ETV Bharat / state

ಫಲಿತಾಂಶದ ಮೂಲಕ ಡಿಕೆಶಿಗೆ ಕನಕಪುರದಲ್ಲಿ ತಕ್ಕ ಉತ್ತರ ಸಿಗುತ್ತದೆ: ಸಿ ಪಿ ಯೋಗೇಶ್ವರ್

ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರಿಂದು ಮಲ್ಲೇಶ್ವರದ ಬಿಜೆಪಿ ಮುಖ್ಯ ಕಚೇರಿಯಲ್ಲಿ ಬಿ ಫಾರ್ಮ್ ಸ್ವೀಕರಿಸಿದರು.

dk-will-get-a-proper-answer-in-kanakapur-by-the-result-cp-yogeshwar
ಫಲಿತಾಂಶದ ಮೂಲಕ ಡಿಕೆಶಿಗೆ ಕನಕಪುರದಲ್ಲಿ ತಕ್ಕ ಉತ್ತರ ಸಿಗುತ್ತದೆ: ಸಿಪಿ ಯೋಗೇಶ್ವರ್
author img

By

Published : Apr 15, 2023, 7:27 PM IST

ಫಲಿತಾಂಶದ ಮೂಲಕ ಡಿಕೆಶಿಗೆ ಕನಕಪುರದಲ್ಲಿ ತಕ್ಕ ಉತ್ತರ ಸಿಗುತ್ತದೆ: ಸಿಪಿ ಯೋಗೇಶ್ವರ್

ಬೆಂಗಳೂರು: ರಾಮನಗರದ ನಾಲ್ಕು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಬಾರಿ ರಾಮನಗರ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದು ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಿ ಫಾರ್ಮ್ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಪಕ್ಷದಿಂದಲೂ ಇದೊಂದು ಉತ್ತಮ ಬೆಳವಣಿಗೆಯಾಗಿದೆ. ರಾಮನಗರದ ನಾಲ್ಕು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಬಾರಿ ರಾಮನಗರ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಆರ್​ ಅಶೋಕ್ ಅವರನ್ನು ಕನಕಪುರದಿಂದ ಕಣಕ್ಕಿಳಿಸಲಾಗಿದೆ. ಇದೊಂದು ಅವರಿಗೆ ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.

ಆರ್ ಅಶೋಕ್ ಅವರಿಗೆ ಇದು ವಿಶೇಷವಾದಂತಹ ಅವಕಾಶವಾಗಿದ್ದು, ಸದ್ಬಳಕೆ ಮಾಡಿಕೊಂಡು ಚುನಾವಣೆ ಎದುರಿಸಬೇಕು. ನಾನು ಕೂಡ ಅವರ ಜೊತೆ ಸೇರಿಕೊಂಡು ಕನಕಪುರಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕನಕಪುರದಲ್ಲಿ ಮಿಲ್ಟ್ರಿ ಹೋಟೆಲ್​ಗಳಿವೆ, ಅಶೋಕ್ ಬಂದು ಹೋಗಲಿ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಯಾವಾಗಲೂ ಹೀಗೆ ಲೇವಡಿ ಮಾಡುತ್ತಲೇ ಇರುತ್ತಾರೆ. ಆದರೆ ಅವರಿಗೆ ಚುನಾವಣೆ ಫಲಿತಾಂಶದ ಮೂಲಕ ತಕ್ಕ ಉತ್ತರ ಸಿಗುತ್ತದೆ ಎಂದು ಯೋಗೇಶ್ವರ್​ ಹೇಳಿದರು.

ಹೆಚ್​ಡಿಕೆ ಬಗ್ಗೆ ಮಾತನಾಡಿ, ಈ ಬಾರಿ ಹೆಚ್​ಡಿ ಕುಮಾರಸ್ವಾಮಿಯವರು ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತಾರೆ. ಅವರು ಚನ್ನಪಟ್ಟಣ ಬಿಟ್ಟು ಎಲ್ಲಿಯೂ ಹೋಗಬಾರದು. ಚನ್ನಪಟ್ಟಣದಲ್ಲಿ ಅವರು ಸ್ಪರ್ಧೆ ಮಾಡ್ತಾರೆ. ಈಗಾಗಲೇ ಅವರು ಅಲ್ಲಿಂದ ನಾಮಪತ್ರ ಸಲ್ಲಿಕೆಗೆ ರೆಡಿ ಆಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹೆಸರಲ್ಲಿ 5 ಕೋಟಿ ರೂ. ಸಾಲ.. ಸ್ವಂತ ಕಾರು ಇಲ್ವಂತೆ!

ಆರ್​ ಎಸ್​ಎಸ್​ನ ಒಳ ಹುನ್ನಾರ ಬಯಲಾಗುತ್ತಿದೆ-ಹೆಚ್​​ ವಿಶ್ವಾನಾಥ್​​​: ಬಿಜೆಪಿಗೆ ಲಿಂಗಾಯತ ಹಾಗೂ ಒಕ್ಕಲಿಗರ ಶಾಸಕರುಗಳು ಬೇಕು. ಆದರೆ ಈ ಸಮುದಾಯದ ಪ್ರಬಲ ನಾಯಕರು ಬಿಜೆಪಿಗೆ ಬೇಕಿಲ್ಲ. ಆದ್ದರಿಂದ ವಿ ಸೋಮಣ್ಣ ಹಾಗೂ ಆರ್ ಅಶೋಕ್ ಅವರನ್ನು ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಮಾಡಿ, ಅವರನ್ನು ಬಲಿ ಪಡೆಯಲು ಆರ್​ಎಸ್​ಎಸ್ ಹುನ್ನಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿಸಿದರು.

ಸೋಮಣ್ಣ ಅವರನ್ನು ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ನಿಲ್ಲಿಸಿದ್ದಾರೆ, ಸಿದ್ದರಾಮಯ್ಯ ಅವರಿಗೆ ಮೊದಲಿನಿಂದಲೂ ವೀರಶೈವ ಸ್ವಾಮೀಜಿಗಳು ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ಸೋಮಣ್ಣ ಅವರು ಏನಾಗುತ್ತಾರೋ ಗೊತ್ತಿಲ್ಲ. ಆರ್​ಎಸ್​ಎಸ್​ಗೆ ಈ ಜಾತಿ-ಜನಾಂಗದ ಶಾಸಕರು ಬೇಕು, ನಾಯಕರು ಬೇಕಿಲ್ಲ ಎಂದು ಟೀಕಿಸಿದರು. ನಾಯಕತ್ವವನ್ನು ಮುರಿಯುವಂತ ಕೆಲಸವನ್ನು ಮಾಡುತ್ತಿದ್ದಾರೆ. ಆರ್​ ಅಶೋಕ್​ರನ್ನು ಡಿ ಕೆ ಶಿವಕುಮಾರ್​ ವಿರುದ್ಧ ನಿಲ್ಲಿಸಿದ್ದಾರೆ. ಇವರ ಹುನ್ನಾರದಿಂದ ಸೋತರೆ? ಎಂದು ಪ್ರಶ್ನಿಸಿದರು.

ಇಲ್ಲಿ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ. ಜಾತಿ-ಜಾತಿ. ಧರ್ಮ-ಧರ್ಮಗಳ ನಡುವೆ ಜಗಳ ತಂದಿಡುತ್ತಿದ್ದಾರೆ. ಆರ್​ಎಸ್​ಎಸ್​ನ ಒಳ ಹುನ್ನಾರ ಬಯಲಾಗುತ್ತಿದೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೆಚ್​ ವಿಶ್ವನಾಥ್​ ಹೇಳಿದರು.​

ಇದನ್ನೂ ಓದಿ: ಬಿಜೆಪಿಯ ಸಂಭಾವ್ಯ ಸಿಎಂ ಅಭ್ಯರ್ಥಿಗಳಿಗೆ ಟಿಕೆಟ್ ಸಿಗದಂತೆ ಪ್ರಹ್ಲಾದ ಜೋಶಿ ಮಾಡಿದ್ದಾರೆ; ಯು ಟಿ ಖಾದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.