ETV Bharat / state

ದಿ.ಗುಂಡೂರಾವ್ ಜನ್ಮದಿನ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 'ಕೈ' ನಾಯಕರ ವಾಗ್ದಾಳಿ

ಗಾಂಧಿನಗರ ವಿಧಾನಸಭೆ ಕ್ಷೇತ್ರದ ಆಟದ ಮೈದಾನದಲ್ಲಿಂದು ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಜನ್ಮದಿನದ ಅಂಗವಾಗಿ ಕಾಂಗ್ರೆಸ್​​ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ದಿ. ಆರ್. ಗುಂಡೂರಾವ್ ಜನ್ಮದಿನ ಕಾರ್ಯಕ್ರಮ
ದಿ. ಆರ್. ಗುಂಡೂರಾವ್ ಜನ್ಮದಿನ ಕಾರ್ಯಕ್ರಮ
author img

By

Published : Sep 26, 2021, 3:26 PM IST

ಬೆಂಗಳೂರು: ಬಿಜೆಪಿಯವರು ಜನರ ಮನಸ್ಸುಗಳನ್ನು ಒಡೆಯುವುದರ ಜೊತೆಗೆ ದ್ವೇಷದ ಬೀಜ ಬಿತ್ತುವ ಕೆಲಸ ‌ಮಾಡುತ್ತಿದ್ದಾರೆ ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಕಿಮ್ಸ್ ಕಾಲೇಜು ಬಂದಿದ್ದರೆ ಅದಕ್ಕೆ ಗುಂಡೂರಾವ್ ಕಾರಣ. ಅವರು ಮುಖ್ಯಮಂತ್ರಿ ಆಗಿದ್ದಾಗ ತೆಗೆದುಕೊಂಡ ನಿರ್ಧಾರದಿಂದ ಕಿಮ್ಸ್ ಬಂತು. ಅವರು ಪ್ರತಿಪಕ್ಷಗಳನ್ನು ಯಾವ ರೀತಿ ಮ್ಯಾನೇಜ್ ಮಾಡ್ತಿದ್ರು ಅನ್ನೋದನ್ನು ನಾನು ಈ ಸಂದರ್ಭದಲ್ಲಿ ಹೇಳಲ್ಲ. ಅದೇ ದೊಡ್ಡ ಸುದ್ದಿ ಆಗುತ್ತೆ. ಯೂತ್ ಕಾಂಗ್ರೆಸ್ ಮತ್ತು ಎನ್ಎಸ್ಯುಐ ಗೆ ನಾಯಕರಿಗೆ ಹೆಚ್ಚು ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದರು.

ಇದೇ ವೇಳೆ ಕೂಲಿ ಕಾರ್ಮಿಕರಿಗೆ ದುಡ್ಡು ಬಂತಾ?. ಸರ್ಕಾರದಿಂದ ಪರಿಹಾರದಿಂದ ದುಡ್ಡು ಬಂತಾ ಎಂದು ಡಿಕೆಶಿ ನೆರೆದ ಜನರನ್ನು ಕೇಳಿದರು. ಇದಕ್ಕೆ ಇಲ್ಲ ಇಲ್ಲ ಎಂದು ಕಾರ್ಯಕರ್ತರು ಉತ್ತರಿಸಿದರು. ಆಗ ಡಿಕೆಶಿ, ನಮ್ಮ ಸರ್ಕಾರ ಬಂದಾಗ ನಿಮಗೆ ಸಹಾಯ ಮಾಡ್ತೀವಿ. ನಾವು, ಸಿದ್ದರಾಮಯ್ಯ ಸದನದಲ್ಲಿ ಬಾಯಿಬಡ್ಕೊಂಡ್ರೂ ಪ್ರಯೋಜನವಾಗಲಿಲ್ಲ. ನಾಲ್ಕು ಲಕ್ಷ ಜನ ಸತ್ತರೂ ಪರಿಹಾರ ಕೊಟ್ಟಿಲ್ಲ. ರಾಮುಲು ಕೊಟ್ಟಿದ್ದೇವೆ ಎಂದು ಹೇಳಿದ್ರು. ನಾನು ಎಲ್ಲಿ ಯಾರಿಗೆ ಎಂದು ಕೇಳಿದೆ. ಬಳಿಕ ಯಡಿಯೂರಪ್ಪ ಚಾಮರಾಜನಗರದವರಿಗೆ ಬಿಟ್ರೆ ಬೇರೆ ಯಾರಿಗೂ ಹಣ ತಲುಪಿಲ್ಲ ಎಂದು ಹೇಳಿದ್ರು. ನಾವು ಮುಂದೆ ಅಧಿಕಾರಕ್ಕೆ ಬಂದೇ ಬರ್ತೀವಿ, ಆಗ ನಿಮಗೆ ಪರಿಹಾರ ಕೊಡ್ತೀವಿ ಎಂದು ಭರವಸೆ ನೀಡಿದರು.

ದಿ.ಆರ್. ಗುಂಡೂರಾವ್ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್‌ನಿಂದ​​ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ

ಬಡವರಿಗೆ ಕೊರೊನಾ ಸಂದರ್ಭದಲ್ಲಿ ಒಂದು ರೂಪಾಯಿ ಸರ್ಕಾರ ಕೊಟ್ಟಿಲ್ಲ. ಬೀದಿ ವ್ಯಾಪರಿಗಳಿಗೆ ದುಡ್ಡು ಹಾಕ್ತೀವಿ ಅಂದ್ರು. ಯಾರಿಗಾದರೂ ದುಡ್ಡು ಬಂತಾ ಎಂದ ಡಿಕೆಶಿ ಮಾತಿಗೆ ಇಲ್ಲ ಎಂದು ಮಹಿಳೆಯರು ಧ್ವನಿಗೂಡಿಸಿದರು. ಬರಿ ಸುಳ್ಳು ಹೇಳುವುದೇ ಬಿಜೆಪಿ ಕೆಲಸ. ಬಡವರು ಅಂದ್ರೆ ಕಾಂಗ್ರೆಸ್ ಪಕ್ಷದವರು. ಹಾಗಾಗಿ ಅವರಿಗ್ಯಾಕೆ ಸಹಾಯ ಮಾಡಬೇಕು ಅಂತ ಭಾವನೆ. ಹೆದರಬೇಡಿ ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತೆ. ಅವಾಗ ಕೊರೊನಾದಿಂದ ಸತ್ತವರಿಗೆ, ಸಂತ್ರಸ್ತರಿಗೆ ಪರಿಹಾರ ಕೊಡಿಸ್ತೇವೆ ಎಂದು ಸಭೆಯಲ್ಲಿ ನೆರೆದಿದ್ದ ಜನರಿಗೆ ಡಿಕೆಶಿ ಭರವಸೆ ಕೊಟ್ಟರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಐದು ಕೆಜಿ ಅಕ್ಕಿ ಉಚಿತವಾಗಿ ನೀಡ್ತಾ ಇದ್ವಿ. ಐದು ಕೆಜಿಯಿಂದ ಏಳು‌‌ ಕೆಜಿ ಅಕ್ಕಿ ಕೊಟ್ವಿ. ಆದ್ರೆ ಕುಮಾರಸ್ವಾಮಿ ಸುಳ್ಳು ಹೇಳ್ತಾನೆ. ಏಳು ಕೆಜಿ ಹೆಚ್ಚಳ ಮಾಡಲು ದುಡ್ಡು ಇಟ್ಟಿರಲಿಲ್ಲ ಅಂತ. ಸಮ್ಮಿಶ್ರ ಸರ್ಕಾರದಲ್ಲಿ ದುಡ್ಡು ಇಟ್ಟಿರಲಿಲ್ಲ ಎಂದು. ನಾನು ಸಿಎಂ ಆಗಿದ್ದಾಗಲೇ ಏಳು ಕೆಜಿ ಅಕ್ಕಿ ಕೊಟ್ಟಿದ್ದೇವೆ. ಬಡವರು ಯಾರೂ ಹಸಿವಿನಿಂದ ಮಲಗಬಾರದು ಅಂತ. ಬಿಜೆಪಿಯದ್ದು ದರಿದ್ರ ಸರ್ಕಾರ. ಮಾನ ಮರ್ಯಾದೆ ಇಲ್ಲದ ಸರ್ಕಾರ. ನಿಮ್ಮ ಧಮ್ಮಯ್ಯ ಅಂತೀನಿ, ಈ ಸರ್ಕಾರ ಕಿತ್ತು ಹಾಕರಯ್ಯ ಅಂತ ಜನರಿಗೆ ಮನವಿ ಮಾಡಿದರು.

'ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡ್ತೀವಿ'

ನಾನು ಏಳು ಕೆಜಿ ಅಕ್ಕಿ ಕೊಡ್ತಾ ಇದ್ದೆ. ಬಿಜೆಪಿ ಸರ್ಕಾರ ಬಂದು ಐದು ಕೆಜಿ ಕೊಡ್ತಾ ಇದ್ದಾರೆ. ಇವರಪ್ಪನ ಮನೆ ಗಂಟೇನು ಹೋಗುತ್ತೆ ಏಳು ಕೆಜಿ ಅಕ್ಕಿ ಕೊಟ್ರೆ. ಯಡಿಯೂರಪ್ಪ ಕೂಡ ಹೊಟ್ಟೆ ಉರಕೊಂಡು ಬಿಟ್ಟ ಏಳು ಕೆಜಿ ಕೊಟ್ಟಿದ್ದಕ್ಕೆ. ನಮ್ಮ ಸರ್ಕಾರದ ಮತ್ತೆ ಬಂದ್ರೆ ಹತ್ತು ಕೆಜಿ ಅಕ್ಕಿ ಕೊಡ್ತೇನಿ. ಬಿಜೆಪಿ ಅಂದ್ರೆ ಡೊಂಗಿಗಳು, ಬರಿ ಸುಳ್ಳು ಹೇಳುವುದೆ ಕೆಲಸ. ಸಭ್ ಕಾ ಸಾಥ್ ಸಭ್ ಕಾ ವಿಕಾಸ್ ಅಂತಾರೆ. ಒಬ್ಬನೇ ಒಬ್ಬ ರಾಜ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಮಂತ್ರಿ ಇಲ್ಲ. ಮುಂಬಾಗಿಲ ಮೂಲಕ ಅಧಿಕಾರಕ್ಕೆ ಬಿಜೆಪಿ ಬಂದೆ ಇಲ್ಲ. ಹಿಂಬಾಗಿಲ ಮೂಲಕ ಆಪರೇಶನ್ ಕಮಲ‌ ಮಾಡಿ ಬಂದ್ರು. ಈಗ ಆಪರೇಶನ್ ಮಾಡಿದ ಯಡಿಯೂರಪ್ಪ ತೆಗೆದು ಬೊಮ್ಮಾಯಿ ತಂದಿದ್ದಾರೆ. ಬೊಮ್ಮಾಯಿ ಆರ್‌ಎಸ್‌ಎಸ್, ಯಡಿಯೂರಪ್ಪ ಹೇಳಿದಂತೆ ಕೇಳ್ತಾರೆ. ಇವರಿಂದ ಯಾವ ಅಭಯ ನಿರೀಕ್ಷೆ ‌ಮಾಡೋಕೆ‌ ಸಾಧ್ಯ? ಎಂದರು.

ಆರ್​​ಎಸ್​​​ಎಸ್‌ನವರು ಇದೀಗ ಚಡ್ಡಿ ಬಿಟ್ಟು ಪ್ಯಾಂಟ್ ಹಾಕಿದ್ದಾರೆ. ಇಲ್ಲಿ ಯಾರೂ ದೇಶ ಭಕ್ತರು ಇಲ್ಲ. ಬಿಜೆಪಿ, ಆರ್​​ಎಸ್​​​ಎಸ್‌ನವ್ರು ದೇಶಕ್ಕಾಗಿ ಒಬ್ಬರೂ ಸತ್ತಿಲ್ಲ. ಸುಮ್ಮನೆ ಭಾರತ್ ಮಾತಾಕೀ ಜೈ ಅಂತ ಹೇಳ್ತಾರೆ. ಬಿಜೆಪಿ ತಮ್ಮ ಕಚೇರಿಯಲ್ಲಿ ಆಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೊ ಸಹ ಹಾಕ್ತಿರಲಿಲ್ಲ. ಈಗ ಮಹಾತ್ಮ ಗಾಂಧಿ, ಅಂಬೇಡ್ಕರ್ ಫೋಟೋ ಹಾಕ್ತಾರೆ. ಬಿಜೆಪಿ ಅವ್ರು ಬಡವರ ವಿರೋಧಿಗಳು. ತಾಲಿಬಾನ್​ಗಳೇ ಇಂದು ಬಿಜೆಪಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸಿದ್ದರಾಮಯ್ಯ ನಿದ್ರೆ

ಮುಖ್ಯಮಂತ್ರಿಯಾಗಿದ್ದ ಸಂದರ್ಭ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ನಿದ್ರೆಗೆ ಜಾರಿದ್ದ ಸಿದ್ದರಾಮಯ್ಯ ಇತ್ತೀಚೆಗೆ ಅಂತಹ ಸನ್ನಿವೇಶದಲ್ಲಿ ಗೋಚರಿಸಲಿಲ್ಲ. ಆದರೆ ಇದು ಗುಂಡೂರಾವ್ ಕಾರ್ಯಕ್ರಮದಲ್ಲಿ ನಾಯಕರ ಭಾಷಣದ ವೇಳೆ ನಿದ್ದೆಗೆ ಜಾರಿದ್ದು ಕಂಡು ಬಂತು. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ನಿಯಮಾವಳಿ ಉಲ್ಲಂಘನೆ ಗೋಚರಿಸಿತು. ಕೊರೊನಾ ನಿಯಮ ಗಾಳಿಗೆ ತೂರಿ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಅಂತರ ಮರೆತ ಕಾಂಗ್ರೆಸ್ ಕಾರ್ಯಕರ್ತರು ಗುಂಪು ಗುಂಪಾಗಿ ಕಂಡು ಬಂದರು.

ಇದೇ ವೇಳೆ ನಾಯಕರು ಗುಂಡೂರಾವ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಆರ್. ಗುಂಡೂರಾವ್ ಪ್ರತಿಷ್ಠಾನ ಆಯೋಜಿಸಿದ್ದ ಸಹಾಯಹಸ್ತ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್, ಟಬು ಗುಂಡೂರಾವ್, ಮಾಜಿ ಮೇಯರ್ ಪದ್ಮಾವತಿ ಮತ್ತಿತರರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.