ETV Bharat / state

ಸಯ್ಯದ್​ ಸಮೀವುದ್ದೀನ್ ಅರೆಸ್ಟ್: ಹೈಕೋರ್ಟ್​​​ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಪತ್ನಿ

author img

By

Published : Aug 20, 2020, 5:27 PM IST

ಉಗ್ರ ಸಂಘಟನೆ ನಂಟು ಹೊಂದಿರುವ ಶಂಕಿತ ಸಮೀವುದ್ದೀನ್ ಅರೆಸ್ಟ್ ಆಗಿರುವ ವಿಚಾರ ಈಗ ಗೊತ್ತಾಗಿದೆ. ಆದ್ರೆ ಪೊಲೀಸರು ನನ್ನ ಗಂಡನನ್ನು ಬಂಧಿಸಿದ ಮಾಹಿತಿಯನ್ನು ಇದುವರೆಗೂ ನನಗೆ ಕೊಟ್ಟೇ ಇಲ್ಲ ಎಂದು ಆತನ ಪತ್ನಿ ಆರೋಪಿಸಿದ್ದಾರೆ.

Syed Sameeuddin wife pressmeet in Bangalore, DJ Halli violence case, DJ Halli violence case news, DJ Halli violence case update, ಸಯ್ಯದ್​ ಸಮೀವುದ್ದೀನ್ ಹೆಂಡ್ತಿ ಸುದ್ದಿಗೋಷ್ಟಿ, ಬೆಂಗಳೂರಿನಲ್ಲಿ ಸಯ್ಯದ್​ ಸಮೀವುದ್ದೀನ್ ಹೆಂಡ್ತಿ ಸುದ್ದಿಗೋಷ್ಟಿ, ಡಿಜೆ ಹಳ್ಳಿ ಗಲಭೆ ಪ್ರಕರಣ, ಡಿಜೆ ಹಳ್ಳಿ ಗಲಭೆ ಪ್ರಕರಣ ಸುದ್ದಿ,
ಬಂಧಿಸಿದ ಮಾಹಿತಿ ಪೊಲೀಸರು ಕೊಟ್ಟೆ ಇಲ್ಲ ಎಂದ ಪತ್ನಿ

ಬೆಂಗಳೂರು: ಡಿ.ಜಿ.ಹಳ್ಳಿ ಗಲಭೆ ಕೇಸ್ ಪ್ರಕರಣದಲ್ಲಿ ಬಂಧಿತ ಮತ್ತು ಉಗ್ರ ಸಂಘಟನೆಗಳೊಂದಿಗೆ ನಂಟಿನ ಶಂಕೆ ಹೊಂದಿರುವ ಆರೋಪದಡಿ ಸಯ್ಯದ್ ಸಮೀವುದ್ದೀನ್​​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಗಲಭೆಗೂ ಮುನ್ನ 40 ಮಂದಿ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆದರೆ ನನ್ನ ಗಂಡನನ್ನು ಬಂಧಿಸಿರುವ ಮಾಹಿತಿ ಪೊಲೀಸರು ನನಗೆ ಇದುವರೆಗೂ ಕೊಟ್ಟೇ ಇಲ್ಲ ಎಂದು ಸಯ್ಯದ್ ಸಮೀವುದ್ದೀನ್​ ಪತ್ನಿ ಆರೋಪಿಸಿದ್ದಾರೆ.

ಸಯ್ಯದ್​ ಪತ್ನಿ ಫಾತಿಮಾ ತಬಸೂಮ್ ಸುದ್ದಿಗೋಷ್ಠಿ ನಡೆಸಿ, 2006ರ ನವೆಂಬರ್ 21 ರಂದು ನಾರಿ ಪೌಂಡೇಷನ್ ಆರಂಭವಾಯಿತು. ಫೌಂಡೇಷನ್​ ಅಡಿ ಮಹಿಳೆ ಮತ್ತು ಮಕ್ಕಳ ಸಂಬಂಧಿತ ಸಾಮಾಜಿಕ ಚಟುವಟಿಕೆಗಳನ್ನು ಮಾಡ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸ ಕುರಿತಾದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ನಮ್ಮ ನಾರಿ ರಿಜಿಸ್ಟ್ರೇಷನ್ ಆಗಿಲ್ಲ. ಹಾಗಾಗಿ ವಿದೇಶಗಳಿಂದ ಯಾವುದೇ ದೇಣಿಗೆ ಬರ್ತಿಲ್ಲ. ರಾಜ್ಯ ಸರ್ಕಾರದಿಂದಲೂ ದೇಣಿಗೆ ತೆಗೆದುಕೊಂಡಿಲ್ಲ. ನನ್ನ ಕುಟುಂಬದ ಸದಸ್ಯರೇ ಈ ಎಲ್ಲ ಹೆಲ್ತ್ ಕ್ಯಾಂಪ್​ಗಳಿಗೆ ತಗಲುವ ವೆಚ್ಚ ಭರಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಗಂಡ ಸಮೀವುದ್ದೀನ್​ಗೂ ನಾರೀ ಪೌಂಡೇಷನ್​ಗೂ ಯಾವುದೇ ಸಂಬಂಧವಿಲ್ಲ. ನಾರಿ ಫೌಂಡೇಷನ್​ನಲ್ಲಿ ವಾಲೆಂಟಿಯರ್ ಆಗಿ ಕೆಲಸ ಮಾಡುತ್ತಿರಲಿಲ್ಲ. ನಾರಿ ಫೌಂಡೇಷನ್ ಹಣ ಮಾಡುವ ಉದ್ದೇಶದಿಂದ ಮಾಡಿದ್ದಲ್ಲ. ಸೇವಾ ಮನೋಭಾವದಿಂದ ಕೆಲಸ ಮಾಡ್ತಿದ್ದೇವೆ ಎಂದು ವಿವರಿಸಿದರು.

ಸಯ್ಯದ್ ಸಮಿಯುದ್ದೀನ್ ಮಿಸ್ ಆಗಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಸಿಸಿಬಿ ಕರೆದಾಗ ಹೋದವರು ವಾಪಸ್​ ಬಂದಿಲ್ಲ. ಎರಡು ವರ್ಷಗಳ ಹಿಂದೆ ಸಯ್ಯದ್ ಸಮೀವುದ್ದೀನ್ ನಾನು ಮದುವೆಯಾಗಿ ಹೆಚ್​ಬಿಆರ್ ಲೇಔಟ್​ನಲ್ಲಿ ವಾಸವಾಗಿದ್ದೆವು. ಫೋನ್ ಮಾಡಿದರೆ ಅವರ ಮೊಬೈಲ್ ನಂಬರ್ ಸ್ವಿಚ್ಡ್​​ ಆಫ್ ಆಗಿದೆ.‌ ಸಿಸಿಬಿಯವರು ಇಲ್ಲಿ ತನಕ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಹೈಕೋರ್ಟ್​​​ಗೂ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದೇವೆ ಎಂದರು.

ಸಮೀವುದ್ದಿನ್ ಸಿಸಿಬಿ ಪೊಲೀಸರು ಬಂಧನವಾಗುತ್ತಿದ್ದಂತೆ ಉಗ್ರ ಸಂಘಟನೆಗಳ ನಂಟು ಬೆಳಕಿಗೆ ಬಂದಿತ್ತು.‌ ಈತನ ಪತ್ನಿ ನಾರಿ ಫೌಂಡೇಷನ್ ನಡೆಸುತ್ತಿದ್ದು, ಉಗ್ರ ಸಂಘಟನೆಗಳಿಗೆ ವಿದೇಶಗಳಿಂದ ಲಕ್ಷಾಂತರ ರೂಪಾಯಿ ಫಂಡಿಂಗ್ ಬಂದಿದೆ. ಇದೇ ಹಣವನ್ನು ಅಪರಾಧ ಕೃತ್ಯಗಳಿಗೆ ವಿನಿಯೋಗ ಮಾಡಿದ್ದ ಎಂಬ ಆಪಾದನೆಯೂ ಕೇಳಿಬಂದಿತ್ತು‌. ಈ ಸಂಬಂಧ ಫಾತಿಮಾ ಸ್ಪಷ್ಟನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.