ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸತ್ಯನಾರಾಯಣ ಮತ್ತು ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ನಿಂದ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಿಜೆಪಿ ನಾಯಕರಿಗೆ ಮೇಯರ್ ಚುನಾವಣೆ ನಡೆಯಬಾರ್ದು ಅಂತ ಇದೆ. ಅದಕ್ಕಾಗಿ ಕೇವಲ ಇಬ್ಬರು ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಯಡಿಯೂರಪ್ಪ ಆರ್ಎಸ್ಎಸ್ ಸಂಘ ಪರಿವಾರದವರ ಕೈಗೊಂಬೆಯಾಗಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಸರ್ಕಾರ ರಚನೆಯೇ ತಪ್ಪು ದಾರಿಯಲ್ಲಿ ನಡೆಯುತ್ತಿದೆ. ಒಂದು ಕಡೆ ಅತೃಪ್ತರ ಸ್ಥಿತಿ ಗೊಂದಲಮಯವಾಗಿದೆ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾವು ಯಾರಿಗೂ ಬೆಂಬಲ ನೀಡೋದಿಲ್ಲ. ಅವರು ಕೊಟ್ರೆ ತಗೋತೀವಿ. ಬಿಜೆಪಿಯಲ್ಲಿ ಗೊಂದಲ ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹಾಗಾಗಿ ಇನ್ನೂ ಅಭ್ಯರ್ಥಿ ಆಯ್ಕೆಯಾಗಿಲ್ಲ. ಈ ವಿಷಯ ಸಿಎಂಗೆ ಗೊತ್ತಿರುವುದರಿಂದ ಚುನಾವಣೆ ಮುಂದೂಡಲು ಆದೇಶಿಸಿದ್ದರು. ಆದರೆ, ಹರ್ಷ ಗುಪ್ತಾ ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ.
ಬೆಂಗಳೂರಿನ ಐದು ಶಾಸಕರು ಅನರ್ಹರಾಗಿರುವುದರಿಂದ ಅವರು ಬೆಂಬಲಿತ ಕಾರ್ಪೋರೇಟರ್ಗಳು ಯಾರಿಗೆ ಮತ ಚಲಾಯಿಸುತ್ತಾರೋ ಕಾದು ನೋಡಬೇಕಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.