ETV Bharat / state

ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ಟ್ರೀ ಪಾರ್ಕ್, ಮ್ಯೂಸಿಯಂ ನಿರ್ಮಿಸಿ: ಕೆ.ಎಸ್.ಲಿಂಗೇಶ್ - JDS member Lingesh

ಸಾಲುಮರದ ತಿಮ್ಮಕ್ಕನವರು ನಮ್ಮ ಊರಿನವರು. ನನ್ನ ಕ್ಷೇತ್ರ ಬೆಳ್ಳೂರಿನವರು. ಅವರಿಂದ ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಹೆಸರು ಬಂದಿದೆ. ಅವರನ್ನು ಸಾವಿರಾರು ಜನ ನೋಡಲು ಬರುತ್ತಾರೆ. ಅವರ ಹೆಸರಿನಲ್ಲಿ ಟ್ರೀ ಪಾರ್ಕ್ ಮಾಡಿಕೊಡಬೇಕು. ಅಲ್ಲದೇ ಒಂದು ದೇವಿವನವನ್ನು ನಿರ್ಮಾಣ ಮಾಡಬೇಕು ಎಂದು ಜೆಡಿಎಸ್ ಸದಸ್ಯ ಲಿಂಗೇಶ್ ಕೆ.ಎಸ್. ಸರ್ಕಾರವನ್ನು ಆಗ್ರಹಿಸಿದ್ದಾರೆ.

Saalu maradaThimmakka
ಸಾಲುಮರದ ತಿಮ್ಮಕ್ಕ
author img

By

Published : Mar 18, 2021, 7:23 PM IST

ಬೆಂಗಳೂರು: ಹಾಸನ ಜಿಲ್ಲೆ ಬೇಲೂರಿನಲ್ಲಿ ಸಾಲುಮರದ ತಿಮ್ಮಕ್ಕನವರಿಗೆ ಬಂದಿರುವ ಪ್ರಶಸ್ತಿಗಳನ್ನಿಡಲು ಮ್ಯೂಸಿಯಂ ಹಾಗೂ ಅವರ ಹೆಸರಿನಲ್ಲಿ ಟ್ರೀ ಪಾರ್ಕ್ ಮಾಡಿಕೊಡಬೇಕೆಂದು ಜೆಡಿಎಸ್ ಸದಸ್ಯ ಲಿಂಗೇಶ್ ಕೆ.ಎಸ್. ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಪ್ರಶ್ನೆ ಕೇಳಿ, ಸಾಲುಮರದ ತಿಮ್ಮಕ್ಕನವರು ನಮ್ಮ ಊರಿನವರು. ನನ್ನ ಕ್ಷೇತ್ರ ಬೇಲೂರಿನವರು. ಅವರಿಂದ ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಹೆಸರು ಬಂದಿದೆ. ಅವರನ್ನು ಸಾವಿರಾರು ಜನ ನೋಡಲು ಬರುತ್ತಾರೆ. ಅಮೆರಿಕ ಸೇರಿ ದೇಶದೆಲ್ಲೆಡೆ ಅವರ ಪರಿಸರ ಪ್ರೇಮಿಗಳಿದ್ದಾರೆ. ಅವರ ಹೆಸರಿನಲ್ಲಿ ಟ್ರೀ ಪಾರ್ಕ್ ಮಾಡಿಕೊಡಬೇಕು. ಅಲ್ಲದೇ ಒಂದು ದೇವಿವನವನ್ನು ನಿರ್ಮಾಣ ಮಾಡಬೇಕು. ಅವರಿಗೆ ಸಾವಿರಾರು ಪ್ರಶಸ್ತಿಗಳು ಬಂದಿವೆ. ಅವುಗಳನ್ನು ಇಟ್ಟುಕೊಳ್ಳಲು ಜಾಗವಿಲ್ಲ. ಸಾಲುಮರದ ತಿಮ್ಮಕ್ಕನವರೇ ಗೌರವಾಧ್ಯಕ್ಷರಾಗಿರುವ ಫೌಂಡೇಶನ್ ಇದೆ. ಅವರ ದತ್ತು ಪುತ್ರ ಉಮೇಶ್ ಅದನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಒಂದು ಮ್ಯೂಸಿಯಂ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದನ್ನೂ ಓದಿ:ವಿವಿ ಕುಲಪತಿಗಳ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿದೆಯೇ?

ರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ದೇವಿವನ ಮಾಡಿಕೊಡಿ. ಹಳೆಬೀಡು ಪಕ್ಕ ಕಲ್ಲಳ್ಳಿಯಲ್ಲೂ ಜಾಗವಿದೆ. ಕೂಡಲೇ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಪರವಾಗಿ ಉತ್ತರಿಸಿದ ಜಗದೀಶ್ ಶೆಟ್ಟರ್, ಬೇಲೂರಿನಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡುವ ಸಂಬಂಧ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಿದ ನಂತರ ನಿರ್ಮಾಣ ಮಾಡಲಾಗುವುದು ಎಂದರು.

ಬೇಲೂರು ಕ್ಷೇತ್ರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಟ್ರೀ ಪಾರ್ಕ್ ಮತ್ತು ದೈವಿವನ ನಿರ್ಮಿಸಲು ಅಕಾರಿಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. ಟ್ರೀ ಪಾರ್ಕ್ ಮತ್ತು ದೈವಿವನ ನಿರ್ಮಾಣ ಮಾಡಲು 2020, ಅಕ್ಟೋಬರ್ 30 ರ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಹಣಕಾಸಿನ ಲಭ್ಯತೆ ಆಧಾರದ ಮೇಲೆ ಯೋಜನೆ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಸಾಲುಮರದ ತಿಮ್ಮಕ್ಕ ಅವರಿಗೆ ಆರ್ಥಿಕ ನೆರವು ಮತ್ತು ಅವರು ಹುಟ್ಟಿ ಬೆಳೆದ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಟ್ರೀ ಪಾರ್ಕ್ (ವೃಕ್ಷೋದ್ಯಾನ) ನಿರ್ಮಿಸಲು ಪ್ರಸ್ತಾವನೆ:

ಬೆಳಗಾವಿ ಜಿಲ್ಲೆ ಕುಡಚಿ ವಿಧಾನಸಭೆ ಕ್ಷೇತ್ರದಲ್ಲಿ ಟ್ರೀಪಾರ್ಕ್ (ವೃಕ್ಷೋದ್ಯಾನ) ನಿರ್ಮಿಸಲು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಬಿಜೆಪಿ ಸದಸ್ಯ ರಾಜೀವ್ ಟಿ. ಅವರ ಪ್ರಶ್ನೆಗೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಪರವಾಗಿ ಉತ್ತರಿಸಿದ ಜಗದೀಶ್ ಶೆಟ್ಟರ್, ಕುಡಚಿಯಲ್ಲಿ ಟ್ರೀಪಾರ್ಕ್ ನಿರ್ಮಿಸಲು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರಿಂದ ಅನುಮೋದನೆ ಸಿಕ್ಕಿದ ತಕ್ಷಣ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.ಕುಡಚಿಯಲ್ಲಿ ವೃಕ್ಷೋದ್ಯೋನ ನಿರ್ಮಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಆದಷ್ಟು ಬೇಗ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.