ಬೆಂಗಳೂರು: ರೈತರ ಹೋರಾಟಕ್ಕೆ ದೇಶದ ಜನರು ಬೆಂಬಲಿಸಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಕರೆ ನೀಡಿದ್ದಾರೆ.
ಫಾಲ್ಕನ್ ಶಿಕ್ಷಣ ಸಂಸ್ಥೆ ವತಿಯಿಂದ ದೊರೆಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಹೋರಾಟ ನೋಡುತ್ತಿದ್ದರೆ ಬ್ರಿಟಿಷರ ಕಾಲದಲ್ಲಿ ನಡೆದ ದಬ್ಬಾಳಿಕೆ ನೆನಪಾಗುತ್ತಿದೆ. ರೈತರ ವಿರುದ್ಧದ ಮೂರು ಕೃಷಿ ಕಾನೂನನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಕಾನೂನಿಂದ ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ಶ್ರೀಮಂತರಾಗುತ್ತಾರೆ. ಬಡತನ ಮತ್ತಷ್ಟು ಹೆಚ್ಚಲಿದೆ. ಹೀಗಾಗಿ, ಎಲ್ಲರೂ ಎಚ್ಚೆತ್ತುಕೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದಿದ್ದಾರೆ.