ETV Bharat / state

ಬಜೆಟ್​ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ: 82,443 ಕೋಟಿ ರೂ.ಗಳ ರಾಜಸ್ವ ಸಂಗ್ರಹದ ಗುರಿ - ಬಜೆಟ್​ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ

ಇಂದು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಾಣಿಜ್ಯ ತೆರಿಗೆ ಇಲಾಖೆಯಿಂದ 2020-21ನೇ ಸಾಲಿನಲ್ಲಿ 82,443 ಕೋಟಿ ರೂ.ಗಳ ರಾಜಸ್ವ ಸಂಗ್ರಹದ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

yadiyurappa
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
author img

By

Published : Mar 5, 2020, 5:37 PM IST

ಬೆಂಗಳೂರು : ವಾಣಿಜ್ಯ ತೆರಿಗೆ ಇಲಾಖೆಯಿಂದ 2020-21 ನೇ ಸಾಲಿನಲ್ಲಿ 82,443 ಕೋಟಿ ರೂ.ಗಳ ರಾಜಸ್ವ ಸಂಗ್ರಹದ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವಿಧಾನಸಭೆಯಲ್ಲಿ ಇಂದು ಬಜೆಟ್ ಪ್ರತಿಯನ್ನು ಓದಿದ ಅವರು, ದೇಶದ ಒಟ್ಟು ಸರಕು ಮತ್ತು ಸೇವಾ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಶೇ.14 ರಷ್ಟು ಬೆಳವಣಿಗೆ ದರ ಹೊಂದಿದೆ. ಆದರೂ ಜಿಎಸ್‍ಟಿಯಲ್ಲಿ ಉಂಟಾಗುವ ರಾಜಸ್ವ ಕೊರತೆ ಸರಿದೂಗಿಸಲು ನಷ್ಟ ಪರಿಹಾರ ಯೋಜನೆಯನ್ನು 2020ರ ನಂತರವೂ ಮುಂದುವರೆಸುವಂತೆ ಕೇಂದ್ರ ಸರ್ಕಾರ ಹಾಗೂ 15ನೇ ಹಣಕಾಸು ಆಯೋಗವನ್ನು ಕೋರುತ್ತಿರುವುದಾಗಿ ಹೇಳಿದರು.

ತೆರಿಗೆ ವಂಚಿಸುತ್ತಿರುವವರ ವಿರುದ್ಧ ವಾಣಿಜ್ಯ ತೆರಿಗೆ ಇಲಾಖೆ ತೀವ್ರ ತಪಾಸಣೆ, ನೋಂದಣಿ ನಂತರದ ಪರಿಶೀಲನೆ, ಜಾಗೃತಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ಬಾಕಿ ಇರುವ ಲೆಕ್ಕ ಪರಿಶೋಧನೆಗಳ ಕಾರ್ಯ ಕೂಡ ಕೈಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ 2019-20ನೇ ಸಾಲಿನಲ್ಲಿ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‍ಟಿ ಪ್ರೈಮ್ ಎಂಬ ದತ್ತಾಂಶ ವಿಶ್ಲೇಷಣಾ ವ್ಯವಸ್ಥೆ ಅಭಿವೃದ್ಧಿಪಡಿಸಿ ದೇಶದ ಇತರೆ ರಾಜ್ಯಗಳಲ್ಲೂ ಕೂಡ ಇದನ್ನು ಅನುಕರಿಸುತ್ತಿದೆ ಎಂದರು.

ಜಿಎಸ್‍ಟಿ ಸದೃಢಗೊಳಿಸುವ ಸಲುವಾಗಿ ವಾಣಿಜ್ಯ ತೆರಿಗೆ ಇಲಾಖೆಗಳನ್ನು ಪುನರಚರಿಸಲಾಗುತ್ತಿದೆ. ತೆರಿಗೆ ಆಡಳಿತದಲ್ಲಿ ವೃತ್ತಿಪರತೆಯನ್ನು ಉತ್ತೇಜಿಸಲು ಅಸಾಧಾರಣ ಸೇವೆ ಗುರುತಿಸಲು ಸೂಕ್ತ ಪ್ರಶಸ್ತಿ ಹಾಗೂ ಪುರಸ್ಕಾರ ಯೋಜನೆ ಆರಂಭಿಸಲಾಗುವುದು. ದೇಶ ಹಾಗೂ ಹೊರ ದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಸಾಮರ್ಥ್ಯ ಸಂವರ್ಧನ ಕಾರ್ಯಕ್ರಮಗಳನ್ನು ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದರು.

ಬಜೆಟ್​ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ ಹೀಗಿದೆ :

  • ಶಿಕ್ಷಣ ಇಲಾಖೆ - 29,768 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ - 27,952 ಕೋಟಿ ರೂ.
  • ಜಲಸಂಪನ್ಮೂಲ ಇಲಾಖೆ - 21,308 ಕೋಟಿ ರೂ.
  • ಇಂಧನ ಇಲಾಖೆ - 17,290 ಕೋಟಿ ರೂ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- 15,595 ಕೋಟಿ ರೂ.
  • ಕಂದಾಯ ಇಲಾಖೆ - 11,860 ಕೋಟಿ ರೂ.
  • ಲೋಕೋಪಯೋಗಿ ಇಲಾಖೆ - 11,463 ಕೋಟಿ ರೂ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- 10,122 ಕೋಟಿ ರೂ.
  • ಒಳಾಡಳಿತ ಮತ್ತು ಸಾರಿಗೆ ಇಲಾಖೆ - 10,108 ಕೋಟಿ ರೂ.
  • ಸಮಾಜ ಕಲ್ಯಾಣ ಇಲಾಖೆ - 9,444 ಕೋಟಿ ರೂ.
  • ಕೃಷಿ ಮತ್ತು ತೋಟಗಾರಿಕೆ ಇಲಾಖೆ - 7,889 ಕೋಟಿ ರೂ.
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ - 4,650 ಕೋಟಿ ರೂ.
  • ವಸತಿ ಇಲಾಖೆ - 2,971 ಕೋಟಿ ರೂ.
  • ಆಹಾರ ನಾಗರೀಕ ಸರಬರಾಜು ಇಲಾಖೆ - 2,68 ಕೋಟಿ ರೂ.
  • ಇತರೆ - 84,023 ಕೋಟಿ ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.