ETV Bharat / state

ಡಿಸಿಎಂ- ಮೇಯರ್ ವಿರುದ್ದ ಗರಂ ಆದ ಉಪಮೇಯರ್ ಭದ್ರೇಗೌಡ - undefined

ನಾಗಪುರ ವಾರ್ಡ್​ನ ಕಾರ್ಯಕ್ರಮಕ್ಕೆ ಡಿಸಿಎಂ ಹಾಗೂ ಮೇಯರ್ ಗೈರಾಗಿದ್ದಕ್ಕೆ ಉಪಮೇಯರ್ ಭದ್ರೇಗೌಡ ಗರಂ ಆಗಿದ್ದು, ಸಮ್ಮಿಶ್ರ ಆಡಳಿತದಲ್ಲಿ ಜೊತೆ ಜೊತೆಗೆ ಕೆಲಸ ಮಾಡುವ ಪರಿಜ್ಞಾನ ಇದೆಯೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ.

ಉಪಮೇಯರ್ ಭದ್ರೇಗೌಡ
author img

By

Published : Jun 21, 2019, 7:33 PM IST

ಬೆಂಗಳೂರು ಬೆಂಗಳೂರಿನ ನಾಗಪುರ ವಾರ್ಡ್, ಉಮೇಯರ್ ಭದ್ರೇಗೌಡರ ವಾರ್ಡ್ ಆಗಿದ್ದು, ಕಲ್ಯಾಣ ಕಾರ್ಯಕ್ರಮಗಳು, ಒಂಟಿ ಮನೆಗಳ ಉದ್ಘಾಟನೆಯನ್ನು ಇಟ್ಟುಕೊಳ್ಳಲಾಗಿತ್ತು. ಆದ್ರೆ ಸಮಯ ನಿಗದಿ ಮಾಡಿದ ಬಳಿಕ ಏಕಾಏಕಿ ಡಿಸಿಎಂ ಪರಮೇಶ್ವರ್ ಹಾಗೂ ಮೇಯರ್ ಗಂಗಾಂಬಿಕೆ ಕಾರ್ಯಕ್ರಮಕ್ಕೆ ಬರುವುದನ್ನು ರದ್ದು ಮಾಡಿ, ಗೈರಾಗಿದ್ದಕ್ಕೆ ಜೆಡಿಎಸ್​ನ ಭದ್ರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ನಾಗಪುರ ವಾರ್ಡ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ

ಕಾಂಗ್ರೆಸ್ ನಾಯಕರ ಗೈರಿನಿಂದಾಗಿ ಉಪಮೇಯರ್ ಅಸಮಾಧಾನ ಗೊಂಡಿದ್ದು, ಆತ್ಮೀಯವಾಗಿ ಆಮಂತ್ರಣ ನೀಡಿದ್ದೇನೆ. ಬಂದು ಸರಿತಪ್ಪುಗಳನ್ನು ತಿಳಿಸಿ ಉಪ ಮಹಾಪೌರನಾದ ನನಗೆ ಗೌರವ ನೀಡಬೇಕಿತ್ತು. ಆದರೆ ಸೌಜನ್ಯಕ್ಕಾದರೂ ಕರೆ ಮಾಡಿಯೂ ತಿಳಿಸಿಲ್ಲ ಎಂದು ಗರಂ ಆಗಿದ್ದಾರೆ.

ಕಾರ್ಯಕ್ರಮಕ್ಕೆ ಸಾಕಷ್ಟು ಜನ ಸೇರಿಸಿದ್ದೆವು. ಜನಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮೇಯರ್, ಆಡಳಿತ ಪಕ್ಷದ ನಾಯಕರು, ಡಿಸಿಎಂ ಮಾಡ್ಬೇಕಿತ್ತು. ಆದ್ರೆ ಕಾರ್ಯಕ್ರಮಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಈ ರೀತಿ ಮಾಡಿದ್ದಾರೆ ಎಂದು ಜೆಡಿಎಸ್ ಸದಸ್ಯರು, ಉಪಮಹಾಪೌರರು ಆಗಿರುವ ಭದ್ರೇಗೌಡ ತೀವ್ರ ಆಕ್ಷೇಪ ಹೊರಹಾಕಿದ್ದಾರೆ.

ಹೈಟೆನ್ಶನ್ ವಯರ್ ಕೆಳಗಡೆ ಮನೆ ನಿರ್ಮಾಣ :

ಬಡವರಿಗೆ , ನಿರ್ಮಾಣ ಮಾಡಿಕೊಟ್ಟಿರುವ ಒಂಟಿಮನೆಗಳು ಅಪಾಯಕಾರಿ ಹೈಟೆನ್ಷನ್ ವಯರ್ ಕೆಳಗಡೆ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ನಗರದಲ್ಲಿ ನಡೆದ ಎರಡು ಮೂರು ಪ್ರಕರಣದಲ್ಲಿ ವಯರ್ ತಗುಲಿ ಸಾವನ್ನಪ್ಪಿದ್ದರು. ಈ ಬಗ್ಗೆ ಉಪಮೇಯರ್ ರನ್ನ ಪ್ರಶ್ನಿಸಿದ್ರೆ ಇದು ಏಕಾಏಕಿ ನಿರ್ಮಾಣ ಮಾಡಿದ ಮನೆ ಅಲ್ಲ. ಕಳೆದ ಮೂವತ್ತು ವರ್ಷದಿಂದಲೂ ಇದೇ ಜಾಗದಲ್ಲಿ ಬಡವರು ವಾಸಿಸುತ್ತಿದ್ದರು. ಹೀಗಾಗಿ ಇದೇ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆಯನ್ನೂ ನಡೆಸಿದ್ದಾರೆ. ಹದಿನಾರು ಅಡಿ ಅಂತರ ಇರಬೇಕೆಂದಿದ್ದೆ, ಆದ್ರೆ ಇಲ್ಲಿ ಇಪ್ಪತ್ನಾಲ್ಕು ಅಡಿ ಅಂತರ ಇದೆ ಎಂದರು.

ಇದೇ ವೇಳೆ 41 ಮನೆಗಳ ಕೀಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಯ್ಯ, ಕಾರ್ಪೋರೇಟರ್ ಎಂ. ಶಿವರಾಜು ಭಾಗವಹಿಸಿದ್ದರು.

ಗೈರಾಗಿದ್ದಕ್ಕೆ ಮೇಯರ್​ ಸ್ಪಷ್ಟನೆ:

ಹೈಟೆನ್ಸನ್​​ ವಯರ್​ ಕೆಳಗಡೆ ಬಿಲ್ಡಿಂಗ್​ ಕಟ್ಟಲು ಅನುಮತಿ ನೀಡಬಾರದು ಎಂಬ ನಿಯಮವಿದೆ. ಆದಾಗ್ಯೂ ಹೈಟೆನ್ಸನ್​​ ವಯರ್​ ಕೆಳಗಡೆಯೇ ಬಿಲ್ಡಿಂಗ್​ ಕಟ್ಟಲಾಗಿದೆ. ಹೀಗಾಗಿ ಅದರ ಉದ್ಘಾಟನೆಗೆ ನಾವೇ ಹೋದರೆ ಮುಂದೇನಾದರು ಅನಾಹುತ ಆದಲ್ಲಿ ನಮ್ಮ ಮೇಲೆ ಆರೋಪ ಬರುತ್ತದೆ. ಹೀಗಾಗಿಯೇ ಈ ಕಟ್ಟಡದ ಉದ್ಘಾಟನೆಗೆ ಹೋಗಿಲ್ಲ ಎಂದು ಮೇಯರ್​ ಸ್ಪಷ್ಟನೆ ನೀಡಿದ್ದಾರೆ.

Intro:ಡಿಸಿಎಂ- ಮೇಯರ್ ಗೈರಾಗಿದ್ದಕ್ಕೆ ಗರಂ ಆದ ಉಪಮೇಯರ್- ಸಮ್ಮಿಶ್ರ ಆಡಳಿತದಲ್ಲಿ ಜೊತೆಜೊತೆಗೆ ಕೆಲಸ ಮಾಡುವ ಪರಿಜ್ಞಾನ ಇದೆಯೋ-ಇಲ್ಲವೋ ಎಂದ ಭದ್ರೇಗೌಡ

ಬೆಂಗಳೂರು- ಬೆಂಗಳೂರಿನ ನಾಗಪುರ ವಾರ್ಡ್, ಉಮೇಯರ್ ಭದ್ರೇಗೌಡರ ವಾರ್ಡ್ ಆಗಿದ್ದು, ಕಲ್ಯಾಣ ಕಾರ್ಯಕ್ರಮಗಳು, ಒಂಟಿ ಮನೆಗಳ ಉದ್ಘಾಟನೆಯನ್ನು ಇಟ್ಟುಕೊಳ್ಳಲಾಗಿತ್ತು.ಆದ್ರೆ ಸಮಯ ನಿಗದಿ ಮಾಡಿದ ಬಳಿಕ ಏಕಾಏಕಿ ಡಿಸಿಎಂ ಪರಮೇಶ್ವರ್ ಹಾಗೂ ಮೇಯರ್ ಗಂಗಾಂಬಿಕೆ ಕಾರ್ಯಕ್ರಮಕ್ಕೆ ಬರುವುದನ್ನು ರದ್ದು ಮಾಡಿ, ಗೈರಾಗಿದ್ದಕ್ಕೆ ಜೆಡಿಎಸ್ ನ ಭದ್ರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಗೈರಿನಿಂದಾಗಿ ಉಪಮೇಯರ್ ಅಸಮಾಧಾನ ಸ್ಪೋಟಗೊಂಡಿದೆ.

ಆತ್ಮೀಯವಾಗಿ ಆಮಂತ್ರಣ ನೀಡಿದ್ದೇನೆ. ಬಂದು ಸರಿತಪ್ಪುಗಳನ್ನು ತಿಳಿಸಿ ಉಪಮಹಾಪೌರನಾದ ನನಗೆ ಗೌರವ ನೀಡಬೇಕಿತ್ತು. ಆದರೆ ಸೌಜನ್ಯಕ್ಕಾದರೂ ಕರೆ ಮಾಡಿಯೂ ತಿಳಿಸಿಲ್ಲ. ಗೈರಾಗಿದ್ದಾರೆ. ಕಾರ್ಯಕ್ರಮಕ್ಕೆ ಸಾಕಷ್ಟು ಜನ ಸೇರಿಸಿದ್ದೆವು. ಜನಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮೇಯರ್, ಆಡಳಿತ ಪಕ್ಷದ ನಾಯಕರು, ಡಿಸಿಎಂ ಮಾಡ್ಬೇಕಿತ್ತು. ಆದ್ರೆ ಕಾರ್ಯಕ್ರಮಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಈ ರೀತಿಯಾಗಿದೆ ಎಂದು ಜೆಡಿಎಸ್ ಸದಸ್ಯರು, ಉಪಮಹಾಪೌರರು ಆಗಿರುವ ಭದ್ರೇಗೌಡ ತೀವ್ರ ಆಕ್ಷೇಪ ಹೊರಹಾಕಿದ್ರು.
ಮೇಯರ್, ಡಿಸಿಎಂ ಇದಕ್ಕೆ ಸ್ಪಷ್ಟನೆ ನೀಡಬೇಕು. ಇದನ್ನು ಕೌನ್ಸಿಲ್ ನಲ್ಲಿ ಪ್ರಶ್ನಿಸುತ್ತೇನೆ. ಚೊಕ್ಕಟವಾದ ಕಾರ್ಯಕ್ರಮಕ್ಕೆ ಕಪ್ಪುಚುಕ್ಕೆ ತರಲು ಕಾಣದ ಕೈ ಕೆಲಸ ಮಾಡಿದೆ ಎಂದರು.

ಹೈಟೆನ್ಶನ್ ವಯರ್ ಕೆಳಗಡೆ ಮನೆ ನಿರ್ಮಾಣ
ಬಡವರಿಗೆ , ನಿರ್ಮಾಣ ಮಾಡಿಕೊಟ್ಟಿರುವ ಒಂಟಿಮನೆಗಳು ಅಪಾಯಕಾರಿ ಹೈಟೆನ್ಷನ್ ವಯರ್ ಕೆಳಗಡೆ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ನಗರದಲ್ಲಿ ನಡೆದ ಎರಡು ಮೂರು ಪ್ರಕರಣದಲ್ಲಿ ವಯರ್ ತಗುಲಿ ಸಾವನ್ನಪ್ಪಿದ್ದರು. ಈ ಬಗ್ಗೆ ಉಪಮೇಯರ್ ರನ್ನ ಪ್ರಶ್ನಿಸಿದ್ರೆ ಇದು ಏಕಾಏಕಿ ನಿರ್ಮಾಣ ಮಾಡಿದ ಮನೆ ಅಲ್ಲ. ಕಳೆದ ಮೂವತ್ತು ವರ್ಷದಿಂದಲೂ ಇದೇ ಜಾಗದಲ್ಲಿ ಬಡವರು ವಾಸಿಸುತ್ತಿದ್ದರು. ಹೀಗಾಗಿ ಇದೇ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆಯನ್ನೂ ನಡೆಸಿದ್ದಾರೆ. ಹದಿನಾರು ಅಡಿ ಅಂತರ ಇರಬೇಕೆಂದಿದೆ. ಆದ್ರೆ ಇಲ್ಲಿ ಇಪ್ಪತ್ನಾಲ್ಕು ಅಡಿ ಅಂತರ ಇದೆ ಎಂದರು.
ಇದೇ ವೇಳೆ 41 ಮನೆಗಳ ಕೀಯನ್ನು ಫಲಾನುಭವಿಗಳಿಗೆ ಕೊಡಲಾಯ್ತು. ಹೊಲಿಗೆ ಯಂತ್ರ, ಲ್ಯಾಪ್ ಟಾಪ್ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಯ್ಯ, ಕಾರ್ಪೋರೇಟರ್ ಎಂ ಶಿವರಾಜು ಭಾಗಿಯಾಗಿದ್ರು.

ಸೌಮ್ಯಶ್ರೀ
KN_BNG_02_21_deputy_mayor_controversy_script_sowmya_7202707Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.