ETV Bharat / state

ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರ ಸಂಘ-ಸಂಸ್ಥೆಗಳ ಬೃಹತ್​ ಪ್ರತಿಭಟನೆ: ಬೆಂಗಳೂರಲ್ಲಿ ಪೊಲೀಸ್​ ಕಣ್ಗಾವಲು - ಒಕ್ಕಲಿಗರ ಸಂಘ-ಸಂಸ್ಥೆಗಳ ಬೃಹತ್​ ಪ್ರತಿಭಟನೆ

ಜಾರಿ ನಿರ್ದೇಶನಾಲಯ (ಇಡಿ) ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಒಕ್ಕಲಿಗರ ಸಂಘ-ಸಂಸ್ಥೆಗಳ ಒಕ್ಕೂಟ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.

ಬೃಹತ್​ ಪ್ರತಿಭಟನೆ
author img

By

Published : Sep 11, 2019, 9:22 AM IST

ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್​ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಇಂದು ಬೃಹತ್ ಪ್ರತಿಭಟನೆಯನ್ನು ಒಕ್ಕಲಿಗರ ಸಂಘಟನೆ ಹಮ್ಮಿಕೊಂಡಿದೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆ ಹಿನ್ನೆಲೆ ಎಲ್ಲೆಡೆ ಖಾಕಿ ಕಣ್ಗಾವಲು ಇಡಲಾಗಿದೆ. ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಷನಲ್ ಕಾಲೇಜು ಮೈದಾನದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ನಡೆಸಿ ನಂತ್ರ ರಾಜ್ಯಪಾಲರಿಗೆ ಮನವಿ ಯನ್ನ ಸಲ್ಲಿಸಲಿದ್ದಾರೆ.

ಪ್ರತಿಭಟನೆಗೆ ಸಿದ್ದಗೊಂಡಿರುವ ಫ್ರೀಡಂ ಪಾರ್ಕ್​

ಪ್ರತಿಭಟನೆಯಲ್ಲಿ ರಾಜಕೀಯ ಪಕ್ಷದ ಮುಖಂಡರು, ಸ್ವಾಮೀಜಿಗಳು, ಕರವೇ ಅಧ್ಯಕ್ಷರು, ರಾಮನಗರ ಮಂಡ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಒಕ್ಕಲಿಗ ಸಮುದಾಯದ ಜನರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.

ಪ್ರತಿಭಟನೆಗೆ ಒಟ್ಟು 35,000 ಜನರು ಬರಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭದ್ರತೆಗಾಗಿ 50 ಕೆಎಸ್ಆರ್​ಪಿ, 40 ಸಿ ಎ ಆರ್ ತುಕಡಿ, ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, 11 ಡಿಸಿಪಿ, 42 ಎಸಿಪಿ, 106 ಇನ್ಸ್ಪೆಕ್ಟರ್, 373 ಎಸ್ ಐ,374 ಎ ಎಸ್ ಐ, 2280 ಮುಖ್ಯಪೇದೆ, 500 ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪ್ರತಿಭಟನಾಕಾರರ ಪ್ರತಿಯೊಂದು ಚಲನವಲನ ಗಮನಿಸಲಾಗುತ್ತಿದೆ. ಅಲ್ಲದೆ, ಅವರು ಬಂದ ವಾಹನದ ನಂಬರ್ ಪ್ಲೇಟ್ ಸಹ ತೆಗೆದುಕೊಳ್ಳಲಾಗುತ್ತದೆ.

ಮತ್ತೊಂದೆಡೆ ಕಾರ್ಯಕರ್ತರು ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗೆ ಏನಾದರೂ ತೊಂದರೆ ಮಾಡಿದರೆ ಅಂತವರನ್ನು ತಕ್ಷಣ ಬಂಧಿಸಸಲಾಗುವುದು ಎಂದು ನಗರ ಪೊಲೀಸರು ಸೂಚನೆ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಏನಾದರೂ ಅಹಿತಕರ ಘಟನೆಗಳು ನಡೆದರೆ ಪ್ರತಿಭಟನೆ ನಡೆಸಲು ಪ್ಲಾನ್​ ಮಾಡಿದ ಆಯೋಜಕರೇ ನೇರ ಹೊಣೆ ಎಂದು ತಿಳಿಸಿದ್ದಾರೆ.

ರ್ಯಾಲಿ ಬೆಳಗ್ಗೆ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟು, ಸಜ್ಜನ್​ರಾವ್​ ವೃತ್ತ, ಮಿನರ್ವವೃತ್ತ, ಜೆ.ಸಿ. ರಸ್ತೆ, ಪುರಭವನ, ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ ಮೂಲಕ ಸಾಗಿ ಸ್ವತಂತ್ರ್ಯ ಉದ್ಯಾನ ತಲುಪಲಿದೆ. ಈ ಸಂದರ್ಭ ಬಸವನಗುಡಿ, ಆರ್.ವಿ. ರಸ್ತೆ, ಕೆ.ಆರ್. ಮಾರುಕಟ್ಟೆ, ಜೆ.ಸಿ. ರಸ್ತೆ, ಕಬ್ಬನ್ ಪಾರ್ಕ್ ಸುತ್ತಮುತ್ತ, ವಿಧಾನಸೌಧ, ಕೆಂಪೇಗೌಡ ಬಸ್ ನಿಲ್ದಾಣ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕಾಟನ್​ಪೇಟೆ, ಬಿನ್ನಿಪೇಟೆ, ಚಾಮರಾಜಪೇಟೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ ಸೇರಿದಂತೆ ಮತ್ತಿತರ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

Intro:newsBody:ಇಂದು ಮಹಾನಗರ ಸ್ಥಬ್ಧಗೊಳಿಸಲಿದೆ ಒಕ್ಕಲಿಗ ಸಂಘ-ಸಂಸ್ಥೆಗಳ ಬೃಹತ್ ಪ್ರತಿಭಟನೆ

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ಮಾಜಿ ಸಚಿವ ಹಾಗೂ ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಒಕ್ಕಲಿಗರ ಸಂಘ-ಸಂಸ್ಥೆಗಳ ಒಕ್ಕೂಟ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟು ಕೇಂದ್ರಭಾಗದ ಸ್ವತಂಥ್ರ ಉದ್ಯಾನದವರೆಗೆ ಮೆರವಣಿಗೆ ತೆರಳಿ ಪ್ರತಿಭಟಿಸುವ ಹಿನ್ನೆಲೆ ಕೆಲ ಪ್ರಮುಖ ಭಾಗಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳಲಿದೆ. ಸಾವಿರಾರು ಮಂದಿ ಪಾಲ್ಗೊಳ್ಳುವ ಹಿನ್ನೆಲೆ ಇಂದು ಬೆಳಗಿನ ಅರ್ಧದಿನ ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಭಾಗದ ನಾಗರಿಕರು ಓಡಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.
ಪ್ರತಿಭಟನಾ ಮೆರವಣಿಗೆ ಪ್ರಮುಖಾಂಶಗಳು
ನ್ಯಾಷನಲ್ ಕಾಲೇಜು ಮೈದಾನ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ರ್ಯಾಲಿ ಆರಂಭವಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಸೇರಿ 10 ಮಂದಿ ಪ್ರತಿಭಟನಾ ರ್ಯಾಲಿಗೆ ಅನುಮತಿ ಕೋರಿದ್ದು, ಕಾನೂನಿನಡಿ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಮತ್ತು ಸಮುದಾಯದ ಸ್ವಾಮೀಜಿಗಳು, ನಾಯಕರು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಬಳ್ಳಾರಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 35 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಬಿಗಿ ಭದ್ರತೆ
ಭದ್ರತೆಗೆ 50 ಕೆಎಸ್ಆರ್ಪಿ ತುಕಡಿ, 40 ಸಿಎಆರ್ ತುಕಡಿ, 4 ಹೆಚ್ಚುವರಿ ಪೊಲೀಸ್ ಆಯುಕ್ತರು, 11 ಡಿಸಿಪಿ, 42 ಎಸಿಪಿ, 106 ಇನ್ಸ್ಪೆಕ್ಟರ್, 373 ಎಸ್ಐ, 374 ಎಎಸ್ಐ, 2,280 ಮುಖ್ಯಪೇದೆ, ಪೇದೆಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ವಿಶೇಷ ಪೊಲೀಸ್ ನಿಗಾದಲ್ಲಿ ಮೆರವಣಿಗೆ ಸಾಗಲಿದೆ. ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದು, ಒತ್ತಾಯವಾಗಿ ಅಂಗಡಿ ಮುಚ್ಚಿಸುವುದು, ಜನ ಜೀವನಕ್ಕೆ ಅಡ್ಡಿಪಡಿಸಿದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರತಿಭಟನಾಕಾರರಿಗೆ ತಿಳಿಸಲಾಗಿದೆ.
ರ‍್ಯಾಲಿ ಸಾಗುವ ಮಾರ್ಗಗಳು ಏಕಮುಖ ಸಂಚಾರವಿರುವ ಮಾರ್ಗಗಳಲ್ಲಿ ಆಗಿದ್ದು, 2 ವಿಭಾಗ ಮಾಡಿ ಬ್ಯಾರಿಕೇಡ್ ಅಳವಡಿಸಿ ಶೇ.60 ಭಾಗದಲ್ಲಿ ಪ್ರತಿಭಟನಾಕಾರರನ್ನು ಮತ್ತು ಶೇ.40 ರಲ್ಲಿ ತುರ್ತು ವಾಹನಗಳು ಸಾಗಲು ಅನುವು ಮಾಡಲಾಗುತ್ತದೆ. ಸುಗಮ ಸಂಚಾರಕ್ಕಾಗಿ 6 ಎಸಿಪಿ, 37 ಇನ್ಸ್ಪೆಕ್ಟರ್ಗಳು, 116 ಪಿಎಸ್ಐ, 320 ಎಎಸ್ಐ, 1,120 ಮುಖ್ಯಪೇದೆ, ಪೇದೆಗಳನ್ನು ನಿಯೋಜನೆ ಮಾಡಲಾಗಿದೆ.
ರ್ಯಾಲಿ ಮಾರ್ಗ
ರ್ಯಾಲಿ ಬೆಳಗ್ಗೆ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟು, ಸಜ್ಜನ್ರಾವ್ ವೃತ್ತ, ಮಿನರ್ವವೃತ್ತ, ಜೆ.ಸಿ. ರಸ್ತೆ, ಪುರಭವನ, ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ ಮೂಲಕ ಸಾಗಿ ಸ್ವತಂತ್ರ ಉದ್ಯಾನ ತಲುಪಲಿದೆ. ಈ ಸಂದರ್ಭ ಬಸವನಗುಡಿ, ಆರ್.ವಿ. ರಸ್ತೆ, ಕೆ.ಆರ್. ಮಾರುಕಟ್ಟೆ, ಜೆ.ಸಿ. ರಸ್ತೆ, ಕಬ್ಬನ್ ಪಾರ್ಕ್ ಸುತ್ತಮುತ್ತ, ವಿಧಾನಸೌಧ, ಕೆಂಪೇಗೌಡ ಬಸ್ ನಿಲ್ದಾಣ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕಾಟನ್ಪೇಟೆ, ಬಿನ್ನಿಪೇಟೆ, ಚಾಮರಾಜಪೇಟೆ, ಚಿಕ್ಕಪೇಟೆ, ಅವೆನ್ಯು ರಸ್ತೆ ಮತ್ತಿತರ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.