ETV Bharat / state

ಕೊರೊನಾ ಸೋಂಕಿತರಿಗೆ ಜೀವ ರಕ್ಷಕ ವೆಂಟಿಲೇಟರ್ ನಿಜಕ್ಕೂ ಮೃತ್ಯು ಯಂತ್ರವಾಗ್ತಿದ್ಯಾ?:ಏನಂತಾರೇ ತಜ್ಞರು ? - Doctor Basavaprabhu talk about Ventilator side effect

ವೆಂಟಿಲೇಟರ್​ನಿಂದ ಹೊರ ಬಂದವರು ಸಹ ಶ್ವಾಸಕೋಶ ಸಾಮಾನ್ಯ ಸ್ಥಿತಿಗೆ ಬಂದು ದೈನಂದಿನ ಕೆಲಸ ನಿರ್ವಹಣೆಗೂ ಕೂಡ ಬಹಳ ಸಮಯ ಹಿಡಿಯಲಿದೆ. ಮೆಕ್ಯಾನಿಕಲ್ ವೆಂಟಿಲೇಶನ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸೆಕೆಂಡರಿ ಇನ್ಪೆಕ್ಷನ್ ಆಗುವುದನ್ನ ತಡೆಯುವುದೇ ಉತ್ತಮ ದಾರಿ..

ventilator
ವೆಂಟಿಲೇಟರ್
author img

By

Published : May 30, 2021, 8:17 PM IST

Updated : May 30, 2021, 8:28 PM IST

ಬೆಂಗಳೂರು : ವಿಶ್ವವೇ ಸಾಂಕ್ರಾಮಿಕ ಕೊರೊನಾ ಸೋಂಕಿನಿಂದ ಮುಳುಗಿ ಹೋಗಿದೆ. ಇತ್ತ ನಮ್ಮ ದೇಶದಲ್ಲೂ ಕೊರೊನಾ ಹೊಸ ಹೊಸ ರೂಪ ಪಡೆದು, ಹಲವರನ್ನ ಬಲಿ ಪಡೆದಿದೆ.‌

ಈ ನಡುವೆ ಕೊರೊನಾ ಸೋಂಕಿತರು ವೆಂಟಿಲೇಟರ್ ಬೆಡ್‌ಗೆ ಹೋದರೆ ಅಲ್ಲಿಗೆ ಕಥೆ ಮುಗಿತು ಅನ್ನೋ ಮನಸ್ಥಿತಿ ಇದೀಗ ನಿರ್ಮಾಣವಾಗಿದೆ.

ಕೊರೊನಾ ಸೋಂಕಿತರಿಗೆ ಜೀವ ರಕ್ಷಕ ವೆಂಟಿಲೇಟರ್ ನಿಜಕ್ಕೂ ಮೃತ್ಯು ಯಂತ್ರವಾಗ್ತಿದ್ಯಾ? ಯಾವ ಸಂದರ್ಭದಲ್ಲಿ ವೆಂಟಿಲೇಟರ್ ಬೇಕಾಗುತ್ತೆ? ಸೋಂಕಿತರು ಯಾವ ಸಂದರ್ಭದಲ್ಲಿ ಆಸ್ಪತ್ರೆ ಬಾಗಿಲು ತಟ್ಟುತ್ತಿದ್ದಾರೆ.‌ ಯಾಕೆ ಹೀಗೆ? ಅನ್ನೋದರ ಬಗ್ಗೆ ತಜ್ಞ ವೈದ್ಯರು ಈ ರೀತಿ ಹೇಳುತ್ತಾರೆ.

ವೆಂಟಿಲೇಟರ್ ಕುರಿತು ತಜ್ಞ ವೈದ್ಯ ಡಾ. ಬಸವಪ್ರಭು ಮಾತನಾಡಿದರು

ಕೊರೊನಾ ಸೋಂಕು ಎಂಬುದು ಶ್ವಾಸಕೋಶಕ್ಕೆ ಹಾನಿ ಮಾಡುವ ಕಾಯಿಲೆಯಾಗಿದೆ. ಶೇ.90ರಷ್ಟು ಸೋಂಕಿತರಿಗೆ ಶ್ವಾಸಕೋಶದಲ್ಲಿ ಸಣ್ಣ ಪ್ರಮಾಣದ ಸೋಂಕು ತಗುಲಿರುತ್ತದೆ ಅಂತಾರೆ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ಬಸವಪ್ರಭು. ಇದರಲ್ಲಿ ಶೇ. 1 ರಷ್ಟು ಮಂದಿಗೆ ಐಸಿಯು ಆರೈಕೆ ಅಗತ್ಯ ಇರಲಿದೆ ಅಂತ ಅವರು ತಿಳಿಸಿದ್ದಾರೆ.

ಶ್ವಾಸಕೋಶಕ್ಕೆ ಎಷ್ಟು ಹಾನಿಯಾಗಿದೆ ಎಂಬುದರ ಮೇಲೆ ಐಸಿಯು ಕೇರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತೆ.‌ ಹಾಗೆಯೇ ಉಸಿರಾಟದ ಸಮಸ್ಯೆ, ಸ್ಯಾಚುರೇಷನ್ ಪ್ರಮಾಣ ಕಡಿಮೆ ಆದಾಗ ಬೇರೆ ಬೇರೆ ಹಂತದಲ್ಲಿ ಅಂದರೆ ನಾಲ್ಕೈದು ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಇದ್ಯಾವುದರಿಂದಲೂ ಉಸಿರಾಟದ ಸ್ಥಿತಿ ಸಾಮಾನ್ಯ ಸ್ಥಿತಿಗೆ ಬರದೇ ಇದ್ದಾಗ, ಅಮಲು ಉಂಟಾದರೆ ಮೆಕ್ಯಾನಿಕಲ್ ವೆಂಟಿಲೇಶನ್ ಮೊರೆ ಹೋಗಬೇಕಾಗುತ್ತೆ ಅಂತಾರೆ.

ಮೆಕ್ಯಾನಿಕಲ್ ವೆಂಟಿಲೇಶನ್ ಅಂದರೆ ಕೊನೆ ಹಂತನಾ? ಬದುಕುಳಿದು ಬರಲು ಸಾಧ್ಯವೇ ಇಲ್ವಾ? ಅಂತೆಲ್ಲ ಪ್ರಶ್ನೆಗಳು ಉದ್ಭವವಾಗುತ್ತೆ. ಆದರೆ, ಮೆಕ್ಯಾನಿಕಲ್ ವೆಂಟಿಲೇಶನ್ ಅನ್ನೋದು ಹೊಸತೇನು ಅಲ್ಲ. ಬೇರೆ ಅನಾರೋಗ್ಯ ಸಮಸ್ಯೆ ಇದ್ದಾಗಲೂ ಇದರ ಬಳಕೆ ಮಾಡಲಾಗುತ್ತೆ. ಎಷ್ಟೋ ಜನರು ವೆಂಟಿಲೇಶನ್​ನಿಂದ ಹೊರ ಬಂದು ಟ್ಯೂಬ್ ಎಲ್ಲ ತೆಗೆದ ನಂತರ ಗುಣಮುಖರಾಗಿದ್ದು ಇದೆ.

ಹಾಗೆಯೇ, ಕೊರೊನಾ ಸಂದರ್ಭದಲ್ಲೂ ಕೂಡ ಹಲವರು ವೆಂಟಿಲೇಶನ್​ಗೆ ಹೋದವರು ಚೆನ್ನಾಗಿಯೇ ಹೊರಬರ್ತಾರೆ. ಆದರೆ, ಸಾಮಾನ್ಯವಾಗಿ ಕಳೆದೊಂದು ವರ್ಷದಿಂದ ಬಹುಬೇಗ/ ತಡವಾಗಿ ವೆಂಟಿಲೇಶನ್ ಮೊರೆ ಹೋದರೂ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ, ಎಲ್ಲ ಪ್ರಯತ್ನಗಳ ನಂತರವೂ ಪ್ರಯೋಜನಕ್ಕೆ ಬಾರದೇ ಇದ್ದಾಗಷ್ಟೇ ರೋಗಿಗಳನ್ನ ಮೆಕ್ಯಾನಿಕಲ್ ವೆಂಟಿಲೇಶನ್‌ಗೆ ಕನೆಕ್ಟ್ ಮಾಡುತ್ತೇವೆ ಎಂದು ತಿಳಿಸಿದರು.‌

ಮೆಕ್ಯಾನಿಕಲ್ ವೆಂಟಿಲೇಶನ್​ನಲ್ಲಿ ಎಷ್ಟು ಸಮಯ ಇರಬೇಕು?

ಅಂದಹಾಗೆ, ಯಾವ ವಯೋಮಾನದವರು, ಎಷ್ಟು ಸಮಯ ಮೆಕ್ಯಾನಿಕಲ್ ವೆಂಟಿಲೇಶನ್​ನಲ್ಲಿ ಇರಬೇಕು ಎಂಬುದನ್ನ ತಿಳಿಸುವುದು ಕಷ್ಟ ಸಾಧ್ಯ. ರಕ್ತದಲ್ಲಿ ಆಕ್ಸಿಜನ್ ಕೊರತೆ ಎಷ್ಟಿದೆ ಎಂಬುದನ್ನು ತಿಳಿದು ವೆಂಟಿಲೇಷನ್ ಮೂಲಕ ಸರಿಪಡಿಸಬಹುದು. ಆದರೆ, ಇದೇ ಕಟ್ಟಕಡೆಯ ಪರಿಹಾರವಲ್ಲ. ಪ್ರತಿ ದಿನವೂ ಕ್ಷಣ ಕ್ಷಣಕ್ಕೂ ಮಾನಿಟರಿಂಗ್ ಮಾಡುತ್ತಾ ಇರಬೇಕಾಗುತ್ತೆ. ಆಕ್ಸಿಜನ್ ಅಗತ್ಯವಿಲ್ಲದೇ ಇದ್ದಾಗ ವೆಂಟಿಲೇಟರ್ ತೆಗೆಯಲಾಗುತ್ತೆ ಅಂತ ವಿವರಿಸಿದರು.

ಆದರೆ, ಇದು ಬಹಳ ದೀರ್ಘಕಾಲದಾಗಿದ್ದು, ಮೂರು ವಾರಗಳ ಕಾಲ, 10 ದಿನಗಳ ಕಾಲ ವೆಂಟಿಲೇಟರ್​ನಲ್ಲಿ ಇದ್ದು ನಂತರ ಡಿಸ್ಜಾರ್ಜ್ ಕೂಡ ಆಗಿದ್ದಾರೆ. ಹಾಗೆ ವಿಶ್ವದಲ್ಲಿ ವೆಂಟಿಲೇಶನ್ ಅವಶ್ಯಕತೆ ಬಂದಾಗ 50-60% ರಷ್ಟು ಜನರು ಬದುಕುಳಿಯದೆ ಸಾವನ್ನಪ್ಪಿರುವುದನ್ನ ಗಮನಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದಕ್ಕೆ ಹಲವಾರು ಕಾರಣಗಳು ಇದ್ದು, ಕೊರೊನಾದಿಂದ ಶ್ವಾಸಕೋಶಕ್ಕೆ ಹಂತ ಹಂತವಾಗಿ ತೊಂದರೆ, ವೆಂಟಿಲೇಶನ್​ನಲ್ಲಿ ಹೆಚ್ಚು ಸಮಯ ಇರುವುದರಿಂದ ಸೆಕೆಂಡರಿ ಬ್ಯಾಕ್ಟೀರಿಯಾ ಇನ್ಪೆಕ್ಷನ್​ ಕೂಡ‌ ಹೆಚ್ಚಾಗುವ ಸಾಧ್ಯತೆ ಇರಲಿದೆ. ನಿಮೋನಿಯಾ, ಲಂಗ್ಸ್ ಫೈಬ್ರೋಸಿಸ್ ಆದಾಗ ಹಲವರಿಗೆ ಸ್ಪಂದಿಸುವುದಿಲ್ಲ. ಅಂತಹ ಸಮಯದಲ್ಲೂ ವೆಂಟಿಲೇಶನ್ ಕೆಲಸ ಮಾಡೋದಿಲ್ಲ, ಅದು ಬಹಳ ಸವಾಲಿನ ಕೆಲಸ ಅಂತ ವಿವರಿಸಿದರು.

ವೆಂಟಿಲೇಟರ್​ನಿಂದ ಹೊರ ಬಂದವರು ಸಹ ಶ್ವಾಸಕೋಶ ಸಾಮಾನ್ಯ ಸ್ಥಿತಿಗೆ ಬಂದು ದೈನಂದಿನ ಕೆಲಸ ನಿರ್ವಹಣೆಗೂ ಕೂಡ ಬಹಳ ಸಮಯ ಹಿಡಿಯಲಿದೆ. ಮೆಕ್ಯಾನಿಕಲ್ ವೆಂಟಿಲೇಶನ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸೆಕೆಂಡರಿ ಇನ್ಪೆಕ್ಷನ್ ಆಗುವುದನ್ನ ತಡೆಯುವುದೇ ಉತ್ತಮ ದಾರಿ ಎಂದರು.

ಓದಿ: 'ತಲೆಕೆಡಿಸಿಕೊಳ್ಳಬೇಡಿ, ಅಕ್ಕಿ-ಗೋಧಿ ಕೊಡಲು ತಹಶೀಲ್ದಾರ್​ಗೆ ಹೇಳ್ತೇನೆ'

Last Updated : May 30, 2021, 8:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.