ETV Bharat / state

ನಮ್ಮ ಮನವಿಯನ್ನು ಚುನಾವಣಾ ಆಯೋಗ ಅಂಗೀಕರಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ: ಡಿಕೆಶಿ

ದಲಿತ, ಹಿಂದುಳಿದ, ಮುಸ್ಲಿಂ ಸಮುದಾಯದ ಮತಗಳ ಡಿಲಿಟ್ ಮಾಡಿ ನಮ್ಮ ಕಾಲದಲ್ಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಕಾಲದಲ್ಲಿ ಆಗಿದ್ರೆ ಕೇಸ್ ಹಾಕಿ ಕ್ರಮ ಕೈಗೊಳ್ಳಿ ಎಂದು ಡಿಕೆಶಿ ಶಿವಕುಮಾರ್​ ಹೇಳಿದರು.

KN_BNG
ಡಿಕೆ ಶಿವಕುಮಾರ್
author img

By

Published : Nov 26, 2022, 1:07 PM IST

ಬೆಂಗಳೂರು: ನಮ್ಮ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ಅಂಗೀಕರಿಸಿದೆ. ಅದರ ಆಧಾರದ ಮೇಲೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪರ್ಯಾಸವೆಂದರೆ ಈ ಅಧಿಕಾರಿಗಳು ಸಿಎಂ ಮತ್ತು ಶಾಸಕರು ಹಾಗೂ ಸಚಿವರ ಸೂಚನೆಯಂತೆ ಕೆಲಸ ಮಾಡಿದ್ದಾರೆ. ಇದರ ಕಿಂಗ್ ಪಿನ್ ಮೇಲೆ ಕ್ರಮ ಆಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರ ಹೆಸರು ಹೇಳದೆ ಆರೋಪಿಸಿದರು. ನಮ್ಮ ಅವಧಿಯಲ್ಲಿ ಅಕ್ರಮ ಆಗಿದ್ರೆ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

ಆರ್​ಆರ್ ನಗರದಲ್ಲಿ ಗೌಡ ಅಂತ ಹೆಸರು ಇದ್ದರೇ ಕುಟುಂಬದಲ್ಲಿ ಎರಡು ವೋಟ್ ಮಾತ್ರ ಬಿಟ್ಟಿದ್ದಾರೆ. ಗೌಡ ಅಂತ ಇದ್ರೆ ಡಿಲಿಟ್ ಮಾಡಿದ್ದಾರೆ ಎಂದು ಮುನಿರತ್ನ ಹೆಸರು ಪ್ರಸ್ತಾಪ ಮಾಡದೇ ಡಿಕೆಶಿ ಗಂಭೀರ ಆರೋಪ ಮಾಡಿದರು. ದಲಿತ, ಹಿಂದುಳಿದ, ಮುಸ್ಲಿಂ ಸಮುದಾಯದ ಮತಗಳನ್ನು ತೆಗೆದುಹಾಕಿ ನಮ್ಮ ಕಾಲದಲ್ಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಕಾಲದಲ್ಲಿ ಆಗಿದ್ರೆ ಕೇಸ್ ಹಾಕಿ ಕ್ರಮ ಕೈಗೊಳ್ಳಿ. ನಾವು ನೇರವಾಗಿ ಇಳಿದು ಬಂದಿಲ್ಲವಲ್ಲ. ಈ ಪ್ರಕರಣದಲ್ಲಿ ಶಾಸಕರು, ಸಚಿವರು ಭಾಗಿಯಾಗಿದ್ದಾರೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದು ಹೇಳಿದ್ದಾರೆ. ಹಾಕಲಿ ನನಗೇನು ಭಯವಿಲ್ಲ ಎಂದು ಸಚಿವ ಅಶ್ವತ್ಥನಾರಾಯಣ್​ ಅವರಿಗೆ ತಿರುಗೇಟು ಕೊಟ್ಟರು.

ಡಿಕೆ ಶಿವಕುಮಾರ್​ ಪ್ರತಿಕ್ರಿಯೆ

ವೋಟ್ ಕಳ್ಳತನ ನೋಟು ಪ್ರಿಂಟ್ ಮಾಡುವಷ್ಟೇ ದೊಡ್ಡ ಅಪರಾಧ. ಇಂತಹ ಕೆಲಸ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಇದು ಜನರಿಗೆ ಮಾಡಿದ ಮೋಸ. ಜನ ಇದಕ್ಕೆ ಪಾಠ ಕಲಿಸಬೇಕು. ಬಿಎಲ್ಓ ನೇಮಕ ಮಾಡುವ ಅಧಿಕಾರ ಯಾರಿಗೂ ಇಲ್ಲ. ಪಕ್ಷದಿಂದ ನೇಮಕ ಮಾಡಿದರೂ ತಹಶಿಲ್ದಾರ್ ಅದಕ್ಕೆ ಸಹಿ ಹಾಕಬೇಕು ಎಂದರು. ಹಿರಿಯ ಅಧಿಕಾರಿಗಳು ನಮಗೆ ಮೇಲಿನಿಂದ ಆದೇಶ ಇತ್ತು ಮಾಡಿದ್ದೇವೆಂದು ಹೇಳಿದ್ದಾರೆ. ಇದು ನ್ಯಾಯಾಂಗ ತನಿಖೆ ಆಗಬೇಕು. ಡಿಲಿಟ್ ಮಾಡಲು ಅರ್ಜಿ ಕೊಡಬೇಕು.

ಮನೆ ಅಕ್ಕಪಕ್ಕ ಮಹಜರ್ ಮಾಡಬೇಕು. ಬಿಎಲ್ಓಗಳನ್ನು ನೇಮಕ ಮಾಡಿದವರ ವಿರುದ್ಧ ಕ್ರಮ ಆಗಬೇಕು. 28 ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಅಕ್ರಮ ನಡೆದಿದೆ. ಇಡೀ 28 ಕ್ಷೇತ್ರಗಳಲ್ಲಿ ಮತ್ತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಇವರು ಶಾಸಕರ ಕಚೇರಿಯಲ್ಲಿ ನಡೆಸಿದ ಪರಿಷ್ಕರಣೆ ಬೇಡ. ದುಡ್ಡು ಎಲ್ಲಿಂದ ಹೋಯಿತು. ಯಾರು ಕೊಟ್ರು ಅನ್ನೋದು ತನಿಖೆ ಆಗಲಿ.

ಚಿಲುಮೆ ನನಗೆ ಪರಿಚಯ ಇಲ್ಲ ಎಂದು ಮಂತ್ರಿ ಹೇಳಿದ್ರು. ಈಗ ದುರುಪಯೋಗ ಇಲ್ಲ ಎಂದಿದ್ದಾರೆ. ಸಿಎಂ ಗಮನಕ್ಕೆ ತರದೇ ಈ ಕೆಲಸ ಸಾಧ್ಯವಿಲ್ಲ. ಮಹಾದೇವಪುರದಲ್ಲಿ ಶಾಸಕರ ಸೂಚನೆಯಂತೆ ಕೆಲಸ ಮಾಡಿದ್ದೇವೆಂದು ಹೇಳಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ. ಮತ ಕಳ್ಳತನ - ನೋಟು ಪ್ರಿಂಟ್ ಮಾಡಿದಷ್ಟೇ ಅಪರಾಧ ಎಂದು ಹೇಳಿದರು.

ಇದನ್ನೂ ಓದಿ: ಮತ ಪರಿಷ್ಕರಣೆ ಅಕ್ರಮ: ಇಬ್ಬರು ಅಧಿಕಾರಿಗಳ ಅಮಾನತಿಗೆ ಚುನಾವಣೆ ಆಯೋಗದಿಂದ ಖಡಕ್ ನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.