯಿಂದ 18-44 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ: ಡಾ.ಕೆ.ಸುಧಾಕರ್