ETV Bharat / state

ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​ ವಿಡಿಯೋ ಸಂವಾದ - ಸದಾಶಿವನಗರ ನಿವಾಸ

ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ತಮ್ಮನ್ನು ಅವಮಾನಿಸಲು ಸಾಧ್ಯವಾಗಲಿಲ್ಲ. ಕೋವಿಡ್-19 ಹಿನ್ನೆಲೆ ಸಾಕಷ್ಟು ನಿರ್ಬಂಧ ಇತ್ತು. ಇದರಿಂದ ಮಾಜಿ ಶಾಸಕರನ್ನು ಕೂಡ ಕರೆಸಲು ಆಗಲಿಲ್ಲ..

dk-shivakumar-video-conference-with-district-presidents
ಡಿ.ಕೆ ಶಿವಕುಮಾರ್
author img

By

Published : Jul 11, 2020, 3:49 PM IST

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಮ್ಮ ಸದಾಶಿವನಗರ ನಿವಾಸದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರೊಂದಿಗೆ ಶನಿವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸೋಂಕು ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಸಂಕಷ್ಟದಲ್ಲಿರುವವರ ನೆರವಿಗೆ ಕಾಂಗ್ರೆಸ್ ಕಾರ್ಯಕರ್ತರು ಕೈಗೊಳ್ಳಬಹುದಾದ ಕ್ರಮಗಳು, ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣ, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪದಗ್ರಹಣ ಕಾರ್ಯಕ್ರಮ ಜನರಿಗೆ ತಲುಪಿದ ಬಗ್ಗೆ ಮತ್ತಿತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ತಮ್ಮನ್ನು ಅವಮಾನಿಸಲು ಸಾಧ್ಯವಾಗಲಿಲ್ಲ. ಕೋವಿಡ್-19 ಹಿನ್ನೆಲೆ ಸಾಕಷ್ಟು ನಿರ್ಬಂಧ ಇತ್ತು. ಇದರಿಂದ ಮಾಜಿ ಶಾಸಕರನ್ನು ಕೂಡ ಕರೆಸಲು ಆಗಲಿಲ್ಲ. ಮುಂದಿನ ದಿನಗಳಲ್ಲಿ ತಮ್ಮನ್ನು ಕರೆಸಿಕೊಳ್ಳಲಾಗುವುದು. ಸಾಕಷ್ಟು ಜನ ಪದಗ್ರಹಣ ಸಮಾರಂಭವನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ್ದಾರೆ. ಫೇಸ್ಬುಕ್ ಒಂದರ ಮೂಲಕವೇ 70 ಲಕ್ಷ ಮಂದಿ ಪದಗ್ರಹಣ ಸಮಾರಂಭ ವೀಕ್ಷಿಸಿದ್ದಾರೆ ಎಂದು ವಿಡಿಯೋ ಕಾನ್ಫರೆನ್ಸ್​​ನಲ್ಲಿ ಜಿಲ್ಲಾಧ್ಯಕ್ಷರುಗಳಿಗೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.