ETV Bharat / state

ಹೊಸಕೆರೆಹಳ್ಳಿಯಲ್ಲಿ ಅಕ್ಕಿ ವಿತರಣೆ: ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ - people Forgotten social distance

ಬೆಂಗಳೂರಿನ ಹೊಸಕೆರೆಹಳ್ಳಿ 161ನೇ ವಾರ್ಡ್ ಸದಸ್ಯೆ ರಾಜೇಶ್ವರಿ ಚೋಳರಾಜ್ ಇಂದು ಅಕ್ಕಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಅಕ್ಕಿ ಪಡೆಯಲು ಬಂದ ಜನರು ಸಾಮಾಜಿಕ ಅಂತರವನ್ನು ಮರೆತು ಅಕ್ಕಿ ಪಡೆಯಲು ಮುಗಿಬಿದ್ದರು.

ಹೊಸಕೆರೆಹಳ್ಳಿಯಲ್ಲಿ 5 ಕೆಜಿ ಅಕ್ಕಿ ವಿತರಣೆ
ಹೊಸಕೆರೆಹಳ್ಳಿಯಲ್ಲಿ 5 ಕೆಜಿ ಅಕ್ಕಿ ವಿತರಣೆ
author img

By

Published : Apr 26, 2020, 3:18 PM IST

Updated : Apr 26, 2020, 3:36 PM IST

ಬೆಂಗಳೂರು: ನಗರದ ಹೊಸಕೆರೆಹಳ್ಳಿ ಬಸ್ ನಿಲ್ದಾಣ ಸಮೀಪದ ಜನವಸತಿ ಪ್ರದೇಶದ ಕಲ್ಯಾಣ ಮಂಟಪದಲ್ಲಿ, ಭಾನುವಾರ ಸಾವಿರಾರು ಜನರಿಗೆ ಟೋಕನ್ ನೀಡಿ ಅಕ್ಕಿ ವಿತರಿಸಲಾಯಿತು.

ಹೊಸಕೆರೆಹಳ್ಳಿಯಲ್ಲಿ 5 ಕೆಜಿ ಅಕ್ಕಿ ವಿತರಣೆ

ಅಕ್ಕಿ ವಿತರಣೆ ವೇಳೆ ಸಾವಿರಾರು ಜನರು ಸಾಮಾಜಿಕ ಅಂತರ ಮರೆತು ಮುಗಿಬಿದ್ದ ದೃಶ್ಯ ಕಂಡುಬಂತು. ಬೆಳಗ್ಗೆ 9 ಗಂಟೆಗೆ ಹಮ್ಮಿಕೊಂಡ ವಿತರಣೆ ಕಾರ್ಯಕ್ರಮ ಮಧ್ಯಾಹ್ನ 11.30ರವರೆಗೂ ನಡೆಯಿತು. 4-5 ಸಾವಿರ ಮಂದಿ ತಲಾ ಐದು ಕೆಜಿ ಅಕ್ಕಿಯ ಚೀಲವನ್ನು ಪಡೆದು ತೆರಳಿದರು. ಟೋಕನ್ ಹಾಗೂ ಅಕ್ಕಿ ಸಿಗದ ಕೆಲವರು ಮಧ್ಯಾಹ್ನ 12.30ರವರೆಗೂ ಸ್ಥಳದಲ್ಲೇ ಗಲಾಟೆ ನಡೆಸುತ್ತಾ, ಅಕ್ಕಿಗಾಗಿ ಒತ್ತಾಯಿಸಿದರು.

ಹೊಸಕೆರೆಹಳ್ಳಿಯಲ್ಲಿ 5 ಕೆಜಿ ಅಕ್ಕಿ ವಿತರಣೆ
ಹೊಸಕೆರೆಹಳ್ಳಿಯಲ್ಲಿ 5 ಕೆಜಿ ಅಕ್ಕಿ ವಿತರಣೆ

ಹೊಸಕೆರೆಹಳ್ಳಿ 161ನೇ ವಾರ್ಡ್ ಸದಸ್ಯೆ ರಾಜೇಶ್ವರಿ ಚೋಳರಾಜ್ ಇಂದು ಹಮ್ಮಿಕೊಂಡಿದ್ದ ಅಕ್ಕಿ ವಿತರಣೆಯನ್ನು ಸಾಕಷ್ಟು ವ್ಯವಸ್ಥಿತ, ಸುರಕ್ಷಿತ ಅಂತರದೊಂದಿಗೆ ನಡೆಸಬೇಕೆಂಬ ಪೊಲೀಸರ ಹಾಗೂ ಬಿಬಿಎಂಪಿ ಸಿಬ್ಬಂದಿ ಮತ್ತು ಸಿವಿಲ್ ಡಿಫೆನ್ಸ್ ಸದಸ್ಯರ ಪ್ರಯತ್ನ ನಿರೀಕ್ಷಿತ ಫಲ ಕೊಡಲಿಲ್ಲ. ಜನರು ಸರದಿ ಸಾಲಲ್ಲಿ ನಿಂತು ಅಕ್ಕಿ ಪಡೆಯುವ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಸಾಕಷ್ಟು ಮಂದಿ ಮಾಸ್ಕ್ ಧರಿಸದೇ ಬಂದಿದ್ದು ಕಂಡುಬಂತು.

ಹೊಸಕೆರೆಹಳ್ಳಿಯಲ್ಲಿ 5 ಕೆಜಿ ಅಕ್ಕಿ ವಿತರಣೆ
ಹೊಸಕೆರೆಹಳ್ಳಿಯಲ್ಲಿ 5 ಕೆಜಿ ಅಕ್ಕಿ ವಿತರಣೆ

ಆಯೋಜಕರು ಮಾಸ್ಕ್ ಧರಿಸದವರಿಗೆ, ಟೋಕನ್ ಇಲ್ಲದವರಿಗೆ ಒಳಗೆ ಪ್ರವೇಶಿಸಲು ಅವಕಾಶ ಕೊಡಲಿಲ್ಲ. ಆದರೂ ಕೆಲವರು ಕರ್ಚಿಫ್, ಬಟ್ಟೆ ಕಟ್ಟಿಕೊಂಡು ನಿಂತಿದ್ದರು. ಟೋಕನ್ ಸಿಗದವರು ಸ್ಥಳಕ್ಕಾಗಮಿಸಿ ಟೋಕನ್​​ಗಾಗಿ ಆಯೋಜಕರಿಗೆ ದುಂಬಾಲು ಬಿದ್ದರು. ಟೋಕನ್ ಖಾಲಿ ಆಗಿದೆ ಎಂದಿದ್ದಕ್ಕೆ, ಕೆಲಕಾಲ ಗಲಾಟೆ ಕೂಡ ನಡೆಸಿದರು.

Last Updated : Apr 26, 2020, 3:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.