ETV Bharat / state

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಜೊತೆ ಡಿಕೆಶಿ ವಿಡಿಯೋ ಸಮಾಲೋಚನೆ - ರಂದೀಪ್ ಸಿಂಗ್ ಸುರ್ಜೇವಾಲಾ

ಕೊರೊನಾ ಸೋಂಕಿತರಿಗೆ ಕಾಂಗ್ರೆಸ್ ಸಹಾಯ ಹಸ್ತದ ಕುರಿತು ಡಿ ಕೆ ಶಿವಕುಮಾರ್ ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ರಂದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ವಿಡಿಯೋ ಸಮಾಲೋಚನೆ ನಡೆಸಿದರು.

dk shivkumar
dk shivkumar
author img

By

Published : May 4, 2021, 8:55 PM IST

Updated : May 4, 2021, 10:53 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಡಿಯೋ ಕರೆ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ರಂದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಕೊರೊನಾ ಸೋಂಕಿತರಿಗೆ ಕಾಂಗ್ರೆಸ್ ಸಹಾಯ ಹಸ್ತದ ಭಾಗವಾಗಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಬಳಿ ಸಜ್ಜುಗೊಳಿಸಲಾಗಿರುವ ಆ್ಯಂಬುಲೆನ್ಸ್, ಸಹಾಯವಾಣಿ ಮತ್ತಿತರ ನೆರವುಗಳ ಬಗ್ಗೆ ಇದೇ ಸಂದರ್ಭ ಡಿಕೆ ಶಿವಕುಮಾರ್ ಮಾಹಿತಿ ಒದಗಿಸಿದರು. ಕಾಂಗ್ರೆಸ್ ಪಕ್ಷದ ಕ್ವೀನ್ಸ್ ರಸ್ತೆಯ ಕಚೇರಿ ಹಾಗೂ ರೇಸ್ ಕೋರ್ಸ್ ಬಳಿ ಇರುವ ಕಾಂಗ್ರೆಸ್ ಭವನದಲ್ಲಿ ಆ್ಯಂಬುಲೆನ್ಸ್ ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ಅಗತ್ಯ ಇರುವ ಕಡೆ ಕಂಬಿಗಳ ಸೇವೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ. ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯ ಜೊತೆ ಜೊತೆಗೆ ಕಾಂಗ್ರೆಸ್ ಪಕ್ಷ ಕೂಡ ತನ್ನದೇ ಆದ ಮಿತಿಯಲ್ಲಿ ಸರ್ಕಾರಕ್ಕೆ ಪೂರಕವಾಗಿ ಈ ಕಾರ್ಯವನ್ನು ನಡೆಸಲಿದೆ. ಕೋವಿಡ್ ನಿಯಂತ್ರಣ ವಿಚಾರದಲ್ಲಿ ಸರ್ಕಾರದ ಪ್ರಯತ್ನಕ್ಕೆ ಬೆಂಬಲವಾಗಿ ತಾವು ನಿಲ್ಲುವುದಾಗಿ ತಿಳಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಈ ಸೇವೆಯನ್ನು ಆರಂಭಿಸುವ ಮೂಲಕ ಸಹಾಯಹಸ್ತ ಚಾಚಿದೆ ಎಂದು ಹೇಳಿದ್ರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಜೊತೆ ಡಿಕೆಶಿ ವಿಡಿಯೋ ಸಮಾಲೋಚನೆ

ಈಗಾಗಲೇ ನಗರದ ವಿವಿದೆಡೆ ಕೋವಿಡ್ ಕೇರ್ ಸೆಂಟರ್​ಗಳನ್ನು ಆರಂಭಿಸಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ಕೇಂದ್ರವನ್ನು ತೆರೆಯಲು ತೀರ್ಮಾನಿಸಿದೆ. ವಿಶೇಷ ಸಹಾಯವಾಣಿ ಸಹ ಆರಂಭಿಸಿದ್ದು, ಇಲ್ಲಿಗೆ ಕರೆ ಮಾಡುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದೆ. ಈ ಎಲ್ಲ ಮಾಹಿತಿಯನ್ನು ಡಿಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಂದೀಪ್ ಸುರ್ಜೆವಾಲಾಗೆ ನೀಡಿದ್ದಾರೆ. ಈ ಸಂದರ್ಭ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ ಜತೆಗಿದ್ದರು.

Last Updated : May 4, 2021, 10:53 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.